Advertisement
ಜಿಲ್ಲೆಯಲ್ಲಿ 355 ಆಯುಷ್ಮಾನ್ ಆರೋಗ್ಯ ಮಂದಿರಗಳಿದ್ದು ಈಗಾಗಲೇ ರಾಜ್ಯಮಟ್ಟದಲ್ಲಿ ಉತ್ತಮ ಗುಣಮಟ್ಟದ ಸೇವೆ ಕೊಡುವಲ್ಲಿ ರಾಜ್ಯ ತನಿಖಾ ತಂಡದಿಂದ ಕುತ್ತೆತ್ತೂರು ಆಯುಷ್ಮಾನ್ ಆರೋಗ್ಯ ಮಂದಿರ ಮೊದಲಾಗಿ ಆಯ್ಕೆಯಾಗಿತ್ತು. ಇದರ ಜತೆ ಬಂಟ್ವಾಳದ ಆರಳ ಆಯುಷ್ಮಾನ್ ಆರೋಗ್ಯ ಮಂದಿರವೂ ಆಯ್ಕೆಯಾಗಿದೆ. ಇದೀಗ ರಾಷ್ಟಮಟ್ಟದಲ್ಲಿ ಮೌಲ್ಯಮಾಪನ ನಡೆಸಲು ಕೇಂದ್ರಿಯ ವೈದ್ಯಕೀಯ ತಂಡ ಪ್ರಥಮವಾಗಿ ಕುತ್ತೆತ್ತೂರಿಗೆ ಆಗಮಿಸಿದೆ.
ಆರೋಗ್ಯ ಮಂದಿರದಲ್ಲಿ ನಡೆಯುತ್ತಿರುವ ಸೇವಾ ಶುಶ್ರೂಷೆ, ಸಾಮೂಹಿಕ ಆರೋಗ್ಯ ಕಾಳಜಿ ಸಹಿತ 12 ವೈದ್ಯಕೀಯ ಸೇವೆಗಳ ಬಗ್ಗೆ ಈ ತಂಡ ಮಾಹಿತಿ ಪಡೆಯಲಿದೆ. ಬಾಲ್ಯ ಮತ್ತು ಹದಿಹರೆಯದವರ ಆರೋಗ್ಯ ಸೇವೆಗಳು, ನವಜಾತ ಶಿಶುಗಳು ಮತ್ತು ಶಿಶುಗಳ ಆರೋಗ್ಯ, ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಿ ಕಾಳಜಿ, ಕುಟುಂಬ ಯೋಜನೆ, ಗರ್ಭನಿರೋಧಕ ಸೇವೆ ಮತ್ತು ಇತರ ಸಂತಾನೋತ್ಪತ್ತಿ, ತುರ್ತು ವೈದ್ಯಕೀಯ ಸೇವೆ, ಆಸಾಂಕ್ರಾಮಿಕ ರೋಗಗಳ ತಪಾಸಣೆ ತಡೆಗಟ್ಟುವಿಕೆ ನಿಯಂತ್ರಣ, ಸಾಮಾನ್ಯ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಮತ್ತು ತೀವ್ರವಾದ ಸರಳ ಕಾಯಿಲೆ ಮತ್ತು ಸಣ್ಣ ಕಾಯಿಲೆಗಳಿಗೆ ಹೊರರೋಗಿಗಳ ಆರೈಕೆ, ಮಾನಸಿಕ ಆರೋಗ್ಯ ಕಾಯಿಲೆಗಳ ತಪಾಸಣೆ ಮತ್ತು ಅಗತ್ಯ ಸೇವೆಗಳ ನಿರ್ವಹಣೆ, ಹಲ್ಲುಗಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಕಟ್ಟಡ, ಅವರಣಗೋಡೆ ಸ್ವತ್ಛತೆ, ಜನರಿಗೆ ಸೇವೆ, ತಾಜ್ಯ ವಿಲೇವಾರಿ, ತಾಯಿ ಮತ್ತು ಮಗುವಿನ ಆರೈಕೆ, ಬಾಣಂತಿ ಆರೈಕೆ, ಅಸಾಂಕ್ರಾಮಿಕ ರೋಗಗಳಾದ ಬಿಪಿ, ಶುಗರ್, ಕ್ಯಾನ್ಸರ್ ಪತ್ತೆ ಹಚ್ಚುವ ವಿಷಯದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ನಿರ್ವಹಿಸುತ್ತಿರುವ ಪಾತ್ರವನ್ನು ಪರಿಶೀಲಿಸಲಿರುವ ಈ ತಂಡವು ಅಂಕವನ್ನು ನೀಡುತ್ತಿದೆ. ಇದೇ ಆದಾರದಲ್ಲಿ ಈ ಕೇಂದ್ರವು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿದ್ದು ಇದೀಗ ರಾಷ್ಟ್ರಮಟ್ಟದಲ್ಲೂ ಅನುದಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಈ ತಂಡವು ವಿವಿಧ ಸೇವೆಗಳ ಬಗ್ಗೆ ಪರಿಶೀಲನೇ ನಡೆಸಿ ಅಂಕ ನೀಡುತ್ತದೆ. ಒಟ್ಟಾರೆ 120 ಅಂಕದಲ್ಲಿ ಶೇ. 70ಕ್ಕಿಂತ ಹೆಚ್ಚು ಸಿಕ್ಕಿದರೆ ಈ ಆರೋಗ್ಯ ಮಂದಿರಕ್ಕೆ ವಾರ್ಷಿಕವಾಗಿ ಅನುದಾನ ಬರುತ್ತದೆ.
Related Articles
Advertisement