Advertisement

ಕುಷ್ಟಗಿ : ತೆರವುಗೊಳಿಸಿದವರಿಂದಲೇ ಶೌಚಾಲಯದ ಕಟ್ಟಡ ಮತ್ತೆ ನಿರ್ಮಾಣ

04:46 PM Jun 09, 2022 | Team Udayavani |

ಕುಷ್ಟಗಿ : ಯಾವೂದೇ ಪೂರ್ವಾನುಮತಿ ಇಲ್ಲದೇ ಕುಷ್ಟಗಿ ಪಟ್ಟಣದ 5ನೇ ವಾರ್ಡ್ ವ್ಯಾಪ್ತಿಯ ಮಹಿಳಾ ಸಾಮೂಹಿಕ ಶೌಚಾಲಯ ತೆರವು ವೇಳೆ, ಸ್ಥಳೀಯ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತೆರವುಗೊಳಿಸಿದವರಿಂದಲೇ ಯಥಾವತ್ತಾಗಿ ನಿರ್ಮಿಸಲಾಗಿದೆ.

Advertisement

ಕಳೆದ ಭಾನುವಾರ ಚರಂಡಿ ಪಕ್ಕದ ಸಾಮೂಹಿಕ ಮಹಿಳಾ ಶೌಚಾಲಯದ ಮರ್ಯಾದ ಗೋಡೆಯ ಒಂದು ಬದಿಯ ಮೂಲೆಯನ್ನು ಸಾಮಾಜಿಕ ಕಾರ್ಯಕರ್ತ ಬಸವರಾಜ ಗಾಣಗೇರ ಜೆಸಿಬಿಯಿಂದ ಏಕಾಏಕಿ ಪುರಸಭೆ ಅಧ್ಯಕ್ಷರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ತೆರೆವುಗೊಳಿಸಿದ್ದರು.

ಇದಕ್ಕೆ ಸ್ಥಳೀಯ ವಾರ್ಡಿನ ಸದಸ್ಯ ಚಿಂರಂಜೀವಿ ಹಿರೇಮಠ ಸೇರಿದಂತೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಕಾರ್ಯಕರ್ತ ಬಸವರಾಜ ಗಾಣಗೇರ ತರಾಟೆಗೆ ತೆಗೆದುಕೊಂಡಿದ್ದರಿಂದ ತೆರವು ಕಾರ್ಯ ಅಲ್ಲಿಗೆ ಸ್ಥಗಿತಗೊಳಿಸಿ ಪುನರ್ ನಿರ್ಮಾಣದ ಭರವಸೆ ನೀಡಿದ್ದರು.

ಅದರಂತೆಯೇ ಕಳೆದ ಬುಧವಾರ ತೆರವುಗೊಂಡ ಶೌಚಾಲಯದ ಕಟ್ಟಡ ನಿರ್ಮಿಸಲಾಗಿದೆ.

ಇದನ್ನೂ ಓದಿ : ಮಳಲಿ‌ ಮಸೀದಿ ವಿವಾದ: ಸುದೀರ್ಘ ವಿಚಾರಣೆ; ಸರ್ವೇ ಮಾಡಲು ಮನವಿ

Advertisement

ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಗಾಣಗೇರ ಅವರು, ಕಳೆದ ಭಾನುವಾರ ಏಕಾಏಕಿ‌ ಮಹಿಳಾ ಶೌಚಾಲಯ ತೆರವುಗೊಳಿಸಲು ಯತ್ನಿಸಿರುವುದು ದುಡುಕಿನ‌ ನಿರ್ಧಾರ. ಸುಪ್ರೀಂ ಕೋರ್ಟ್ ಆದೇಶದನ್ವಯ ಈ ರೀತಿ ಮರ್ಯಾದ ಗೋಡೆ ಇರಬಾರದು. ಈ ರೀತಿಯ ಶೌಚಾಲಯಗಳನ್ನು ತೆರವುಗೊಳಿಸಿ ಸುಲಭ ಮಾದರಿ ಶೌಚಾಲಯ ನಿರ್ಮಿಸಲು ಸೂಚಿಸಿತ್ತು.ಆದರೆ ಪಟ್ಟಣದ 5ನೇ ವಾರ್ಡಿನಲ್ಲಿ ಮಹಿಳಾ ಸಾಮೂಹಿಕ ಶೌಚಾಲಯದ ಮರ್ಯಾದ ಗೋಡೆ ಇದ್ದು ಇನ್ನೂ ಬಳಕೆಯಲ್ಲಿದೆ.

ಸ್ವಚ್ಛ ಭಾರತ ಅಭಿಯಾನದ ಯೋಜನೆ ಸಂಪೂರ್ಣ ಅನುಷ್ಠಾನ ಹಿನ್ನೆಲೆಯಲ್ಲಿ ಬಯಲು ಬಹಿರ್ದೇಸೆ ಮುಕ್ತಗೊಳಿಸಲು ಪ್ರತಿ ಕುಟುಂಬ ವೈಯಕ್ತಿಕ ಶೌಚಾಲಯ ಹೊಂದಬೇಕಿದೆ. ಆದರೆ ಈ ವಾರ್ಡಿನಲ್ಲಿ ಜಾಗೆಯ ತೊಂದರೆಯಿಂದಾಗಿ ಶೌಚಾಲಯ‌ ನಿರ್ಮಿಸಿಕೊಂಡಿಲ್ಲ. ಖುದ್ದಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳದವರ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಮನವಿ ಮಾಡಿದ್ದೆ.‌ ಇವರಲ್ಲಿ ‌ಕೆಲವು ಕುಟುಂಬಗಳು ಸ್ಪಂಧಿಸಿವೆ. ಇ‌ನ್ನಾದರೂ ಪುರಸಭೆ ವೈಯಕ್ತಿಕ ಶೌಚಾಲಯ ಹೊಂದಿರದ ಕುಟುಂಬ ಗುರುತಿಸಿ ಆದ್ಯತೆಯಾಗಿ ಶೌಚಾಲಯ ನಿರ್ಮಿಸಬೇಕು ಇಲ್ಲವೇ ಈ ಸ್ಥಳದಲ್ಲಿ ಸುಲಭ ಮಾದರಿ ಶೌಚಾಲಯ ನಿರ್ಮಿಸಬೇಕೆನ್ನುವುದು ನಮ್ಮ ಆಗ್ರಹವಾಗಿದೆ ಎಂದು ಬಸವರಾಜ್ ಗಾಣಗೇರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next