ಕುಷ್ಟಗಿ: ಕುಷ್ಟಗಿ ತಾಲೂಕಿನ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಕಳ್ಳತನ ತಡೆಗೆ ತಲಾ 5 ಸಾವಿರ ರೂ. ಮೊತ್ತದ ಡಿವೈಸ್ ಅಳವಡಿಸಲು, ಗ್ರಾ.ಪಂ.ಯಿಂದ ಖರೀದಿಗೆ ತ್ರೈಮಾಸಿಕ ಕೆಡಿಪಿ ಸಭೆ ಸಮ್ಮತಿಸಿತು.
ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಮಂಗಳವಾರ ತಾ.ಪಂ. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕುಷ್ಟಗಿ ತಾಲೂಕಿನಲ್ಲಿ ಶಾಲೆಗಳಲ್ಲಿ ಪದೇ ಪದೇ ಕಂಪ್ಯೂಟರ್ ಕಳವು ಹಾವಳಿ ತಡೆಗೆ ಈಗಾಗಲೇ ಬೆಂಗಳೂರು ನಗರ ಪ್ರದೇಶಗಳಲ್ಲಿ ಚಾಲ್ತಿ ಇರುವ ಡಿವೈಸ್ ಬಳಸಿಕೊಳ್ಳುವ ಕುರಿತು, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರಸ್ತಾಪಿಸಿ ಈ ಹೊಸ ಡಿವೈಸ್ ಅಳವಡಿಸಿದರೆ, ಕಳ್ಳರು ಕಳ್ಳತನ ಕ್ಕೆ ಯತ್ನಿಸಿದರೆ ಪೊಲೀಸ್ ಠಾಣೆ, ಪಿಎಸೈ, ಶಾಲೆಯ ಮುಖ್ಯ ಶಿಕ್ಷಕರ ಮೋಬೈಲ್ ಗೆ ಸೈರನ್ ರಿಂಗ್ ಆಗುತ್ತಿದೆ. ಇದರಿಂದ ಕಳ್ಳತನ ತಪ್ಪಿಸಬಹುದಾಗಿದೆ ಎಂದರು.
ಬಿಇಒ ಚನ್ನಬಸಪ್ಪ ಮಗ್ಗದ್ ಅವರು, ಪ್ರೌಢಶಾಲಾ ನಿಧಿಯಲ್ಲಿ5 ಸಾವಿರ ರೂ.ಮೊತ್ತ ಇಲ್ಲ ಎಂದಾಗ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಮದ್ಯೆಪ್ರವೇಶಿಸಿ ಶಿಕ್ಷಕರಲ್ಲಿ ಇಚ್ಛಾಶಕ್ತಿ ಕೊರತೆ ಇದ್ದು, ಮನಸ್ಸು ಮಾಡಿದರೆ ಸಾದ್ಯವಿದ್ದು ನಾನು ಈಗಲೇ ಮನಸ್ಸು ಮಾಡಿದರೆ ಪ್ರಾಥಮಿಕ ಶಾಲೆಗಳಿಗೂ ಈ ಡಿವೈಸ್ ಅಳವಡಿಸಬಹುದಾಗಿದೆ. ಕೂಡಲೇ ಅಲ್ಲಿದ್ದ ಗ್ರಾ.ಪಂ. ಪಿಡಿಓಗಳಿಗೆ ತಮ್ಮ ಗ್ರಾ.ಪಂ.ವ್ಯಾಪ್ತಿಯಿಂದಲೇ ಪ್ರೌಢಶಾಲೆಗಳ ಈ ಡಿವೈಸ್ ಖರೀದಿಸಲು ಸೂಚಿಸಿದರು.