ಕುಷ್ಟಗಿ : ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಲೋಹದ ತಡೆಗೋಡೆಗೆ ಬೈಕ್ ಢಿಕ್ಕಿ ಹೊಡೆದು ತಂದೆ- ಮಗಳು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತೊಂಡಿಹಾಳ ಗ್ರಾಮದ ಬಸಯ್ಯ ಕಳಕಯ್ಯ ಹಿರೇಮಠ (29) ಹಾಗೂ 5 ವರ್ಷದ ಮಗಳು ಅಕ್ಷರ ಎಂದು ಗುರುತಿಸಲಾಗಿದೆ.
ಕುಷ್ಟಗಿಯ ಶರಣಯ್ಯ ಹಿರೇಮನ್ನಾಪೂರ ಅವರ ಮನೆಗೆ ಬಂದಿದ್ದ ಈ ಕುಟುಂಬ ಬೈಕ್ ನಲ್ಲಿ ಬಸಯ್ಯ ಹಾಗು 28 ವರ್ಷದ ಪತ್ನಿ ಶಾಂತಮ್ಮ ಜೊತೆಗೆ ಇಬ್ಬರು ಮಕ್ಕಳಾದ 5 ವರ್ಷದ ಅಕ್ಷರ, 3 ವರ್ಷದ ಶ್ರೀಶೈಲ ತಮ್ಮ ಸ್ವಗ್ರಾಮ ತೊಂಡಿಹಾಳ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು.
ವಣಗೇರಾ ಮೇಲ್ಸೇತುವೆ ದಾಟಿದ ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೋಹದ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದರಿಂದ ಬಸಯ್ಯ ಹಿರೇಮಠ ಹಾಗೂ ಮಗಳು ಅಕ್ಷರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತನ ಪತ್ನಿ ಶಾಂತಮ್ಮ ಮಗ ಶ್ರೀಶೈಲ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ತಿಮ್ಮಣ್ಣ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೆಹಲಿ ಶಾಸಕರ ವೇತನ ಶೇ.66ಕ್ಕೆ ಏರಿಕೆ: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ