ಬೆಂಗಳೂರು: ವಿಜಯಾ ಬ್ಯಾಂಕ್ ಅಧ್ಯಕ್ಷರಾಗಿದ್ದ ದಿವಂಗತ ಮುಲ್ಕಿ ಸುಂದರ್ರಾಮ್ ಶೆಟ್ಟಿಯವರ ಧರ್ಮಪತ್ನಿ,
ಶತಾಯುಷಿ ಕುಸುಮಾವತಿ ಸುಂದರ್ರಾಮ್ ಶೆಟ್ಟಿ (103) ಬುಧವಾರ ನಗರದಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಬೊಮ್ಮರ ಬೆಟ್ಟು ಬೀಡಿನ ಕುಸುಮಾವತಿ ಅವರು, ವಯೋಸಹಜ
ಸಮಸ್ಯೆಯಿಂದ ಬುಧವಾರ ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿಲ್ಸನ್ ಗಾರ್ಡನ್ನಲ್ಲಿರುವ ರುದ್ರ ಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಒಬ್ಬ ಪುತ್ರ ಹಾಗೂ ಪುತ್ರಿ ಈ ಹಿಂದೆಯೇ ನಿಧನರಾಗಿದ್ದಾರೆ. 1915ರ ಜೂನ್ 6ರಂದು ಜನಿಸಿದ ಅವರು ತಿಂಗಳ ಹಿಂದಷ್ಟೇ 103 ವರ್ಷ ಪೂರೈಸಿದ ಸಂಭ್ರಮ ಆಚರಿಸಿದ್ದರು. ಸುಂದರ್ರಾಮ್ ಶೆಟ್ಟಿ ಅವರು 1981ರಲ್ಲಿ ಇಹಲೋಕ ತ್ಯಜಿಸಿದ್ದರು. ಸುಂದರ್ರಾಮ್ ಶೆಟ್ಟಿ ಹಾಗೂ ಕುಸುಮಾವತಿ ಅವರ ವಿವಾಹವು 1937ರಲ್ಲಿ ನೆರವೇರಿತ್ತು. ಆರಂಭದ ದಿನಗಳಲ್ಲಿ ಮುಂಬೈನಲ್ಲಿದ್ದ ದಂಪತಿ, 1950-60ರ ದಶಕದಲ್ಲಿ ಉದ್ಯೋಗ ನಿಮಿತ್ತ
ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು.