Advertisement
ಸದ್ಯ ಹತ್ತಿ ಆವಕ ಆರಂಭವಾಗಿದ್ದು, ಕುಷ್ಟಗಿ ತಾಲೂಕು ಮಾತ್ರವಲ್ಲ ಬೇರೆ ಜಿಲ್ಲೆಗಳಿಂದಲೂ ಹತ್ತಿ ಬರುತ್ತಿದ್ದು, ಟನ್‌ಗಟ್ಟಲೇ ಹತ್ತಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಹತ್ತಿ ಬೆಳೆದ ರೈತರಿಗೆ ಈ ಬೆಳವಣಿಗೆ ಸಾಕಷ್ಟು ಅನುಕೂಲವಾಗಿದೆ. ಇಲ್ಲವಾದರೆ ಹತ್ತಿ ಬೆಳೆದವರು ಸಾಗಾಣಿಕೆಯ ಹೆಚ್ಚುವರಿ ವೆಚ್ಚದಲ್ಲಿ ಗದಗ, ಸಿಂಧನೂರು, ರಾಯಚೂರು ಸಾಗಿಸುವುದು ಅನಿವಾರ್ಯವಾಗಿತ್ತು. ಕಳೆದ ವರ್ಷ ಹತ್ತಿ ಪ್ರತಿ ಕ್ವಿಂಟಲ್‌ಗೆ 9 ಸಾವಿರದಿಂದ 11 ಸಾವಿರ ರೂ. ವರೆಗೆ ಮಾರಾಟವಾಗಿದ್ದು ಸದ್ಯ ಪ್ರತಿ ಕ್ವಿಂಟಲ್ ಗೆ 6,500 ರಿಂದ 7ಸಾವಿರ ರೂ. ಧಾರಣಿ ಇದೆ.
ಕೆಲವೆಡೆ ಬೀಜೋತ್ಪಾದನೆಯ ಗಂಡು ಹತ್ತಿ ಸರಿಯಾದ ಬೆಳವಣಿಗೆ ಇಲ್ಲದೇ ಇಳುವರಿ ಕುಂಠಿತಕ್ಕೆ ಕಾರಣವಾಯಿತು. ಇದರಿಂದ
ಹತ್ತಿ ಇಳುವರಿ ತಕ್ಕಮಟ್ಟಿನ ಗುಣಮಟ್ಟ ಇದ್ದು, ಧಾರಣಿ ಪ್ರತಿ ಕ್ವಿಂಟಲ್‌ಗೆ 6,500 ರೂ. ದಿಂದ 7 ಸಾವಿರ ರೂ. ಇದೆ. ಈಗಿನ
ಪರಿಸ್ಥಿತಿಯಲ್ಲಿ ಈ ಧಾರಣಿ ಉತ್ತಮವಾಗಿದೆ ಎನ್ನುವ ಅಭಿಪ್ರಾಯ. ಮೂರು ದಶಕದ ಹಿಂದೆ ಹತ್ತಿಬೆಳೆಯುತ್ತಿದ್ದರು. ಇಲ್ಲಿ ಬೀಜ ಹಾಗೂ ಹತ್ತಿ ಬೇರ್ಪಡಿಸುವ ಎರಡು ಮಿಲ್‌ಗಳಿದ್ದವು. ಹತ್ತಿ ಉತ್ಪನ್ನ ಕಡಿಮೆಯಾಗುತ್ತಿದ್ದಂತೆ ಮಿಲ್‌ಗಳು ಸ್ಥಗಿತಗೊಂಡವು. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ರೈತರು ಹತ್ತಿ ಬೆಳೆಯಲಾರಂಭಿಸಿದ್ದು ಪರವಾನಗಿ ಪಡೆದ ಮುದೇನೂರು, ಹುಲಿಯಾಪುರ ಖರೀ ದಾರರು ರೈತರಿಂದ ಖರೀದಿಸಿ ಮಾರಾಟ ಮಾಡುತ್ತಿದ್ದು, ಇದು ರೈತರಿಗೆ ಅನಕೂಲವೇ ಆಗಿದೆ ಎನ್ನುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಲಿಮಠ.
Related Articles
Advertisement
ಎಪಿಎಂಸಿಯಲ್ಲಿಲ್ಲ ಪೂರಕ ವ್ಯವಸ್ಥೆಸ್ಥಳೀಯ ಎಪಿಎಂಸಿಯಲ್ಲಿ ಹತ್ತಿಗೆ ಮಾರುಕಟ್ಟೆಗೆ ದೊಡ್ಡದಾದ ಗೋದಾಮು ಹಾಗೂ ಬೆಂಕಿಯಿಂದ ರಕ್ಷಣೆಗೆ ಪೂರಕ ವ್ಯವಸ್ಥಿತ ಮಾರುಕಟ್ಟೆ ಆಗತ್ಯವಿದೆ. ಆದರೆ ಇಲ್ಲಿನ ಎಪಿಎಂಸಿ ಹತ್ತಿ ಹೊರತುಪಡಿಸಿ ಇತರೆ ಕೃಷಿ ಉತ್ಪನ್ನಗಳಿಗೆ ಮಾತ್ರ ಅವಕಾಶವಿದೆ. ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಬೆಳೆ ಹತ್ತಿಗೆ ಆದ್ಯತೆ ನೀಡಿದ್ದು, ಈ ವರ್ಷ ಮಳೆ ಕೊರತೆ ಮಧ್ಯೆಯೂ ಅಲ್ಪಸ್ವಲ್ಪ ಮಳೆಯಲ್ಲಿ
ತಕ್ಕಮಟ್ಟಿನ ಇಳುವರಿ ಬಂದಿದೆ. ಮುಂದಿನ ವರ್ಷದಿಂದ ಎಪಿಎಂಸಿ ವ್ಯಾಪ್ತಿಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ಆರಂಭಿಸುವ ಚಿಂತನೆ ಇದೆ.
ಮಹಾಂತಯ್ಯ ಅರಳಲಿಮಠ,
ಅಧ್ಯಕ್ಷರು, ಎಪಿಎಂಸಿ ವರ್ತಕರ ಸಂಘ ಈ ಮೊದಲು ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವ ವ್ಯವಸ್ಥೆ ಇತ್ತು. ಕಳೆದ 2022ರ ಆಗಸ್ಟ್ ಆದೇಶದನ್ವಯ ರೈತರ ಉತ್ಪನ್ನ ಖರೀದಿಗೆ ಮುಕ್ತಗೊಳಿಸಿದೆ. ಹತ್ತಿ ಖರೀ ದಿ ಹಾಗೂ ಸಂಗ್ರಹಣೆಗೆ ಪೂರಕ ವ್ಯವಸ್ಥೆ ಇಲ್ಲಿಲ್ಲ.
ಟಿ. ನೀಲಪ್ಪ ಶೆಟ್ಟಿ,
ಕಾರ್ಯದರ್ಶಿ ಎಪಿಎಂಸಿ ಕುಷ್ಟಗಿ *ಮಂಜುನಾಥ ಮಹಾಲಿಂಗಪುರ