Advertisement

PM Kusum Scheme: ಮೆಸ್ಕಾಂನಲ್ಲಿ 2,500 ಅರ್ಜಿ ನೋಂದಣಿ

01:40 AM Aug 30, 2024 | Team Udayavani |

ಮಂಗಳೂರು: ನೀರಾವರಿಗೆ ಸಾಂಪ್ರದಾ ಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್‌ ಯೋಜನೆಗೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ವ್ಯಾಪ್ತಿಯಲ್ಲಿ ಆ.20ರ ವರೆಗೆ 2,500 ಅರ್ಜಿಗಳು ಸಲ್ಲಿಕೆಯಾಗಿವೆ.

Advertisement

ವಿದ್ಯುತ್‌ ಜಾಲದಿಂದ 500 ಮೀ.ಗಿಂತ ಹೆಚ್ಚು ದೂರ ವಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ಪಂಪ್‌ಸೆಟ್‌ ಅಳವಡಿಸಲು ಪಿಎಂ-ಕುಸುಮ್‌ ಯೋಜನೆಯಡಿ ಸಹಾಯಧನವನ್ನು ರಾಜ್ಯ ಸರಕಾರವು ಶೇ. 30 ರಿಂದ ಶೇ. 50 ಕ್ಕೆ ಹೆಚ್ಚಿಸಿದೆ. ಕೇಂದ್ರ ಸರಕಾರ ಶೇ. 30 ಹಾಗೂ ರೈತರು ಕೇವಲ ಶೇ. 20 ವಂತಿಗೆ ಭರಿಸಬೇಕಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿ ವೃದ್ಧಿ ನಿಗಮ(ಕೆಆರ್‌ಇಡಿಎಲ್‌) ಯೋಜನೆಯ ಅನು ಷ್ಠಾನದ ಹೊಣೆ ಹೊತ್ತಿದ್ದು, ರೈತರು ಸೌರಚಾಲಿತ ಪಂಪ್‌ಸೆಟ್‌ ಬಳಸಿದರೆ ಸಾಂಪ್ರದಾಯಿಕ ವಿದ್ಯುತ್ತಿನ ಮೇಲಿನ ಅವಲಂಬನೆ ಆಗಬೇಕಿಲ್ಲ. ಇಂಥ ಸೋಲಾರ್‌ ಪಂಪ್‌ಗ್ಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ನಿರ್ವಹಿಸುವರು. ರೈತರಿಗೆ ಸೌರ ಫಲಕಗಳು, ಸಬ್‌ಮ ರ್ಸಿಬಲ್‌/ಸರ್ಫೆಸ್‌ ಡಿಸಿ ಪಂಪ್‌ಗಳು, ಮೌಂಟಿಂಗ್‌ ಸ್ಟ್ರಕ್ಚರ್‌, ಪ್ಯಾನಲ್‌ ಬೋರ್ಡ್‌, ಪೈಪ್‌ ಮತ್ತು ಕೇಬಲನ್ನು ಪೂರೈಸಲಾಗುತ್ತದೆ. ಸೌರ ಪಂಪ್‌ಸೆಟ್‌ ಬಳಕೆ ಯಿಂದ 8 ಗಂಟೆಗಳ ಕಾಲ ಹಗಲಿನಲ್ಲಿ ವಿದ್ಯುತ್‌ ಪೂರೈಕೆಯಾಗಲಿದೆ.

ಇದರಿಂದ ರಾತ್ರಿ ವೇಳೆ ರೈತರು ಕೃಷಿ ಚಟುವಟಿಕೆ ಗಳಿಗೆ ಪರದಾಡಬೇಕಿಲ್ಲ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ ತಿಳಿಸಿದ್ದಾರೆ. ರೈತರು ತಮ್ಮ ಆಧಾರ್‌, ಆರ್‌ಟಿಸಿ ಮತ್ತು ಬ್ಯಾಂಕ್‌ ವಿವರಗಳೊಂದಿಗೆ ಆನ್‌ಲೈನ್‌ ಪೋರ್ಟಲ್‌ https://souramitra.com ನಲ್ಲಿ ನೋಂದಾಯಿಸಬಹುದು.

ಕುಸುಮ್‌ ಸಿ
ಕುಸುಮ್‌ ಸಿ ಯೋಜನೆಯಡಿ ಫೀಡರ್‌ ಮಟ್ಟದ ಸೋಲಾರ್‌ ಮೂಲಕ ರೈತರ ಹಾಲಿ ಪಂಪ್‌ಸೆಟ್‌ ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್‌ ಸರಬರಾಜು ಮಾಡಲಾ ಗುವುದು. ಪ್ರತ್ಯೇಕ ಸೋಲಾರ್‌ ಪಂಪ್‌ಗ್ಳ ಬದಲಿಗೆ ಕೃಷಿ ಫೀಡರ್‌ಗಳನ್ನು ಸೌರೀಕರಣಗೊಳಿಸುವ ಯೋಜನೆ ಇದು. ಐಪಿ ಸೆಟ್‌ಗಳಿಗೆ ಸೌರವಿದ್ಯುತ್‌ ಮೂಲದಿಂದ ವಿದ್ಯುತ್‌ ಪೂರೈಸಲಾಗುವುದು. ಸ್ಥಳೀ ಯವಾಗಿ ವಿದ್ಯುತ್‌ ಉತ್ಪಾದನೆ ಹೆಚ್ಚುವುದರಿಂದ ರೈತರ ಅಗತ್ಯಕ್ಕೆ ತಕ್ಕಂತೆ ಹಗಲು ವಿದ್ಯುತ್‌ ಪೂರೈಸಲು ಸಾಧ್ಯವಾಗಲಿದೆ.

Advertisement

ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ 118 ಎಕ್ರೆ ಸರಕಾರಿ ಹಾಗೂ 70 ಎಕ್ರೆ ಖಾಸಗಿ ಜಮೀನನ್ನು ಸೌರಶಕ್ತಿ ಯೋಜ ನೆಗೆ ಗುರುತಿಸಿದ್ದು, ಅಂದಾಜು 40 ಮೆ. ವ್ಯಾ. ಸೌರಶಕ್ತಿ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next