ಕುಂದಗೋಳ: ನಮ್ಮ ಯಜಮಾನರು ಈ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಗಳೇ ನನಗೆ ಶ್ರೀರಕ್ಷೆಯಾಗಲಿದ್ದು, ನನ್ನ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹೇಳಿದರು.
ಕವಿತಾ ಸೊಟ್ಟಮ್ಮನವರ, ಶಾಂತಾ ಶಿವಳ್ಳಿ, ನಿಂಗಮ್ಮ ಸಂಶಿ, ಬೀಬಿಜಾನ ನದಾಫ್, ಈರಮ್ಮ ಬಾರಕೇರ, ದಾಕ್ಷಾಯಿಣಿ ಕೊಪ್ಪದ ಇದ್ದರು.
Advertisement
ತೀರ್ಥ ಹಾಗೂ ಬೆಳ್ಳಿಗಟ್ಟಿ ಗ್ರಾಮದಲ್ಲಿ ಗುರುವಾರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿ, ಬಡಜನತೆಗಾಗಿ ಹಾಗೂ ನಮ್ಮ ಕ್ಷೇತ್ರಾಭಿವೃದ್ಧಿಗೆ ನಮ್ಮ ಮನೆಯವರು ಸಾಕಷ್ಟು ಕೆಲಸ-ಕಾರ್ಯ ಮಾಡಿದ್ದಾರೆ. ಅವರ ಹಾದಿಯೇ ನನಗೆ ರಾಜಕೀಯ ಕನ್ನಡಿಯಾಗಿದೆ. ನಮ್ಮ ಮತಕ್ಷೇತ್ರಕ್ಕೆ ಬೇಕಾದ ಹಲವಾರು ಯೋಜನೆಗಳ ಬಗ್ಗೆ ನಾನು ತಿಳಿದುಕೊಂಡಿದ್ದು, ಆ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕೈಗೂಡುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆಯಾಸದಿಂದ ಬಳಲಿದ ಕುಸುಮಾ; ಚಿಕಿತ್ಸೆ ನಂತರ ಮರಳಿ ಪ್ರಚಾರ ಕಣಕ್ಕೆ
ಹುಬ್ಬಳ್ಳಿ: ಬಿಡುವಿಲ್ಲದ ಉಪ ಚುನಾವಣೆ ಪ್ರಚಾರ ಕಾರ್ಯದಿಂದ ಬಳಲಿದ್ದ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರು ಗುರುವಾರ ಬೆಳಗ್ಗೆ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆದು ಪ್ರಚಾರಕ್ಕೆ ತೆರಳಿದರು. ಕಳೆದ ಎರಡು ವಾರದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರು ಸಾಕಷ್ಟು ಸುಸ್ತಾಗಿದ್ದರು. ಬುಧವಾರ ಒಂದೇ ದಿನ ಆರು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದರಿಂದ ಸಾಕಷ್ಟು ನಿತ್ರಾಣಗೊಂಡಿದ್ದರು. ಹೀಗಾಗಿ ಗುರುವಾರ ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ತೆಗೆದುಕೊಂಡರು. ಒಂದು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಗುರುವಾರ ಸಂಜೆ ನಂತರ ಬೆಟದೂರು, ನೆರ್ತಿಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.