Advertisement
ಶುಕ್ರವಾರ ನಗರದ ಎಸ್.ಎಸ್.ನಂದಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಈ ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎನ್ನುವ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು, ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಕುವೆಂಪು ಅವರಿಗೆ ಶ್ರೀ ಸಾಮಾನ್ಯರಿಂದ ಸಿಕ್ಕಿದೆ ಎಂದರು.
ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಜೀವನದಲ್ಲಿ
ಅಳವಡಿಸಿಕೊಳ್ಳಬೇಕೆಂದರು. ಎಸ್.ಎಸ್.ನಂದಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಧಿರ ಕುಲಕರ್ಣಿ ಮಾತನಾಡಿ, ಈ ನಾಡಿನ ಸಾಹಿತ್ಯದ ಲೋಕವನ್ನು ಶ್ರೀಮಂತಗೊಳಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಕನ್ನಡ ಭಾಷೆ ಹಾಗೂ ಈ ನೆಲದ ಬಗ್ಗೆ ಕುವೆಂಪು ಅಪಾರ ಅಭಿಮಾನ ಹೊಂದಿದ್ದರು ಎಂದರು.ಶಿಕ್ಷಕರಾದ ರಮೇಶ ಜೋಗದನಕರ್, ಗೀತಾ ಪುಂಡಲಿಕ, ರೋಸ್‌ಲಿನ್, ವೀರಯ್ಯ ಹಿರೇಮಠ, ಸೂಗಯ್ಯ ಘಂಟಿಮಠ, ರಮೇಶ ಮಹೇಂದ್ರಕರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.