Advertisement

Tollywood: ದೇವರಕೊಂಡ – ಸಮಂತಾ ಅಭಿನಯದ ‘ಖುಷಿʼ ಸಿನಿಮಾದ ಓಟಿಟಿ ರಿಲೀಸ್‌‌ಗೆ ಡೇಟ್‌ ಫಿಕ್ಸ್

03:01 PM Sep 24, 2023 | Team Udayavani |

ಹೈದರಾಬಾದ್: ವಿಜಯ್‌ ದೇವರಕೊಂಡ – ಸಮಂತಾ ಅಭಿನಯದ ʼಖುಷಿʼ ಸಿನಿಮಾ ಥಿಯೇಟರ್‌ ನಲ್ಲಿ ಮಿಂಚಿದ ಬಳಿಕ ಇದೀಗ ಓಟಿಟಿ ಪರದೆಯಲ್ಲಿ ತೆರೆಕಾಣಲು ಸಿದ್ದವಾಗಿದೆ. ಭಾನುವಾರ(ಸೆ.24 ರಂದು) ಸಿನಿಮಾದ ಓಟಿಟಿ ರಿಲೀಸ್‌ ಡೇಟ್‌ ರಿವೀಲ್‌ ಆಗಿದೆ.

Advertisement

ವಿಪ್ಲವ್ ಮತ್ತು ಆರಾಧ್ಯ ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುತ್ತಾರೆ. ಮುಂದೆ ದಾಂಪತ್ಯ ಜೀವನದಲ್ಲಿನ ಸವಾಲು, ಸಂಕಷ್ಟಗಳನ್ನು‌ ಹೇಗೆ ಎದುರಿಸುತ್ತಾರೆ ಎನ್ನುವ ಅಂಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿನ ದೇವರಕೊಂಡ ಹಾಗೂ ಸಮಂತಾ ಅವರ ಕೆಮೆಸ್ಟ್ರಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು.

ಆ ಮೂಲಕ ವಿಜಯ್‌ ಅವರಿಗೆ ʼಖುಷಿʼ ಸಿನಿಮಾದ ಸಕ್ಸಸ್‌ ನಿಟ್ಟುಸಿರು ಕೊಟ್ಟಿದೆ. ಥಿಯೇಟರ್‌ ನಲ್ಲಿ ಉತ್ತಮವಾಗಿ ಓಡಿದ ಸಿನಿಮಾ ಇದೀಗ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲು ರೆಡಿಯಾಗಿದೆ. ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 30 ಕೋಟಿ ರೂಪಾಯಿಗೆ ಖರೀದಿಸಿತ್ತು. ಅದರಂತೆ ಸಿನಿಮಾ ಇದೇ ಅಕ್ಟೋಬರ್‌ 1 ರಿಂದ ನೆಟ್‌ಫ್ಲಿಕ್ಸ್ ಸ್ಟ್ರೀಮ್‌ ಆಗಲಿದೆ.

ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ʼಖುಷಿʼ ಬಾಕ್ಸ್‌ ಆಫೀಸ್‌ ನಲ್ಲಿ ಮೊದಲ ವಾರ ಉತ್ತಮ ಕಮಾಯಿಯನ್ನು ಮಾಡಿತ್ತು.ʼಖುಷಿʼ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಸಿನಿಮಾದಲ್ಲಿ ಮುರಳಿ ಶರ್ಮಾ, ಸಚಿನ್ ಖೇಡೇಕರ್, ರೋಹಿಣಿ ಸೇರಿದಂತೆ ಇತರ ಪ್ರಮುಖರು ನಟಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next