Advertisement

ಕುವೆಂಪು ಮಹಾಮಾನವತಾವಾದಿ; ಹೊಳಬಸು ಶೆಟ್ಟರ

03:45 PM Oct 25, 2022 | Team Udayavani |

ಗುಳೆದಗುಡ್ಡ: ಕುವೆಂಪು ಕೇವಲ ಪದಗಳನ್ನು ಬಳಸಿ ಸಾಹಿತ್ಯ ರಚಿಸದೇ ಇಡೀ ಮನುಕುಲಕ್ಕೆ ಒಳಿತನ್ನು ಬಯಸುವ ಮಾನವತಾವಾದ ಅರಿವನ್ನು ಮೂಡಿಸಿದ ಮಹಾ ಮಾನವತಾವಾದಿ ಎಂದು ಇಲ್ಲಿನ ಹೊಳೆ ಹುಚ್ಚೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ ಹೆಳಿದರು .

Advertisement

ಅವರು ಪಟ್ಟಣದ ಸೈಂಟ್‌ ಝೇವಿಯರ್ ಪ್ರೌಢಶಾಲಾ ಸಭಾ ಭವನದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕು ಘಟಕ ಗುಳೇದಗುಡ್ಡ ಮತ್ತು ಸೈಂಟ್‌ ಝೇವಿಯರ್‌ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಸಾಹಿತ್ಯಾಧ್ಯಯನ ಕಮ್ಮಟ ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರು ತಮ್ಮ ಇಡೀ ಸಾಹಿತ್ಯದ್ದುಕ್ಕೂ ಕನ್ನಡ ಭಾಷೆಯ ಶ್ರೀಮಂತಿಕೆಗಾಗಿ ಶ್ರಮಪಟ್ಟವರು.

ಈ ನಾಡಿನ ಶ್ರೇಷ್ಟ ಸಾಹಿತಿಯಾಗಿದ್ದೂ, ಕೃತಿಗಳಲ್ಲಿರುವಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಸಂದೇಶಗಳ ಮಾರ್ಗದಲ್ಲಿ ನಡೆಯಬೇಕು ಎಂದರು. ಫಾದರ್‌ ಹ್ಯಾರಿ ರಾಬರ್ಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಅವರು ಮಲೆನಾಡಿನ ಪರಿಸರದಲ್ಲಿ ಜನಿಸಿದ್ದರಿಂದ ಆ ಪರಿಸರದ ಸೂಕ್ಷ್ಮತೆ ಅವರ ಸಾಹಿತ್ಯದಲ್ಲಿ ಕಾಣಬಹುದು. ರಾಮಾಯಣ ದರ್ಶನಂ ಕಾವ್ಯ, ಸಾಹಿತ್ಯದಲ್ಲಿ ಶ್ರೇಷ್ಟ ಕೃತಿಯಾಗಿದ್ದೂ, ಅದರಲ್ಲಿ ಜೀವನ ದರ್ಶನ ಇದೆ. ಪರಿಸರದ ಪರಿಪೂರ್ಣ ಅನುಭವ, ಅನುಭಾವ ಅವರ ಸಾಹಿತ್ಯ ಕೃತಿಗಳಲ್ಲಿದೆ ಎಂದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಸಮಕಾರ್ಯದರ್ಶಿಗಳಾದ ಕಡಿದಾಳ್‌ ಪ್ರಕಾಶ್‌ ಮಾತನಾಡಿ, ಕುವೆಂಪು ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಖಜಾಂಚಿ ದೇವಂಗಿ ಮನುದೇವ ಉಪಸ್ಥಿತರಿದ್ದರು. ಸಂಚಾಲಕರಾದ ಡಾ| ಗುರುಪಾದ ಮರಿಗುದ್ದಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ. ಗೌರವ ಕಾರ್ಯದರ್ಶಿ ಡಾ| ಚಂದ್ರಶೇಖರ ಕಾಳನ್ನವರ, ಗೌರವ ಕೋಶಾಧ್ಯಕ್ಷ ಡಾ.ಸಿ.ಎಮ್‌. ಜೋಶಿ, ಕಸಾಪ ತಾಲೂಕ ಘಟಕದ ಅಧ್ಯಕ್ಷ ಡಾ. ಎಚ್‌.ಎಸ್‌. ಘಂಟಿ, ತಾಲೂಕ ಕಸಾಪ ಕಾರ್ಯದರ್ಶಿ ಈರಣ್ಣ ಅಲದಿ, ಯಲ್ಲಪ್ಪ ಮನ್ನಿಕಟ್ಟಿ, ವಿಠuಲ್‌ಸಾ ಬದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next