Advertisement

ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ;ಚಿತ್ರದ ಮೊದಲ ಲುಕ್‌ ಬಿಡುಗಡೆ

03:05 PM Aug 03, 2017 | Team Udayavani |

ಮುನಿರತ್ನ ನಿರ್ಮಾಣದ ಈ ಚಿತ್ರಕ್ಕೆ ಆಗಸ್ಟ್‌ 06ಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆಯಲಿದೆ. ಪೀಣ್ಯ ಬಳಿ ಇರುವ ಪ್ರಭಾಕರ್‌ ಕೋರೆ ಕನ್ವೆನ್‌ಷನ್‌ ಹಾಲ್‌ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಜಿ. ಪರಮೇಶ್ವರ್‌, ಉಮಾಶ್ರೀ, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ.

Advertisement

ಹಿರಿಯ ನಟ ಶ್ರೀನಾಥ್‌ “ಕುರುಕ್ಷೇತ್ರ’ ಚಿತ್ರದಲ್ಲಿ ಧೃತರಾಷ್ಟ್ರ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಶ್ರೀಕೃಷ್ಣ , ಹಿರಿಯ ನಟರಾದ ಅಂಬರೀಶ್‌ ಅವರು ಭೀಷ್ಮಾಚಾರ್ಯ, ಶ್ರೀನಿವಾಸ ಮೂರ್ತಿಗಳು ದ್ರೋಣಾಚಾರ್ಯ, ಅವಿನಾಶ್‌ ಅವರು ಗಾಂಧರ್ವ ರಾಜನಾಗಿ ನಟಿಸುತ್ತಿದ್ದಾರೆ.

 “ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರವನ್ನು ಯಾರು ಮಾಡುತ್ತಾರೆಂಬ ಕುತೂಹಲವಿತ್ತು. ಬಹುಭಾಷಾ ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.ನಿಖಿಲ್ ಕುಮಾರ್‌ ಅಭಿಮನ್ಯುವಾಗಿ ನಟಿಸಿದರೆ, ಚಿತ್ರದಲ್ಲಿ ಸಾಯಿಕುಮಾರ್‌ ಶಕುನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಕೂಡಾ ನಟಿಸುತ್ತಿದ್ದು, ಅವರಿಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನ್‌ ವಿನ್ಸೆಂಟ್‌ ಛಾಯಾಗ್ರಹಣ, “ಕಿಂಗ್‌ ಸಾಲೋಮನ್‌’ ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಒಂದಷ್ಟು ಪಾತ್ರಗಳಿಗೆ ಕಲಾವಿದರ ಆಯ್ಕೆಯಾಗಿದ್ದು, ಇನ್ನಷ್ಟು ಮಂದಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next