Advertisement

ಕುಷ್ಟಗಿ : ಹೆಂಡತಿ ಮಕ್ಕಲ್ಲಿದ್ದರೂ ಈ ಸರಕಾರಿ ನೌಕರ ಮಾತ್ರ ಅನಾಥ

03:04 PM Mar 08, 2022 | Team Udayavani |

ಕುಷ್ಟಗಿ: ಕುಷ್ಟಗಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ನೌಕರನ ಕಾಲು ಗ್ಯಾಂಗ್ರೀನ್ ಕೊಳೆಯುತ್ತಿದ್ದು, ಆಸ್ಪತ್ರೆಯ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾನೆ. ಸರ್ಕಾರಿ‌ ನೌಕರನಾಗಿದ್ದರೂ ಸಹ ವ್ಯಕ್ತಿಯ ಅನಾಥ‌ ಅವಸ್ಥೆಗೆ ಕುಟುಂಬದವರು ಇತ್ತ ಸುಳಿದಿಲ್ಲ.

Advertisement

ಕೊಪ್ಪಳ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಎಸ್ ಡಿ ಸಿ ನೌಕರ ಬಸವರಾಜ್ ಮುಂಡಾಸದ. ಇದೀಗ ಕುಷ್ಟಗಿ ಪಶು ಆಸ್ಪತ್ರೆಯಲ್ಲಿ ಪ್ರಭಾರ ಸೇವೆಯಲ್ಲಿದ್ದಾರೆ. ಗದಗ ಜಿಲ್ಲೆ ಪೇಟಾಲೂರು ಸ್ವಗ್ರಾಮ. ಪತ್ನಿ‌ ಅದೇ ಊರಲ್ಲಿ ಇದ್ದು, ಇಬ್ಬರು ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿದ್ದಾರೆ.

ನೌಕರ ಬಸವರಾಜ್ ಕುಡಿತದ ವ್ಯಸನಕ್ಕೆ ಕುಟುಂಬದಿಂದ ದೂರವಾಗಿ ಸಂಬಂಧ ಕಡಿದುಕೊಂಡಿದ್ದಾನೆ. ಪ್ರತಿ ತಿಂಗಳ‌ 40 ಸಾವಿರ ರೂ. ವೇತನ ಪತ್ನಿಗೆ ಸೇರುತ್ತಿದ್ದು ಈತನ ಸಿಡುಕಿನ ವರ್ತನೆಗೆ ಬೇಸತ್ತಿದ್ದಾರೆ. ಅತೀಯಾದ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದ ಬಸವರಾಜ್ ಮುಂಡಾಸದ್,ಗೆ ಕುಡಿತದ ಚಟಕ್ಕೆ ಎಲ್ಲೋ ಬಿದ್ದು ಕಾಲಿಗೆ ಗಾಯವಾಗಿದೆ.‌ ಸರಿಯಾದ ಆರೈಕೆ ಇಲ್ಲದೇ ಕಾಲಿನ ಗಾಯ ಗ್ಯಾಂಗ್ರೀನ್ ಆಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾಲು ಕತ್ತರಿಸದೇ ಬೇರೆ ವಿಧಿ ಇಲ್ಲ ವೈದ್ಯರು ತಿಳಿಸಿದ್ದರಿಂದ‌ ಚಿಕಿತ್ಸೆ ಗೆ ನಿರಾಕರಿಸಿದ್ದಾನೆ. ನಂತರ ಹುಬ್ಬಳ್ಳಿ ಆಸ್ಪತ್ರೆಯಲ್ಲೂ ಅದೇ ಸಲಹೆ ನೀಡಿದ ಹಿನ್ನೆಲೆಯಲ್ಲಿ ಅಲ್ಲಿಂದ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲಿನ ಗಾಯಕ್ಕೆ ಹುಳು ಬಿದ್ದಿದ್ದು ದುರ್ನಾತದೊಂದಿಗೆ ಜೀವಂತ‌ ಶವವಾಗಿ ಬಿದ್ದಿದ್ದಾನೆ. ಸಂಬಂಧಿಸಿದ ಇಲಾಖೆಯವರು ಸಾದ್ಯವಾದಷ್ಟು ಪ್ರಯತ್ನ ಮಾಡಿದ್ದಾರೆ. ಈತನ ವರ್ತನೆ ಅತಿಯಾದ ಕುಡಿತದ ದುರಭ್ಯಾಸಕ್ಕೆ ಸಾಕಾಗಿ ಸುಮ್ಮನಾಗಿದ್ದಾರೆ.

ಇದನ್ನೂ ಓದಿ : ಇವಿಎಂ ಸ್ಟ್ರಾಂಗ್ ರೂಮ್ ಕಾಯಲು ಎಸ್ ಪಿ ಕಾರ್ಯಕರ್ತರ ಮೂರು ಪಾಳಿಗಳ ಕೆಲಸ !

ಇದೇ ಮೇ 31ಕ್ಕೆ ನಿವೃತ್ತಿಯಾಗಲಿರುವ ಮುಂಡಾಸದ ಅವರಿಗೆ ಇಲ್ಲಿನ ಕ್ರೈಂ ವಿಭಾಗದ ಪಿಎಸೈ ಮಾನಪ್ಪ ವಾಲ್ಮೀಕಿ ಅವರು, ಮಾನವೀಯತೆ ಹಿನ್ನೆಲೆಯಲ್ಲಿ ಬಸವರಾಜ್ ಮುಂಡಾಸದ್ ಮಗಳನ್ನು ಸಂಪರ್ಕಿಸಿದಾಗ್ಯೂ ಕುಷ್ಟಗಿ ಬರುವ ಸ್ಥಿತಿಯಲ್ಲಿ ಇಲ್ಲ.‌ ಬಸವರಾಜ್ ಮುಂಡಾಸದ ಆರೋಗ್ಯವಾಗಿದ್ದು, ಕಾಲಿನ ಗ್ಯಾಂಗ್ರೀನ್ ಚಿಕಿತ್ಸೆ ನೀಡಿದರೆ ಆರೋಗ್ಯವಾಗುತ್ತಾನೆ. ಆದರೆ ಈತನ. ಆರೈಕೆಗೆ ಪತ್ನಿ ಮಕ್ಕಳು ಯಾರು ಮುಂದೆ ಬಂದಿಲ್ಲ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರಡ್ಡಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next