Advertisement

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

07:39 PM Nov 29, 2021 | Team Udayavani |

ಶ್ರೀರಂಗಪಟ್ಟಣ : ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಗ್ರಾಮದೇವತೆ ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಜಾತ್ರಾ ಮೈದಾನದಲ್ಲಿ ಏರ್ಪಡಿಸಿದ ನಾಡಕುಸ್ತಿ ಪಂದ್ಯಾವಳಿಗೆ ದೊಡ್ಡ ಯಜಮಾನ್ ಶ್ರೀನಿವಾಸೇಗೌಡ ಚಾಲನೆ ನೀಡಿದರು.

Advertisement

ಕುಸ್ತಿಪಟುಗಳು ಹೆಚ್ಚು ಹೆಚ್ಚು ದೈಹಿಕ ಕಸರತ್ತು ನಡೆಸುವ ಮೂಲಕ ತಮ್ಮ ದೇಹವನ್ನು ಹತೋಟಿಯಲ್ಲಿಟ್ಟುಕೊಳ್ಳುವುದರ ಜೊತೆಗೆ, ದೇಹದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಪ್ರತಿ ವರ್ಷದಂತೆ ಈ ಬಾರಿಯು ಬೆಳಗೊಳದ ಗ್ರಾಮಸ್ಥರಿಂದ ದೇವಾಲಯದ ಆವರಣದಲ್ಲಿ ಕುಸ್ತಿ ಪಂದ್ಯ ಜರುಗುತ್ತಿದ್ದು ಹಳೆ ಮೈಸೂರು ಭಾಗಕ್ಕೆ ಕುಸ್ತಿಗೆ ಹೆಸರುವಾಸಿಯಾಗಿರುವ ಈ ಭಾಗದಲ್ಲಿ ಹಬ್ಬದದಿನಗಳು ನಡೆದರೆ ಕುಸ್ತಿಗೆ ಮಹತ್ವ ನೀಡುವುದು ಇಲ್ಲಿನ ವಿಶೇಷತೆಯನ್ನು ಎದ್ದು ತೋರಿಸುತ್ತದೆ ಎಂದರು.

ಈ ಬಾರಿ ಗ್ರಾಮಸ್ಥರು 25ಕ್ಕೂ ಹೆಚ್ಚು ಕಾಟಾ ಕುಸ್ತಿಗಳನ್ನು ಬಲಮುರಿ ದೇವಾಲಯಗಳ ಅಭಿವೃದ್ದಿ ಸಮಿತಿ ನೇತೃತ್ವದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಪ್ರತಿವರ್ಷದಂತೆ ಈ ಬಾರಿ ಉತ್ಸವದ ಅಂಗವಾಗಿ ನಾಡ ಕುಸ್ತಿ ಪಂದ್ಯಗಳು ನಡೆದು ಪ್ರೇಕ್ಷಕರನ್ನು ರಂಜಿಸಿದವು.

ಇದನ್ನೂ ಓದಿ : 5,516 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಐಸಿಜಿ!

ದೇವಾಲಯದ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಗಳು ಪ್ರೇಕ್ಷಕರು ಸಿಳ್ಳೆ ಹೊಡೆದು ಕುಸ್ತಿಪಟುಗಳಿಗೆ ಮನರಂಜನೆ ನೀಡಿದ್ದು, ಈ ಕುಸ್ತಿ ಪಂದ್ಯಾವಳಿ ಆಯೋಜಕರಿಗಿಂತ ನೋಡುವ ಪ್ರೇಕ್ಷಕರೇ ಕುಸ್ತಿ ಪಟುಗಳಿಗೆ ಹುರಿದುಂಬಿಸಲು ಸ್ಥಳದಲ್ಲೇ ಗೆದ್ದವರಿಗೆ ನಗದು ಹಾಗೂ ಪಾರಿ ತೋಷಕಗಳನ್ನು ನೀಡಲಾಯಿತು.

Advertisement

ರಾಜ್ಯದ ಇತರೆಡೆಗಳಿಂದ 25 ಜೊತೆ ಕುಸ್ತಿಪಟುಗಳು ಆಗಮಿಸಿ ಕುಸ್ತಿ ನಡೆಯುವ ಅಖಾಡದಲ್ಲಿ ತಮ್ಮ ಕಸರತ್ತು ಪ್ರದರ್ಶಿಸಿದರು. ಬಲಮುರಿ ದೇವಾಲಯದ ಅಭಿವೃದ್ದಿ ಸಮಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿ‘ ಗ್ರಾಮಗಳಿಂದ ಆಗಮಿಸಿದ ಕುಸ್ತಿ ಪ್ರೇಮಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next