Advertisement

ಚಾನಳ್‌ ಗ್ರಾಮದ ಗೋಳ್‌!

01:21 PM Sep 08, 2019 | Naveen |

ಸುಧಾಕರ್‌ ಮಣ್ಣೂರು
ಕುರುಗೋಡು:
ಮೂಲ ಸೌಕರ್ಯದ ಕೊರತೆ, ದುರಸ್ತಿಯಾಗದ ಚರಂಡಿ-ರಸ್ತೆ, ಸಿಗದ ಕಾಮಕಾರಿಗಳ ಭಾಗ್ಯ ಇದು ಚಾನಳ್‌ ಗ್ರಾಮದ ದುಸ್ಥಿತಿ.

Advertisement

ಹೌದು. 3500 ಜನಸಂಖ್ಯೆ ಒಳಗೊಂಡ ಗ್ರಾಮ. 1500ಕ್ಕೂ ಹೆಚ್ಚು ಕುಟುಂಬಗಳ ವಾಸ. 11 ಗ್ರಾಪಂ ಸದಸ್ಯರಿದ್ದರೂ ಬರುವ ಅನುದಾನದಿಂದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.

ಗ್ರಾಮದ ದಲಿತ ಕಾಲೋನಿಯ ಮುಖ್ಯ ರಸ್ತೆ ಬದಿಯಲ್ಲಿ ಪೈಪ್‌ಲೈನ್‌ ಸೋರಿಕೆಯಿಂದ ರಸ್ತೆಯಲ್ಲೆಲ್ಲ ನೀರ ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಗ್ರಾಮದ ಹಲವು ವಾರ್ಡ್‌ಗಳ ಚರಂಡಿಗಳು ಹೂಳಿನಿಂದ ತುಂಬಿ ಹೋಗಿದೆ. ಚರಂಡಿ ಪಕ್ಕದಲ್ಲಿ ಒಡಾಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಒಡಾಡಬೇಗಿದೆ. ಅದರಲ್ಲಿ ಇನ್ನೂ ಮಳೆ ಬಂದರೆ ಚರಂಡಿಯಿಂದ ಬರುವ ನೀರು ಮುಂದುಗಡೆ ಸಾಗದೆ ಅಲ್ಲೇ ಸಂಗ್ರಹಗೊಂಡು ರಸ್ತೆಯ ಮೇಲೆ ನೀರು ಹರಿದು ಬರುತ್ತವೆ. ಇನ್ನೂ ಹಲವು ಸಾರ್ವಜನಿಕರ ಮನೆಗಳ ಅಕ್ಕಪಕ್ಕದ ವಾರ್ಡಿನ ಚರಂಡಿಗಳು ಸರಿಯಾಗಿ ಸ್ವಚ್ಛತೆ ಕಾಣದೆ ಎಲ್ಲಂದರಲ್ಲಿ ಕಟ್ಟಿ ನಿತ್ಯ ಗಬ್ಬುನಾರುತ್ತಿದ್ದು ಇದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ.

ಕುಡಿಯುವ ನೀರಿಗೆ ಹಾಹಾಕಾರ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ 1 ಇದ್ದು ಅದಕ್ಕೆ ಫಿಲ್ಟರ್‌ ವ್ಯವಸ್ಥೆ ಇಲ್ಲದಾಗಿದೆ. ಕೆರೆಯಿಂದ ಅಥವಾ ಟ್ಯಾಂಕರ್‌ಗಳಿಂದ ಘಟಕಕ್ಕೆ ಬರುವ ನೀರು ಫಿಲ್ಟರ್‌ ಆಗದೆ ನೇರವಾಗಿ ಸಾರ್ವಜನಿಕರ ನಲ್ಲಿಗಳಿಗೆ ಸರಬರಾಜು ಅಗುತ್ತಿವೆ. ಸಾರ್ವಜನಿಕರು ನಿತ್ಯ ಅದೇ ನೀರನ್ನು ಸೆವಿಸುತ್ತಿದ್ದು, ನೀರಲ್ಲಿ ಕ್ರಿಮಿಕೀಟಗಳು ಮತ್ತು ವಿಷಜಂತುಗಳು ಬರುವ ಸಾಧ್ಯತೆ ಇದ್ದು ಅದರ ಜತೆಗೆ ಜನರ ಆರೋಗ್ಯಕ್ಕೆ ಸುರಕ್ಷಿತವಿಲ್ಲದಂತಾಗಿದೆ. ಸುಮಾರು ದಿನಗಳಿಂದ ಕೆಟ್ಟು ಹೋದ ಘಟಕದ ಫಿಲ್ಟರ್‌ ದುರಸ್ತಿಗೊಳಿಸಲು ಗ್ರಾಪಂ ಇಲಾಖೆ ಹಿಂದೇಟು ಹಾಕುತ್ತಿದೆ.

ಗ್ರಾಮದ ದಲಿತ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಪೈಪ್‌ಲೈ ಒಡೆದು ನೀರು ಸೋರಿಕೆ ಅಗುತ್ತಿದೆ. ಅದಲ್ಲದೆ ಹಲವು ಚರಂಡಿಗಳು ಹೂಳಿನಿಂದ ತುಂಬಿದ್ದು. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ವೀರಾರೆಡ್ಡಿ,
 ಗ್ರಾಪಂ ಸದಸ್ಯ ಚಾನಳ್‌ ಗ್ರಾಮ

Advertisement
Advertisement

Udayavani is now on Telegram. Click here to join our channel and stay updated with the latest news.

Next