Advertisement

Kushtagi: ಯುವಕನಿಗೆ‌ ಪಿಎಸೈ ಕಪಾಳ ಮೋಕ್ಷ; ಪಿಎಸೈ ವಿರುದ್ದ ತಿರುಗಿದ ಸ್ಥಳೀಯರ ಪ್ರತಿಭಟನೆ

03:45 PM Oct 20, 2023 | Team Udayavani |

ಕುಷ್ಟಗಿ: ಪಿ.ಎಸ್.ಐ. ಮುದ್ದುರಂಗಸ್ವಾಮಿ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಪಿಎಸೈ ವಿರುದ್ದ ಪ್ರತಿಭಟನೆಗೆ ತಿರುಗಿದ್ದು, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಅಘೋಷಿತ ಪ್ರತಿಭಟನೆ ನಡೆಸಿ, ಪಿಎಸೈ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗ ಆ.20ರ ಶುಕ್ರವಾರ ನಡೆಯಿತು.

Advertisement

ಕುಷ್ಟಗಿ ಪಟ್ಟಣದ ಸಮಾಜ ಸೇವಕ ರವಿಕುಮಾರ ಹಿರೇಮಠ ಅವರ ಪುತ್ರ, ನಂದೀಶ ಬೈಕಿನಲ್ಲಿ ಬಂದು ಕಂದಕೂರ ಜುವೆಲ್ಲರ್ಸ್ ಬಳಿ ಎಳನೀರು ಖರೀದಿಸಲು ರಸ್ತೆಯ ಬದಿ ಬೈಕ್ ನಿಲ್ಲಿಸಿದ್ದರು.

ಅದೇ ವೇಳೆ ಆಗಮಿಸಿದ್ದ ಪಿಎಸೈ ಮುದ್ದುರಂಗಸ್ವಾಮಿ ಈ ಯುವಕನಿಗೆ ಕಪಾಳಮೋಕ್ಷ ಮಾಡಿದರಲ್ಲದೇ ಬೂಟ್ ಕಾಲಿನಿಂದ ಒದ್ದು, ಪೊಲೀಸ್ ಠಾಣೆಗೆ ಎಳೆದೊಯ್ದುರು. ನಂತರ ಪೊಲೀಸ್ ಠಾಣೆಯಲ್ಲಿ ಬೆಲ್ಟ್ ನಿಂದ ಥಳಿಸಿದರೆಂದು ಆರೋಪಿಸಲಾಗಿದೆ.

ಈ ಪ್ರಕರಣದ ಬೆನ್ನಲ್ಲೇ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಅಭಿಮಾನಿಗಳು, ಏಕಾಏಕಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಪಿಎಸೈ ವರ್ತನೆಯನ್ನು ಟೀಕಿಸಿದರಲ್ಲದೇ ಕಾಂಗ್ರೆಸ್ ಏಜೆಂಟ್ ಪಿಎಸೈ ಎಂದು ಕೂಗಿ ಆಕ್ರೋಶ ಹೊರಹಾಕಿದರು. ಪಿಎಸೈ ಮುದ್ದುರಂಗಸ್ವಾಮಿ ಅವರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.

ಬಸವೇಶ್ವರ ವೃತ್ತದಲ್ಲಿ ಧರಣಿ ನಿರತರನ್ನು ಸಿಪಿಐ ಯಶವಂತ ಬಿಸರಳ್ಳಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಸಮಾಜಾಯಿಷಿ, ಏಕಾಏಕಿ ಪ್ರತಿಭಟನೆ ಮಾಡದಿರಲು ಮನವಿಗೆ ಪ್ರತಿಭಟನಾಕಾರರು ಜಗ್ಗಲಿಲ್ಲ.  ರವಿಕುಮಾರ ಹಿರೇಮಠ ಅವರ ಪುತ್ರ ನಿನ್ನೆ ಬೆಂಗಳೂರಿನಿಂದ ಬಂದಿದ್ದು, ತಾಯಿಗೆ ಹುಶಾರು ಇಲ್ಲ ಎಂದು ಎಳನೀರು ತರಲು ಬೈಕಿನಲ್ಲಿ ಹೋದಾಗ, ಪಿಎಸೈ ಮುದ್ದುರಂಗಸ್ವಾಮಿ, ಅವರು, ಜಂಗಮ ಸಮಾಜ ಯುವಕ ನಂದೀಶನನ್ನು ಮನಸೋಇಚ್ಚೆ ಥಳಿಸಿದ್ದು, ಠಾಣೆಗೆ ಎಳೆದೊಯ್ದಿರುವ ಅವಮಾನವೀಯ ವರ್ತನೆಯನ್ನು ಪ್ರಶ್ನಿಸಿದರು.

Advertisement

ಟ್ರಾಫಿಕ್ ಪಕ್ರರಣ ಉಲ್ಲಂಘಿಸಿದರೆ ದಂಡ ಹಾಕದೇ ಅವರ ಮೇಲೆ ಹಲ್ಲೆ ಮಾಡುವ ದುರ್ವರ್ತನೆಯನ್ನು ವಿಜಯಕುಮಾರ ಹಿರೇಮಠ ಖಂಡಿಸಿದರು. ಈ ಪ್ರಕರಣ ಇಷ್ಟಕ್ಕೆ ಸುಮ್ಮನೇ ಬಿಡುವುದಿಲ್ಲ ಕುಷ್ಟಗಿ ಪಿಎಸೈ ದುರ್ವರ್ತನೆ ಖಂಡಿಸಿ ಕುಷ್ಟಗಿ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಸಿದರು.

ಈ ಕುರಿತು ಸ್ಪಷ್ಟನೆ ನೀಡಿದ ಪಿಎಸೈ ಮುದ್ದುರಂಗಸ್ವಾಮಿ ಅವರು, ನನಗೆ ರವಿಕುಮಾರ ಹಿರೇಮಠ ಎನ್ನುವುದು ಗೊತ್ತಿಲ್ಲ ಸದರಿ ಯುವಕ ಕಾಲೇಜು ಅಕ್ಕ‌ಪಕ್ಕ  ಬೈಕ್ ಸೈಲೆನ್ಸರ್ ಕಿತ್ತು ಕರ್ಕಶ ಸೌಂಡ್ ಮಾಡಿಕೊಂಡು ವಾಹನ ಸಂಚರಿಸಿರುವುದು ಗಮನಿಸಿದ್ದೇನೆ. ಸದರಿ ಯುವಕ ಸಂಚಾರ‌ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ನನಗೆ ಕಾಂಗ್ರೆಸ್, ಬಿಜೆಪಿ ಕಡೆಯವರು ಯಾವೂದು ಗೊತ್ತಿಲ್ಲ. ನಮಗೆ ರವಿ ಅಜ್ಜನವರಿಗೆ ಯಾವೂದೇ ವೈರತ್ವ ಇಲ್ಲ ಸ್ಪಷ್ಟಪಡಿಸಿದರು.

ಸಿಪಿಐ ಯಶವಂತ ಬಿಸನಳ್ಳಿ ಪ್ರತಿಕ್ರಿಯಿಸಿ, ಈ ಪ್ರಕರಣದ ಹಿನ್ನೆಲೆಯಲ್ಲಿ ಕುಷ್ಟಗಿ ಬಂದ್ ಕರೆ ಬಗ್ಗೆ ಪ್ರಸ್ತಾಪಕ್ಕೆ ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next