Advertisement

Kushtagi: ಪಾಕಿಸ್ಥಾನ ಧ್ವಜ ಕೇಸ್;ಅಮಾಯಕನ ಫೋಟೋ ದುರ್ಬಳಕೆ

11:25 PM Nov 25, 2023 | Team Udayavani |

ಕುಷ್ಟಗಿ:ತಾವರಗೇರಾ ಪಟ್ಟಣದ ಯುವಕ ಪಾಕಿಸ್ಥಾನ ಧ್ವಜವನ್ನು ಮೋಬೈಲ್ ಸ್ಟೇಟಸ್ ಹಾಕಿಕೊಂಡ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಫೋಟೋದಲ್ಲಿರುವ ಯುವಕ ನಿರಪರಾಧಿ ಎಂದು ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿದ್ದು, ಫೋಟೋ ತಿರುಚಿದ ಆರೋಪಿ ಯುವಕನನ್ನು ಪೋಲೀಸರು, ಬಂಧಿಸಿದ್ದಾರೆ.

Advertisement

ರಾಜಸಾಬ್ ಮಹ್ಮದ್ ಸಾಬ್ ನಾಯಕ ಹೆಸರಿನ ವ್ಯಕ್ತಿ ಫೋಟೋ ತಿರುಚಿದ್ದು, ಪ್ರಕರಣದಲ್ಲಿ ಶ್ಯಾಮೀದ್ ಸಾಬ್ ಯುವಕನ ಫೋಟೋ ವೈರಲ್ ಆಗಿತ್ತು. ಸದರಿ ಪ್ರಕರಣದಲ್ಲಿ ಅಮಾಯಕ ಶ್ಯಾಮೀದ್ ಸಾಬ್ ತಾವರಗೇರಾದಲ್ಲಿ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಕ್ಕೆ ಮುಸ್ಲಿಂ ಬಾಂಧವರನ್ನು ಅಹ್ವಾನಿಸಿ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದ. ಈ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದು, ರಾಜಸಾಬ್ ಮಹ್ಮದ್ ಸಾಬ್ ನಾಯಕ ಎಂಬಾತ ಪಾಕಿಸ್ಥಾನ ಧ್ವಜಾ ಟ್ಯಾಗ್ ಮಾಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಯುವಕ ಶ್ಯಾಮೀದಸಾಬ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಪೋಟೋ ತಿರುಚಿದ ರಾಜೇಸಾಬ್ ಮಹ್ಮದ್ ಸಾಬ್ ನಾಯಕನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಯಶವಂತ ಬಿಸನಳ್ಳಿ ಸ್ಪಷ್ಟಪಡಿಸಿದ್ದಾರೆ.

ರಾಜೇಸಾಬ್ ನಾಯಕ ಮಾಡಿದ ತಪ್ಪಿಗೆ ಶ್ಯಾಮೀದ್ ಸಾಬ್ ಅಮಾಯಕ ಯುವಕನ ಪರವಾಗಿ ಸಂತೋಷ ಸರನಾಡಗೌಡ್ರು, ಸಾಗರಬೇರಿ ಮೊದಲಾದವರು, ಬೆಂಬಲಕ್ಕೆ ನಿಂತಿದ್ದು, ಆರೋಪದಿಂದ ಕ್ಲಿನ್ ಚಿಟ್ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next