Advertisement

ಬೆದರು ಬೊಂಬೆ, ಉತ್ಸವ ಮೂರ್ತಿಗಳಾಗಿದ್ದೇವೆ..!

02:58 PM Jan 24, 2021 | Team Udayavani |

ಕುಷ್ಟಗಿ: ತಾಲೂಕು ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳು ಕುರ್ಚಿಗೆ ಮೂಲವೇ ಹೊರತು ಅಧಿಕಾರಕ್ಕೆ ಇಲ್ಲ. ಗ್ರಾಪಂ ಸದಸ್ಯನಿಗೆ ಇರುವಷ್ಟು ಅಧಿಕಾರ, ಸಾಮರ್ಥ್ಯ ತಾಪಂ ಸದಸ್ಯರಿಗೆ ಎಲ್ಲಿದೆ?

Advertisement

ಇದು ತಾಪಂ ಅಧ್ಯಕ್ಷೆ ಮಹಾಂತಮ್ಮ ಕಾಶೀಮಪ್ಪ ಪೂಜಾರ ಅವರ ಪ್ರಶ್ನೆ. ತಾಪಂ ಚುನಾವಣೆಗೆ ಸ್ಪ ರ್ಧಿಸುವ ಪೂರ್ವದಲ್ಲಿ ಕ್ಷೇತ್ರದ ಜನತೆ ಹಲವು ಭರವಸೆ ನೀಡಿ, ಸದಸ್ಯರಾಗಿದ್ದೇವೆ. ಆದರೆ ಕ್ಷೇತ್ರ ಜನರ ಕನಿಷ್ಠ ಬೇಡಿಕೆ ಈಡೇರಿಸುವುದು ಅಸಾಧ್ಯದ ಮಾತಾಗಿದೆ. ಈಗಿನ ವ್ಯವಸ್ಥೆಯಲ್ಲಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪ್ರಸ್ತಾಪಿಸಿದರೂ ಗುಡ್ಡಕ್ಕೆ ಒದರಿ ಹೊಟ್ಟೆ ಉಬ್ಬಿ ಸಾಯುವ ಪರಿಸ್ಥಿತಿ ತಾಪಂ ಸದಸ್ಯರದ್ದಾಗಿದೆ. ಕ್ರಮೇಣ ತಾಪಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ರದ್ದುಗೊಳಿಸುವ ಹುನ್ನಾರವೂ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಕಾಲದಲ್ಲಿ ತಾಪಂ ವ್ಯವಸ್ಥೆಗೆ ಇದ್ದ ಗಟ್ಟಿತನ ಈಗಿಲ್ಲ. ಇದೇ ಪರಿಸ್ಥಿತಿ ಮುಂದುವರಿಯುವಂತಾದರೆ ತಾಪಂ ವ್ಯವಸ್ಥೆ ತೆಗೆಯುವುದೇ ಲೇಸು ಎನಿಸುತ್ತಿದೆ. ಪಂಚಾಯತ್‌ ರಾಜ್‌ ಅಧಿ ಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ತಾಪಂ ಎಂದರೆ ಸರ್ಕಾರ, ವಿಧಾನಸಭೆ ಸದಸ್ಯರು, ಜಿಪಂ ಸದಸ್ಯರು ಹಾಗೂ ಗ್ರಾಪಂ ಸದಸ್ಯರಿಗೆ ಸಂಪರ್ಕ ಕೊಂಡಿ ಇದ್ದಂತೆ ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ತಾಲೂಕು ಮಟ್ಟದಲ್ಲಿ ಚರ್ಚಿಸಿ ಜಿಲ್ಲೆ ಹಾಗೂ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ ಅ ಧಿಕಾರ ಹೆಸರಿಗೆ ಮಾತ್ರ ಎನ್ನುವುದಾದರೆ ಹುದ್ದೆಗೆ ಕಿಮ್ಮತ್ತಿಲ್ಲ. ತಾಪಂ ವ್ಯವಸ್ಥೆಯನ್ನು ಹೈಜಾಕ್‌ ಮಾಡಿರುವುದರಿಂದ ತಾಪಂ ಸದಸ್ಯರೆಂದರೆ ಅಧಿ ಕಾರಿಗಳಿಗೆ ಬೆದರು ಬೊಂಬೆ, ಸಭೆಯಲ್ಲಿ ಉತ್ಸವಮೂರ್ತಿಗಳಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೇಕೀಗ ತಾಪಂ ಬಲವರ್ಧನೆಗೆ ಚಿಂತನೆ

ತಾಪಂ ಉಳಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ವಾರ್ಷಿಕವಾಗಿ ತಾಪಂಗೆ 5ರಿಂದ 6 ಕೋಟಿ ಅನುದಾನ ನೀಡಬೇಕು. ತಾಪಂ ಅಧ್ಯಕ್ಷರಿಗೆ ಚೆಕ್‌, ಲಾಗಿನ್‌ ಪವರ್‌ ನೀಡಬೇಕಿದೆ. ಆದರೆ ಈಗಿನ ವ್ಯವಸ್ಥೆಯಲ್ಲಿ ನಿರ್ಬಂಧಿ ತ ಅನುದಾನ, ಅನಿರ್ಬಂಧಿ ತ ಅನುದಾನ, 12 ಹಾಗೂ 13ನೇ ಹಣಕಾಸು ಯೋಜನೆಗಳಲ್ಲಿ ರಸ್ತೆಗೆ ಮರಂ ಮಣ್ಣು, ಪೈಪ್‌ಲೈನ್‌, ಸುಣ್ಣಬಣ್ಣ ಇವಿಷ್ಟಕ್ಕೆ ಸೀಮಿತವಾಗಿದೆ. ಈ ಯೋಜನೆಗಳಿಗೆ ಅನುದಾನ ಹೆಚ್ಚಿದ್ದರೆ ಸಮರ್ಪಕವಾಗಿ ಅಭಿವೃದ್ಧಿ ಕೆಲಸ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಿದೆ ಎನ್ನುವ ಅಭಿಪ್ರಾಯ ಹಂಚಿಕೊಂಡರು.

Advertisement

ನರೇಗಾ ಯೋಜನೆಯಡಿ ಗ್ರಾಪಂಗೆಕೋಟ್ಯಂತರ ಅನುದಾನ ಬರುತ್ತಿದೆ ಆದರೆ ತಾಪಂಗೆ ಏನಿದೆ? ಆತ್ಮಸಾಕ್ಷಿಯಾಗಿ ಪ್ರಶ್ನಿಸಿಕೊಳ್ಳುವಂತಾಗಿದೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಪಿಡಿಒ, ತಾಲೂಕು ಮಟ್ಟದ ಅಧಿ ಕಾರಿಯನ್ನು ಪ್ರಶ್ನಿಸುವ ಹಕ್ಕು ಸಹ ಕಳೆದುಕೊಂಡಿದ್ದೇವೆ. ಇಷ್ಟು ವರ್ಷಗಳ ಅ ಧಿಕಾರವ ಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ ಸಮರ್ಪಕ ಅನುದಾನ ಇಲ್ಲ. ಅನುದಾನ ದುರುಪಯೋಗ, ಕಳಪೆ ಕಾಮಗಾರಿ ದೂರುಗಳು ಬೇಕಾದಷ್ಟಿದ್ದರೂ ಸಂಬಂಧಿ  ಸಿದ ಅಧಿಕಾರಿ ಮುಂದೆ ಪ್ರಸ್ತಾಪಿಸಿದರೂ ಪ್ರಯೋಜನ ಇಲ್ಲ.

 

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next