Advertisement
2018ರಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಂಡ ನಿಡಶೇಸಿ ಕೆರೆಗೆ ಸುತ್ತಲೂ ಒಡ್ಡು ನಿರ್ಮಿಸಿದ್ದರು. ಈ ಒಡ್ಡಿನ ಅಕ್ಕ ಪಕ್ಕದಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ನೆರವಿನಿಂದ 800 ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನಿರ್ವಹಣೆಗೆ ವನಪಾಲಕರನ್ನು ನೇಮಿಸಿತ್ತು. ಆರಂಭಿಕ ವರ್ಷದಲ್ಲಿ ಅರಣ್ಯ ಇಲಾಖೆ ಬೇಸಿಗೆ ಸಂದರ್ಭದಲ್ಲಿ ನೀರುಣಿಸಿತ್ತು.
Related Articles
Advertisement
ದ್ವಾರಕಾಮಯಿ ಸಾಯಿ ಸೇವಾ ಟ್ರಸ್ಟ್ ನ ಕೃಷ್ಣ ಕಂದಕೂರು, ರಾಜು ಕತ್ರಿ, ಸತೀಶ್ ಕಂದಗಲ್, ನವೀನ್ ಕಲಾಲ್, ಶ್ರೀಧರ ಮೊದಲಾವರು ಬೆಳಗ್ಗೆ 10 ರಿಂದ ಸಂಜೆ 5 ರವರೆಗೂ ನೀರುಣಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಪಾತೀ ಮಾಡಲು ಸಹಕರಿಸಿದ್ದಾರೆ.
ಈ ಕುರಿತು ಉದಯವಾಣಿ ಯೊಂದಿಗೆ ಮಾತನಾಡಿದ ಕೃಷ್ಣಾ ಕಂದಕೂರು, ನಿಡಶೇಷಿ ಕೆರೆಯ ದಡದ ಒಡ್ಡಿನಲ್ಲಿ ಗಿಡಗಳಿಗೆ ಈಗಿನ ಸಂದರ್ಭದಲ್ಲಿ ನೀರು ಅಗತ್ಯವಾಗಿತ್ತು. ಅರಣ್ಯ ಇಲಾಖೆಯ ಮರ್ಜಿ ಕಾಯದೇ ನಾವೇ ಸ್ನೇಹಿತರು ಪಾಕೇಟ್ ಮನಿಯನ್ನು ಪ್ರತಿ ಟ್ಯಾಂಕರ್ ಗೆ 500 ರೂ. ನಂತೆ ಈ ದಿನ ನಾಲ್ಕು ಟ್ಯಾಂಕರ್ ನೀರುಣಿಸಿರುವುದು ಸಾರ್ಥಕ ಭಾವನೆ ವ್ಯಕ್ತವಾಗಿದೆ. ಇನ್ನೂ ವಾರ ಬಿಟ್ಟು ಇನ್ನುಳಿದ ಗಿಡಗಳಿಗೆ ನೀರುಣಿಸುತ್ತೇವೆ. ಹುಟ್ಟು ಹಬ್ಬದ ಆಚರಣೆ ವೇಳೆ ಸಾವಿರಾರು ಖರ್ಚು ಮಾಡುವ ಬದಲಿಗೆ ಅದೇ ಹಣದಲ್ಲಿ ಇಲ್ಲಿನ ಗಿಡಗಳಿಗೆ ತಾವೇ ಖುದ್ದಾಗಿ ನೀರುಣಿಸಬೇಕು ಅಂದಾಗ ಮಾತ್ರ ಹುಟ್ಟು ಹಬ್ಬ ಸಾರ್ಥಕವಾಗುತ್ತಿದೆ ಎಂದರು.