ಕುರುಗೋಡು: ತಾಲೂಕು ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಟಿ. ಎಚ್. ಸುರೇಶ್ ಬಾಬು ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಬ್ಯಾನರ್ ಗೆ ಅನಾಮಧೇಯ ವ್ಯಕ್ತಿಗಳು ಹಸುವಿನ ಸೆಗಣಿ ಎಸೆಯುವ ಮೂಲಕ ಮಸಿ ಬಳಿದಿದ್ದಾರೆ.
ಮಹಾ ಶಿವರಾತ್ರಿ ಪ್ರಯುಕ್ತ ಟಿ. ಎಚ್. ಸುರೇಶ್ ಬಾಬು ಅಭಿಮಾನಿ ಬಳಗದ ವತಿಯಿಂದ ಚೆಳಗುರ್ಕಿ ಎರ್ರಿತಾತ ಹಾಗೂ ಅಲ್ಲಿ ಪುರ ಮಹಾದೇವಪ್ಪ ತಾತನವರ ಭಕ್ತಿ ಪ್ರಧಾನ ನಾಟಕ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬ್ಯಾನರ್ ಅಳವಡಿಸಲಾಗಿತ್ತು.
ಎಮ್ಮಿಗನೂರು ಗ್ರಾಮದಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರ ಅಭಿಮಾನಿಗಳು ಶಿವರಾತ್ರಿ ಅಂಗವಾಗಿ ಅವರ ಬ್ಯಾನರ್ ಹಾಕಲಾಗಿದೆ. ಆದರೆ, ಕಿಡಿಗೇಡಿಗಳು ಯಾರು ಇಲ್ಲದ ಸಮಯದಲ್ಲಿ ಬ್ಯಾನರ್ ನಲ್ಲಿರುವ ಸುರೇಶ್ ಬಾಬು ಮುಖಕ್ಕೆ ಎಸೆದಿರುವುದು ಮಂಗಳವಾರ (ಫೆ.21) ಮುಂಜಾನೆ ಕಂಡು ಬಂದಿದೆ.
ಈ ಕೃತ್ಯವು ಜರಗಿರುವುದರಿಂದ ಗ್ರಾಮದ ಜನರ ಅಪಹಾಸ್ಯಕ್ಕೆ ಕಾರಣವಾಗಿದೆ.
Related Articles
ಈ ಕೃತ್ಯ ಕಂಡುಬಂದ ಹಲವು ಗಂಟೆಗಳ ನಂತರ ಕಾರ್ಯಕರ್ತರು ಮುಖಕ್ಕೆ ಹಸುವಿನ ಸೆಗಣಿ ಎಸೆದಿರುವುದನ್ನು ತೊಳೆದು ಸ್ವಚ್ಚಗೊಳಿಸಲು ಮುಂದಾಗಿದ್ದಾರೆ.
ಈಗಾಗಲೇ ಸುರೇಶ್ ಬಾಬು ಬ್ಯಾನರ್ ಗೆ ಹೆಂಡೆ ಎರಚಿರುವುದು ಜಗತ್ ಜಾಹಿರಾತಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಗ್ರಾಮದಲ್ಲಿ ಎಲ್ಲಂದರಲ್ಲಿ ಸುರೇಶ್ ಬಾಬು ಮುಖಕ್ಕೆ ಸೆಗಣಿ ಎಸಗಿರುವ ಕೃತ್ಯ ಕಾರ್ಯಕರ್ತರು ಅರಿತಿದ್ದು, ಹಲವು ಗೊಂದಲಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಈ ಹಿಂದೆ ಕೂಡ 2022 ಆಗಸ್ಟ್ 5 ರಂದು ಟಿ. ಎಚ್. ಸುರೇಶ್ ಅವರ ಜನ್ಮದಿನದ ಅಂಗವಾಗಿ ಗ್ರಾಮದಲ್ಲಿ ಅಳವಡಿಸಿದ್ದ ಬ್ಯಾನರ್ ಗೆ ಕೂಡ ಕೆಲ ಕಿಡಿಗೇಡಿಗಳು ಸೆಗಣಿ ಎಸೆದು ಹಲವು ವಿಷಯಗಳಿಗೆ ಗ್ರಾಸ ಉಂಟು ಮಾಡಲಾಗಿತ್ತು.
ಇದರ ನಡುವೆಯೂ ಮಾಜಿ ಶಾಸಕ ಸುರೇಶ್ ಬಾಬು ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡಿದ್ದ ಭಕ್ತಿ ಪ್ರಧಾನ ನಾಟಕ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ಅದ್ಧೂರಿಯಾಗಿ ಜರುಗಿ ನೋಡುಗರ ಗಮನ ಸೆಳೆದಿದೆ.