Advertisement
ನೀರಾವರಿ ಇಲಾಖೆ ಅಧಿಕಾರಿಗಳು ಏಕಾಏಕಿ ಗುಡಿಸಲುಗಳನ್ನು ತೆರವುಗೊಳ್ಳಿಸಲು ಎಚ್ಚರಿಕೆ ನೀಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆಸ್ಥಿಕೆವಹಿಸಿ ನಮಗೆ ಸೂರು ಕಲ್ಪಿಸಬೇಕು. ಇಲ್ಲದಿದ್ದರೆ ಏ.23ರಂದು ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಅಭಿಯಂತರರು ಲಕ್ಷ್ಮೀ ಪುರ ಗ್ರಾಮದ ಎಚ್‌ಎಲ್‌ಸಿ ಮುಖ್ಯ ಕಾಲುವೆ ಬಳಿಯಲ್ಲಿ ಸುಮಾರು 30 ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು 15 ರಿಂದ 20 ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಈಗ ಏಕಾಏಕಿ
ಗುಡಿಸಲುಗಳನ್ನು ತೆರವುಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರ್
ನಮಗೆ ಸೂಕ್ತ ನಿವೇಶನ ಒದಗಿಸಬೇಕು. ಇಲ್ಲದಿದ್ದರೆ ಏ.23 ರಂದು ನಡೆಯುವ
ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಸುಮಾರು 20 ವರ್ಷಗಳಿಂದ ಇಲ್ಲಿ ವಾಸಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದೇವೆ. ಏಕಾಏಕಿ ಈ ಸ್ಥಳವನ್ನು ತೆರವುಗೊಳಿಸಿದರೆ ನಾವು ಎಲ್ಲಿ ಹೋಗಿ ಜೀವನ ನಡೆಸಬೇಕು. ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಬೇರೆ ಕಡೆ ನಮಗೆ ನಿವೇಶನ ಒದಗಿಸಿ ಸೂರು ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ಮಾಡಬೇಕೆಂದು ಒತ್ತಾಯಿಸಿದರು. ನಿವಾಸಿ ಹುಲಿಗಮ್ಮ ಮಾತನಾಡಿ, ಕಾಲುವೆ ಬಳಿಯಲ್ಲಿ ಸುಮಾರು ವರ್ಷಗಳಿಂದ ಗಾಳಿ, ಮಳೆ, ಲೆಕ್ಕಿಸದೆ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಯಾಜಮಾನ್ರು ಮದ್ಯ ವ್ಯಸನಿಗಳು. ಆದರೂ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಚಿಕ್ಕ ಗುಡಿಸಲಿನಲ್ಲಿ ಚಿಕ್ಕ ಸಂಸಾರ ಸಾಗಿಸಿಕೊಂಡು ಹೊಗುತ್ತಿದ್ದೇವೆ.ಆದರೆ ಮೂರು ದಿನಗಳಿಂದ ನೀರಾವರಿ ಇಲಾಖೆ ಅಭಿಯಂತರರು ಗುಡಿಸಲುಗಳನ್ನು ತೆರವುಗೊಳಿಸುವಂತೆ ನಮಗೆ ತುಂಬ ಕಷ್ಟ ಕೊಡುತ್ತಿದ್ದಾರೆ. ಒಂದು ವೇಳೆ ನಮ್ಮ ಗುಡಿಸಲುಗಳನ್ನು ತೆರವುಗೊಳಿಸಿದರೆ ನಾವು ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ ನಮಗೆ ಬೇರೆ ಕಡೆ ಜಾಗ ಕಲ್ಪಿಸುವವರೆಗೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
Related Articles
Advertisement