Advertisement

ಕುವೆಂಪು ಎಲ್ಲ ಕಾಲಕ್ಕೂ ಪ್ರಸ್ತುತ

03:15 PM Dec 30, 2020 | Team Udayavani |

ತುಮಕೂರು: ಮನುಜ ಮತ ವಿಶ್ವಪಥ ತತ್ವವನ್ನು ಸಾರಿದ ಮೊದಲ ವ್ಯಕ್ತಿ ಕುವೆಂಪು. ಅಂಬೇಡ್ಕರ್‌, ಗಾಂಧೀಜಿ, ಗೋಖಲೆ, ಬುದ್ಧ, ಬಸವಣ್ಣನವರ ಸಾಲಿಗೆ ಸೇರುವ ವ್ಯಕ್ತಿ. ಅವರು ಎಲ್ಲೆಡೆಯೂ ಎಲ್ಲಾ ಕಾಲದಲ್ಲೂ ಪ್ರಸ್ತುತ ಎನಿಸುತ್ತಾರೆ ಎಂದು ತುಮಕೂರು ವಿವಿ ಕುಲಪತಿ ಕರ್ನಲ್‌ ಪ್ರೊ ವೈ.ಎಸ್‌ ಸಿದ್ದೇಗೌಡ ತಿಳಿಸಿದರು.

Advertisement

ತುಮಕೂರು ವಿವಿ ಕುವೆಂಪು ಅಧ್ಯಯನ ಪೀಠ ಮಂಗಳವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆಯ ಅಂತರ್ಜಾಲಉಪನ್ಯಾಸ ಮಾಲಿಕೆ ಯನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಅಸ್ಮಿತೆಯನ್ನು ಕಾಪಾಡುವುದಕ್ಕಾಗಿ ಯಾವುದೆಲ್ಲಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಕುವೆಂಪುಸ್ಪಷ್ಟವಾಗಿ ಹೇಳಿದ್ದಾರೆ. ಅವರ ನಿರ್ದೇಶನಗಳನ್ನು ಅನುಸರಿಸಿದರೆಸುಖೀಸಮಾಜದ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಕುವೆಂಪು ಅವರ ಲೇಖನಮಾರ್ಗ ಕುರಿತು ಉಪನ್ಯಾಸ ನೀಡಿದ ಹಿರಿಯ ವಿಮರ್ಶಕ ಎಚ್‌. ಎಸ್‌ ರಾಘವೇಂದ್ರ ರಾವ್‌, ಅಧ್ಯಾತ್ಮ,ಧರ್ಮ, ತತ್ವಶಾಸ್ತ್ರ ಯಾವುದನ್ನೂ ನಿರಾಕರಿಸದೇ ನೂರು ದೇವರನೆಲ್ಲಾ ನೂಕಾಚೆ ದೂರ, ತಾಯಿ ಭಾರತಾಂಬೆಯೇ ನಮ್ಮ ದೇವರು ಎಂದವರು ಕುವೆಂಪು ಎಂದು ವಿಶ್ಲೇಷಿಸಿದರು.

ತುಮಕೂರು ವಿವಿ ಕುಲಸಚಿವ ನರಸಿಂಹಪ್ಪ, ಕುವೆಂಪು ಅಧ್ಯಯನ ಪೀಠದ ಸಂಯೋಕಜಕಿ ಡಾ. ಗೀತಾ ವಸಂತ ಉಪಸ್ಥಿತರಿದ್ದರು.

ಕುವೆಂಪು ತತ್ವಾದರ್ಶ ಪಾಲಿಸಿ: ಡೀಸಿ :

Advertisement

ತುಮಕೂರು: ವಿಶ್ವ ಮಾನವ ಕುವೆಂಪು ಅವರ ತತ್ವಾದರ್ಶ ವನ್ನು ಪ್ರತಿಯೊಬ್ಬರು ಪಾಲಿಸಬೇಕೆಂದುಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವಮಾನವ ದಿನಾಚರಣೆ ಯ ಅಂಗವಾಗಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕುವೆಂಪು ಅವರು ನಾಡು ಕಂಡ ಶ್ರೇಷ್ಠಕವಿ, ಜ್ಞಾನಪೀಠಪಡೆದವರಲ್ಲಿ ಮೊದಲಿಗರು ಅವರಸಾಹಿತ್ಯವನ್ನು ಪ್ರತಿಯೊಬ್ಬರೂ ಓದಲೇಬೇಕು ಎಂದರು.

ಪಾಲಿಕೆ ಆಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್‌, ಪಿಡಬ್ಲ್ಯೂಡಿ ಇಂಜಿನಿಯರ್‌ ಸಂಜೀವ್‌ರಾಜ್‌, ಸೇರಿದಂತೆಮತ್ತಿತರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next