Advertisement

ಕೋಡಿಮಠ ಶ್ರೀಗಳಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್‌

12:30 AM Feb 16, 2019 | Team Udayavani |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳಿಗೆ ಶುಕ್ರವಾರ ನಡೆದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು.

Advertisement

ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ| ಜೋಗನ್‌ ಶಂಕರ್‌ ಅವರು ಶ್ರೀಗಳಿಗೆ ಪದವಿ ಪ್ರದಾನ ಮಾಡಿ ಸನ್ಮಾನಿಸಿದರು. ಗೌರವ ಡಾಕ್ಟರೇಟ್‌ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗೌರವ ಡಾಕ್ಟರೇಟ್‌ ಮಠ ಮತ್ತು ಪರಂಪರೆಗೆ ಸಲ್ಲಬೇಕೆ ಹೊರತು ತಮಗಲ್ಲ. ಮಠದ ಪ್ರತಿನಿ ಧಿಯಾಗಿ ತಾವು ಕೆಲಸ ಮಾಡಿದ್ದೇವೆ. ಸಮಸ್ತ ಮನುಕುಲಕ್ಕೆ ಸಲ್ಲಬೇಕು ಎಂದರು.

ಮುಖ್ಯ ಅತಿಥಿ ಎಸ್‌.ಸಿ. ಶರ್ಮಾ, ಕುಲಸಚಿವ ಪ್ರೊ| ಎಚ್‌.ಎಸ್‌. ಭೋಜ್ಯಾನಾಯ್ಕ, ಪರೀಕ್ಷಾಂಗ  ಕುಲಸಚಿವ ಪ್ರೊ|ರಾಜಾ ನಾಯಕ್‌ ಇದ್ದರು. ಕುಲಾ ಧಿಪತಿಗಳೂ ಆದರಾಜ್ಯಪಾಲ ವಜೂಬಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next