Advertisement

ಇಂಗ್ಲಿಷ್‌ ಹೇರಿಕೆ ಬೇಡ ಎಂದಿದ್ರು ಕುವೆಂಪು

04:16 PM Sep 24, 2022 | Team Udayavani |

ಸೇಡಂ: ಇಂಗ್ಲಿಷ್‌ ಭಾಷೆ ಬಗ್ಗೆ ಆರಂಭದ ದಿನಗಳಲ್ಲಿ ಪ್ರೀತಿ ಹೊಂದಿದ್ದ ಕುವೆಂಪು ಅವರು ತಮ್ಮ 18ನೇ ವಯಸ್ಸಿನಲ್ಲೇ ಇಂಗ್ಲಿಷ್‌ ಪುಸ್ತಕವೊಂದನ್ನು ಪ್ರಕಟಿಸಿದ್ದರು ಎಂದು ದೊಡ್ಡಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ|ಆನಂದ ಸಿದ್ಧಾಮಣಿ ಹೇಳಿದರು.

Advertisement

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ “ಜ್ಞಾನಪೀಠ ಗಾರುಡಿಗರು’ ಉಪನ್ಯಾಸ ಮಾಲಿಕೆಯಲ್ಲಿ ಕುವೆಂಪು ಕುರಿತು ಅವರು ಉಪನ್ಯಾಸ ನೀಡಿದರು.

ಕುವೆಂಪು ಪ್ರೌಢ ಶಾಲೆ ಹಂತದಲ್ಲಿ ಇರುವಾಗಲೇ ಸಾಹಿತ್ಯದ ಬಗ್ಗೆ ಒಲವು ತೋರಿದ್ದರು. ಆಂಗ್ಲ ಭಾಷೆ ಮೇಲೆ ಅಪಾರ ಪ್ರೀತಿ ಹೊದ್ದಿದ್ದ ಅವರು ತಮ್ಮ ನೆಚ್ಚಿನ ಗುರುಗಳ ಮಾತಿನಿಂದ ಪ್ರೇರೇಪಿತರಾಗಿ ಕನ್ನಡ ಭಾಷೆಯ ಅತಿ ದೊಡ್ಡ ವಿದ್ವಾಂಸರಾಗಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದರು. ರಾಮಕೃಷ್ಣ ಆಶ್ರಮದ ನಂಟು ಹೊಂದಿದ್ದ ಕುವೆಂಪು ಅನೇಕ ಸಾಧು, ಸಂತರ ಜತೆ ತಮ್ಮ ವಿಚಾರಧಾರೆ ಹಂಚಿಕೊಳ್ಳುತ್ತಿದ್ದರು ಎಂದರು.

ಕುವೆಂಪು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದು ವಿಶ್ವ ವಿದ್ಯಾಲಯದ ಸೌಭಾಗ್ಯ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಕುವೆಂಪು ಇಂಗ್ಲಿಷ ಭಾಷೆ ದ್ವೇಷಿಸಲಿಲ್ಲ. ಬದಲಿಗೆ ಬಲವಂತವಾಗಿ ಮಕ್ಕಳಿಗೆ ಹೇರಬೇಡಿ ಎಂದು ಪ್ರತಿಪಾದಿಸಿದ್ದರು. ಮಾತೃ ಭಾಷೆ¿ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಮಾತೃ ಭಾಷೆ ಉಳಿದರೆ ಮಾತ್ರ ದೇಶದ ಸಂಸ್ಕೃತಿ ಉಳಿಯುತ್ತದೆ ಎಂದಿದ್ದರು ಎಂದು ಹೇಳಿದರು.

ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ|ಸದಾನಂದ ಬೂದಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯ ಸಹಕಾರ ಇರುತ್ತದೆ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಿಸುವಂತೆ ಮಾಡಬೇಕು ಎಂದು ಹೇಳಿದರು.

Advertisement

ಈ ವೇಳೆ “ಅವ್ವ’ ಪ್ರಶಸ್ತಿ ಪಡೆದ ಸಾಹಿತಿ ಸಿದ್ಧಪ್ಪ ತಳ್ಳಳ್ಳಿ ಅವರನ್ನು ಸತ್ಕರಿಸಲಾಯಿತು. ಕಸಾಪ ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್‌, ಮಾತೃಛಾಯಾ ಕಾಲೇಜಿನ ಪ್ರಾಚಾರ್ಯ ಚನ್ನಬಸ್ಸಪ್ಪ ಗವಿ, ಕಪಾಸ ಗೌರವ ಸಲಹೆಗಾರ ಶರಣಪ್ಪ ಕೊಳ್ಳಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಡಾ|ಮುರಳಿಧರ ದೇಶಪಾಂಡೆ, ಉಪನ್ಯಾಸಕ ಜಗದೀಶ ಕಡಬಗಾಂವ, ರಾಮಚಂದ್ರ ಜೋಶಿ, ಶಿವಲೀಲಾ ತೋಟದ, ಬಸಮ್ಮ ಪಾಟೀಲ, ರಮೇಶ ರಾಠೊಡ, ಪ್ರಕಾಶ ಗೊಣಗಿ, ಜನಾರ್ಧನರೆಡ್ಡಿ ತುಳೇರ, ಶಶಿಕಾಂತ ಬೆಡಸೂರ, ಲಕ್ಷ್ಮೀನಾರಾಯಣ ಚಿಮ್ಮನಚೋಡಕರ್‌, ಸಂದೀಪ ಪ್ಯಾಟಿ, ಶಿವಾರೆಡ್ಡಿ ಗೌಡನಹಳ್ಳಿ, ವೀರಭದ್ರಯ್ಯಸ್ವಾಮಿ, ವಿಶ್ವನಾಥ ಕೋರಿ, ಇನಾಯತ್‌ ರುದ್ನೂರ ಇನ್ನಿತರರಿದ್ದರು. ವಿರೇಂದ್ರ ಭಂಟನಹಳ್ಳಿ ಪ್ರಾರ್ಥಿಸಿದರು. ಮಾತೃಛಾಯಾ ಕಾಲೇಜಿನ ಪ್ರಾಚಾರ್ಯ ಚನ್ನಬಸಪ್ಪ ಗವಿ ಸ್ವಾಗತಿಸಿದರು, ರಾಚಣ್ಣ ಬಳಗಾರ ನಿರೂಪಿಸಿದರು, ರಾಜು ಚೆನ್ನೀರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next