Advertisement

ರಸ್ತೆ ಕಾಮಗಾರಿ ಪ್ರಾರಂಭಕ್ಕೆ ಕಾರ್ಖಾನೆ ಲಾರಿಗಳು ಓಡಾಡದಂತೆ ಬಂದ್ ಮಾಡಿ: ಶಾಸಕ ತುಕಾರಾಂ

05:49 PM Dec 13, 2022 | Team Udayavani |

ಕುರುಗೋಡು: ರಸ್ತೆ ಕಾಮಗಾರಿ ಮುಂಚಿತವಾಗಿ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಲಾರಿಗಳನ್ನು ಬಂದ್ ಮಾಡಿ ಇದಕ್ಕೆ ನಾನು ಕೂಡ ಬರುತ್ತೇನೆ ಅವರು ಯಾವ ಸಚಿವರನ್ನು ಕರೆದುಕೊಂಡು ಬರಲಿ ಎಂದು ಶಾಸಕ ಈ. ತುಕಾರಾಂ ಹೇಳಿದರು.

Advertisement

ಡಿಎಂಎಪ್ ಅನುದಾನದಡಿಯಲ್ಲಿ ಮಂಜೂರಾದ 1ಕೋಟಿ 40 ಲಕ್ಷ ವೆಚ್ಚದಲ್ಲಿ ಕುಡುತಿನಿ ಪಟ್ಟಣದ ಏಳುಬೆಂಚಿ ಗ್ರಾಮಕ್ಕೆ ಹೋಗುವ ಡಾಂಬರೀಕರಣ ರಸ್ತೆಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು. ಈಗಾಗಲೇ ಕುಡುತಿನಿಯಿಂದ ಏಳುಬೆಂಚಿ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಒಟ್ಟು 4 ಕೋಟಿ 50 ಲಕ್ಷ ಮಂಜೂರಾಗಿದ್ದು, ಇದರಲ್ಲಿ ಸದ್ಯ ಕುಡುತಿನಿಯ ರೈಲ್ವೆ ಗೆಟ್ ಬಳಿ ವರೆಗೆ 1 ಕೋಟಿ 40 ಲಕ್ಷ ಮತ್ತು ಗೆಟ್ ನಿಂದ ಏಳುಬೆಂಚಿ ಗ್ರಾಮದವರೆಗೆ 3 ಕೋಟಿ ಬಿಡುಗಡೆಗೊಂಡಿದೆ ಎಂದರು.

ಕಾಮಗಾರಿ ಪ್ರಾರಂಭ ವೇಳೆ ಲಾರಿಗಳು ಓಡಾಡಿದರೆ ಪ್ರಯೋಜನೆ ಇರುವುದಿಲ್ಲ ಆದ್ದರಿಂದ ಈ ಮಾರ್ಗವಾಗಿ ಬರುವ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಪ್ರಾರಂಭ ಮಾಡಬೇಕು ಒಂದು ವೇಳೆ ಹಾಗೆ ಓಡಾಡಿದರೆ ಪ್ರತಿಭಟನೆ ಮಾಡಿ ಬಂದ್ ಮಾಡಿ ಇದಕ್ಕೆ ನಮ್ಮ ಬೆಂಬಲ ಇರುತ್ತದೆ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೂಡ ತಿಳಿಸುತ್ತೇನೆ ಎಂದರು.

ಕಳೆದ ದಿನಗಳ ಹಿಂದೆ ರಾಜ್ಯದಲ್ಲಿ ಕೋವಿಡ್ ಬಂದು ಪ್ರತಿಯೊಬ್ಬರಿಗೂ ಸಮಸ್ಯೆ ತಂದೊಡ್ಡಿದೆ ಅದರ ಪರಿಣಾಮದಿಂದ ಈಗಲೂ ಜನರು ಚೇತರಿಸಿಕೊಳ್ಳಲು ಆಗುತ್ತಿಲ್ಲ ಆದ್ದರಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ಮಾಡಲಾಗುವುದು ಎಂದರು.

ಗುತ್ತಿಗೆದಾರರು ಸರಿಯಾದ ಸಮಯಕ್ಕೆ ರಸ್ತೆಗಳನ್ನು ಪೂರ್ಣಗೊಳಿಸಿ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡುವಂತೆ ಹೇಳಿದರು.

Advertisement

ಅಲ್ಲದೆ ಏಳುಬೆಂಚಿಯಿಂದ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸುಮಾರು ವರ್ಷದಿಂದ ಹದೆಗೆಟ್ಟು ಹೋಗಿದ್ದು, ಇದರಿಂದ ಕುರುಗೋಡಿಗೆ ಹೋಗುವ ಜನರು ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಹೋಗುವ ಜನರು ಬೇಸತ್ತು ಹೋಗಿದ್ದು, ಪ್ರತಿಯೊಂದಕ್ಕೂ ಕಿರಿಕಿರಿ ಉಂಟಾಗಿತ್ತು ಸಿದ್ದಮ್ಮನಹಳ್ಳಿ ಜನರು ಹಾಗೂ ಶಾಸಕ ಗಣೇಶ್ ಅವರ ಮನವಿ ಮೇರೆಗೆ ಡಿಎಂಎಪ್ ಅನುದಾನ ಅಡಿಯಲ್ಲಿ 3 ಕೋಟಿ ಮಂಜೂರಾಗಿದೆ ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಏಳುಬೆಂಚಿ ಗ್ರಾಮದಿಂದ ತಿಮ್ಮಲಾಪುರ ಗ್ರಾಮಕ್ಕೆ ಹೋಗುವ ರಸ್ತೆ ಗೆ 50 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಭೂಮಿ ಪೂಜೆ ಮಾಡಿದರು. ನಂತರ ಗ್ರಾಪಂಗೆ ಭೇಟಿ ನೀಡಿ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದರು. ಗ್ರಾಪಂ ಆವರಣ ಸ್ವಚ್ಛತೆಯಿಂದ ಇಲ್ಲದ ಕಾರಣ ಅಧಿಕಾರಿಗಳಿಗೆ ಹಾಗೂ ಜೆಇ ಗಳಿಗೆ ಕೂಡಲೇ ಅವರಣದ ತುಂಬಾ ಕಾಂಕ್ರಿಟ್ ಹಾಕುವಂತೆ ತಾಕಿತು ಮಾಡಿದರು. ಅಲ್ಲದೆ ಆವರಣದಲ್ಲಿ ಜನರು ಕುಳಿತುಕೊಳ್ಳುವುದಕ್ಕೆ ಹಾಸನಗಳು ಕಲ್ಪಿಸುವಂತೆ ಹೇಳಿದರು.

ಇನ್ನೂ ಏಳುಬೆಂಚಿ ಅಂದ್ರೆ ನಮ್ಮಗೆ ತುಂಬಾ ಅಭಿಮಾನ ಸಂಡೂರು ಗೆ ಅನುದಾನ ಕಡಿಮೆ ಹಾಕಿದರು ಏಳುಬೆಂಚಿಗೆ ಕಡಿಮೆ ಮಾಡಲ್ಲ ಎಂದರು. ತದನಂತರ ಕುಡುತಿನಿ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

ಇದನ್ನೂ ಓದಿ: ಅಶ್ಲೀಲ ಚಿತ್ರ ಪ್ರಕರಣ: ರಾಜ್ ಕುಂದ್ರಾಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next