ಕುಷ್ಟಗಿ: ಕಾರ್ಮಿಕ ದಿನಾಚರಣೆ ದಿನದಂದು ಕುಷ್ಟಗಿ ಪುರಸಭೆ ಪೌರ ಕಾರ್ಮಿಕ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಷ್ಟಗಿ ಪುರಸಭೆ ಪೌರ ಕಾರ್ಮಿಕ ಶಿವಮೂರ್ತೆಪ್ಪ ಕಟ್ಟಿಮನಿ ಎಂಬವರು ಏ. 30ರ ಮಂಗಳವಾರ ಬೆಳಗ್ಗೆಯಿಂದ ಕಾಣೆಯಾಗಿದ್ದಾರೆ.
59 ವರ್ಷದ ಶಿವಮೂರ್ತೆಪ್ಪ ಕಟ್ಟಿಮನಿ ಅವರಿಗೆ ಕಿವಿ ಕೇಳಿಸುವುದಿಲ್ಲ. ಮಂಗಳವಾರ ಬೆಳಗ್ಗೆ ಮನೆಯಿಂದ ಎಂದಿನಂತೆ ಸೈಕಲ್ ತೆಗೆದು ಹೋಗಿದ್ದ ಅವರು, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸೈಕಲ್ ನಿಲ್ಲಿಸಿ ಹೋದವರು ಮರಳಿ ಮನೆಗೆ ಬಂದಿಲ್ಲ.
ಅವರ ಮಗಳು ಗಜೇಂದ್ರಗಡದಲ್ಲಿ ವಾಸವಿರುವ ಹಿನ್ನೆಲೆ ಅಲ್ಲಿಗೆ ಹೋಗಿರಬಹುದು ಎಂದು ಅಲ್ಲಿಯೂ ಹುಡುಕಾಟ ನಡೆಸಲಾಗಿದೆ. ಅದಾಗ್ಯೂ ಪತ್ತೆಯಾಗದ ಹಿನ್ನೆಲೆ ಕುಟುಂಬ ವರ್ಗದಲ್ಲಿ ಆತಂಕ ಹೆಚ್ಚಾಗಿದೆ. ಸಂಜೆಯವರೆಗೂ ಹುಡುಕಾಟ ನಡೆಸಿ ಪತ್ತೆಯಾಗದೇ ಇದ್ದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು.
ಕಾಣೆಯಾಗಿರುವ ಶಿವಮೂರ್ತೆಪ್ಪ ಕಟ್ಟಿಮನಿ ಮುಂದಿನ ತಿಂಗಳ ಜೂನ್ ನಲ್ಲಿ ನಿವೃತ್ತಿಯಾಗಲಿದ್ದರು ಎಂದು ಅವರ ಸಂಬಂಧಿಕ ಮಂಜು ಕಟ್ಟಿಮನಿ ತಿಳಿಸಿದ್ದಾರೆ.