ಕುಷ್ಟಗಿ:ನಾಗಸಾಧುಗಳ ನೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ವಿಶ್ವ ಕಲ್ಯಾಣರ್ಥವಾಗಿ ಸೆ.26ರಿಂದ ಅ.4ರವರೆಗೆ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರ ದೇವಸ್ಥಾನದಲ್ಲಿ ಶತ ಚಂಡಿ ಮಹಾಯಜ್ಞ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.26ರಂದು ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನದಿಂದ ಶ್ರಿ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಸನ್ನಿಧಿಯವರೆಗೂ 11 ನಾಗ ಸಾಧುಗಳ ಸನ್ನಿಧಾನದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಕುಂಭ ಮೆರವಣಿಗೆ ಹಾಗೂ ಘಟಸ್ಥಾಪನೆ ಗಣಪತಿ ಪೂಜೆ ಆಯೋಜಿಸಲಾಗಿದೆ.
ಸೆ.27ರಂದು ದಶವಿಧಿಸ್ನಾನ ಹಾಗೂ ಪ್ರಾಯಾಶ್ಚಿತ ಕರ್ಮ ಮಹಾಸಂಕಲ್ಪ ಶ್ರೀದೇವಿಗೆ ಅಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಸೆ.28ರಂದು ಯತ್ನಶಾಲಾ ಪ್ರವೇಶ, ಮಂಡಲ ಸ್ಥಾಪನೆ, ದೇವಾನು ದೇವತೆಗಳಿಗೆ ಹೋಮದಿಂದ ಅಹ್ವಾನ ನೆರವೇರಲಿದೆ. ಸೆ.29ರಂದು ಎಲ್ಲಾ ದೇವಾನು ದೇವತೆಗಳನ್ನು ಅಹ್ವಾನಿಸಿ ಪೂಜಿಸಿ, ಮಂಡಲ ಪೂಜೆ ನೆರವೇರಲಿದ್ದು ನಂತರ ಅಗ್ನಿ ಸ್ಥಾಪನೆಯಾಗಲಿದೆ.
ಸೆ.30 ರಂದು ಅಹ್ವಾನಿಸಿದ ದೇವತೆಗಳ ಪೂಜೆ ಮಂಡಲ ಪೂಜೆ ಶತ್ ಚಂಡಿ ಯಜ್ಞ ಆರತಿ ಮೂಲಕ ಆರಂಭಿಸಲಾಗುವುದು. ಅ.1ರಂದು ಮಂಡಲ ಪೂಜೆ, ಮಹಾಯಜ್ಞ , ಮಹಾ ಪ್ರಸಾದ್ ನೆರವೇರಲಿದೆ. ಅ.2ರಂದು ದೇವರ ಪೂಜೆ, ಮಂಡಲ ಪೂಜೆ, ಮಹಾಯಜ್ಞ ಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮವಿದೆ ಅ.3ರಂದು ದೇವರ ಪೂಜೆ, ಮಂಡಲ ಪೂಜೆ, ಮಹಾಯಜ್ಞ ಪೂಜೆ ಹಾಗೂ ಮಹಾಪ್ರಸಾದ ಇದೆ.
ಅ.4ರಂದು ಎಲ್ಲಾ ದೇವಾನು ದೇವತೆಗಳನ್ನು ಅಹ್ವಾನಿಸಿ 9 ದಿನಗಳ ಕಾಲ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಬಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಯಜ್ಞಪೂಜೆಯ ಬಳಿಕ ನಾಗಸಾಧುಗಳ ನೇತೃತ್ವದಲ್ಲಿ ಕುಷ್ಟಗಿ ಪಟ್ಟಣದಲ್ಲಿ ಶೋಭಾ ಯಾತ್ರೆ ಜರುಗಲಿದೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾಧಿಗಳಿಗೆ ಒಂದೂವರೆ ಲಕ್ಷ ಪಂಚಮುಖದ ರುದ್ರಾಕ್ಷಿ ವಿತರಿಸಲಾಗುವುದು ಎಂದು ನಿಡಶೇಸಿಯ ಶ್ರೀ ಮಠದ ಮರಿಸ್ವಾಮೀಜಿ ಶ್ರೀ ವಿಶ್ವೇಶ್ವರಯ್ಯ ಹೇಳೀದರು.
ಈ ವೇಳೆ ಅಮರನಾಥೇಶ್ವರ ಮಹಾದೇವಮಠದ ನಾಗಸಾಧು ಆಶ್ರಮದ ಪೀಠಾಧೀಶರಾದ ಶ್ರೀ ಮಹಾಂತ ಸಹದೇವಾನಂದ ಗಿರೀಜಿ, ಶ್ರೀ ಬಾಲ ಯೋಗಿ ಮಹಾಂತ ಕನ್ಯಾ ಗಿರೀಜಿ ಮಹಾರಾಜ್, ಮಹಾಂತ ಮಹೇಶಾನಂದ ಬಾಬಾಜಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಮಲ್ಲಣ್ಣ ತಾಳದ್, ಮಹೇಶ ಹಿರೇಮಠ ಮತ್ತಿತರರಿದ್ದರು.