ಕುಷ್ಟಗಿ: ಕಳೆದ ಎಂಟು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತ ಪ್ರಕರಣದ ಕಾರು ಚಾಲಕ ಆರೋಪಿಗೆ ಕುಷ್ಟಗಿ ಜೆ ಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಳೆದ 15ನೇ ಮೇ 2015ರಲ್ಲಿ ನೀಲಪ್ಪ ಕುಂಬಾರ ಅವರ ಜಮೀನು ಬಳಿ ವಿಭಜಕದಲ್ಲಿ ವಸಂತಕುಮಾರ ರಾಜಶೇಖರ ನಾಯಕ ಕಾರನ್ನು ಅತಿ ವೇಗ ನಿರ್ಲಕ್ಷದ ಚಾಲನೆ ಸಂದರ್ಭದಲ್ಲಿ ಟಿವಿಎಸ್ ವಾಹನ ಸವಾರ ಶಂಕ್ರಪ್ಪ ಪರಸಪ್ಪ ರಾಗಿ ಅವರಿಗೆ ಢಿಕ್ಕಿಯಾಗಿ ಟಿವಿಎಸ್ ವಾಹನ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದರು.
ಕುಷ್ಟಗಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಪಿ. ನ್ಯಾಯಾಯಲಯದ ನ್ಯಾಯಧೀಶರಾದ ಶ್ರೀ ಶಂಭುಲಿಂಗಯ್ಯ ಮೂಡಿಮಠ ರವರು ದೋಷಿಗಳೆಂದು ತಿರ್ಮಾನಿಸಿ ಸದರಿ ಆರೋಪಿತನಿಗೆ ಐ.ಪಿ.ಸಿ ಯ ಕಲಂ: 279 ರ ಅಡಿಯಲ್ಲಿ 1000/- ರೂ ದಂಡ ಮತ್ತು 6 ತಿಂಗಳೂ ಸಾದಾ ಕಾರವಾಸ, ಹಾಗೂ ಕಲಂ:304(ಎ) ರ ಅಡಿಯಲ್ಲಿ 10,000/- ರೂ ದಂಡ ಮತ್ತು 6 ತಿಂಗಳು ಸಾದಾ ಜೈಲು ಕಾರವಾಸ (ಒಟ್ಟು 12 ತಿಂಗಳು ಜೈಲು ಕಾರಾವಾಸ ಮತ್ತು 1,000/- ಸಾವಿರ ರೂಗಳ ದಂಡವನ್ನು) ವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕುಷ್ಟಗಿ ಸಿಪಿಐ ಆಗಿದ್ದ ಆರ್.ಎಸ್. ಉಜ್ಜನಕೊಪ್ಪ, ಇವರು ಈ ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದರು. ಸರಕಾರದ ಪರವಾಗಿ ಶ್ರೀ ರಾಯನಗೌಡ ಎಲ್ ಸಹಾಯಕ ಸರಕಾರಿ ಅಯೋಜಕರು ಕುಷ್ಟಗಿ ಪ್ರಕರಣ ಕುರಿತು ವಿಚಾರಣೆ ನಡೆಸಿ ತಮ್ಮ ವಾದವನ್ನು ಮಂಡಿಸಿದ್ದರು.
ಇದನ್ನೂ ಓದಿ: ಪತ್ನಿಯನ್ನು ಕೊಂದು 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿ, ನಾಪತ್ತೆ ಪ್ರಕರಣ ದಾಖಲಿಸಿದ ವೈದ್ಯ