Advertisement
ಈ ಹಿಂದೆ ಕುರುಗೋಡಿನ ಸರಕಾರಿ ಬಾಲಕರ ಪ್ರೌಢಶಾಲೆಯ ಎದುರುಗಡೆ 1992-93ರಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿತ್ತು. ಇದನ್ನು ಅಂದಿನ ಶಾಸಕ ಶಿವರಾಮರೆಡ್ಡಿ ಉದ್ಘಾಟಿಸಿದ್ದರು. ಆದರೆ ಸುಮಾರು ವರ್ಷಗಳಿಂದ ಈ ನಿಲ್ದಾಣವು ಶಿಥಿಲಾವ್ಯಸ್ಥೆಯಲ್ಲಿದ್ದು ಅದರಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಸುತ್ತಮುತ್ತ ತಡೆಗೋಡೆ, ನಿಲ್ದಾಣದ ಆವರಣದಲ್ಲಿ ಸ್ವತ್ಛತೆ ಕೊರತೆಯಿಂದ ಯಾವ ಪ್ರಯಾಣಿಕರು ಬಸ್ ನಿಲ್ದಾಣದ ಕಡೆಗೆ ಹೋಗದೆ ಮುಖ್ಯ ವೃತ್ತದಲ್ಲಿ ಬಿಸಿಲಲ್ಲೆ ನಿಂತು ಬಸ್ ಕಾಯುತ್ತಿದ್ದಾರೆ.
Related Articles
ಬಳಿಯಲ್ಲಿದ್ದಂತಹ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಪ್ರಯಾಣಿಕರಿಗೆ ನೂತನ ಬಸ್ ನಿಲ್ದಾಣದ ವ್ಯವಸ್ಥೆ ಮಾಡದೆ ಅ ಜಾಗದಲ್ಲಿ ಏಕಾಏಕಿ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಸುತ್ತಮುತ್ತಲಿನ 24 ಹಳ್ಳಿಯ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ
ಕುರುಗೋಡು ತಾಲೂಕಿನಲ್ಲಿ ಪ್ರಮುಖವಾಗಿರುವ ನಾಡಗೌಡರ ಮುಖ್ಯವೃತ್ತಕ್ಕೆ ಸೇರಿಕೊಳ್ಳುತ್ತಾರೆ. ಜನರ ಪ್ರತಿಯೊಂದು ಕೆಲಸಕ್ಕೆ ನಾಡಗೌಡರ ಮುಖ್ಯವೃತ್ತದ ಬಳಿಯಲ್ಲಿ ಬಂದು ವ್ಯವಹಾರ ಸೇರಿದಂತೆ ಇತರೆ ಕಾರ್ಯಗಳು ಅಲ್ಲಿಂದ ಪ್ರಾರಂಭವಾಗುತ್ತವೆ. ಆದ್ದರಿಂದ ವೃತ್ತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹಾಗೂ ಬೇರೆ ಕಡೆ ತೆರಳುವ ಪ್ರಯಾಣಿಕರು ದಾಸ್ತಿ ವೃತ್ತದಲ್ಲಿ ನಿಲ್ಲುವುದರಿಂದ ಅದರ ಪಕ್ಕದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುವುದು ತಾಲೂಕಿನ ಪ್ರಗತಿಪರ ಸಂಘಟನೆಯವರು ಹಾಗೂ ಮುಖಂಡರ ಒತ್ತಾಯವಾಗಿದೆ.
Advertisement
ಜಾತ್ರೆಗೆ ಬರುವ ಭಕ್ತಾದಿಗಳಿಗೆ ತೊಂದರೆ: ಮಾ. 9ರಂದು ಕುರುಗೋಡಿನ ಅರಾಧ್ಯ ದೈವ ಶ್ರೀದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವವಿದ್ದು ಪ್ರತಿ ವರ್ಷ ಜಾತ್ರೆಗೆ ಕಂಪ್ಲಿ ಮಾರ್ಗವಾಗಿ ಬರುವ ಗಂಗಾವತಿ, ಕಲ್ಲುಕಂಬ, ಎಮ್ಮಿಗನೂರು, ಗುತ್ತಿಗನೂರು, ಕುಡಿತಿನಿ ಹೊಸಪೇಟೆ ಸೇರಿದಂತೆ ಬಹುತೇಕ ಗ್ರಾಮಗಳಿಂದ ಬರುವ ಪ್ರಯಾಣಿಕರು ಮತ್ತು ಭಕ್ತಾದಿ ಗಳ ಎತ್ತನ ಬಂಡಿ, ಬಿರು ಬಿಸಿಲಲ್ಲೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು ಬಿರು ಬಿಸಿಲಲ್ಲೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು ಟ್ರ್ಯಾ ಕ್ಟರ್‌ಗಳು, ಕಾರುಗಳು ಇತರೆ ಪ್ರತಿಯೊಂದು ವಾಹನಗಳು ಬಸ್ ನಿಲ್ದಾಣದ ಆವರಣದಲ್ಲಿ ಸೇರಿಕೊಳ್ಳುತ್ತಿದ್ದು ಈ ವರ್ಷ ನಿಲ್ದಾಣದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಬರುವ ಪ್ರಯಾಣಿಕರಿಗೆ ಹಾಗೂ ಭಕ್ತಾ ದಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮುಖ್ಯ ವೃತ್ತದ ಬಳಿಯಲ್ಲಿ ಹಳೆ ಬಸ್ ನಿಲ್ದಾಣವಿತ್ತು. ಅದರ ಜಾಗದಲ್ಲಿ ಉದ್ಯಾನವನ ಮಾಡಿದ್ದಾರೆ. ವೃತ್ತದಲ್ಲಿ ಹೆಚ್ಚು ಜನ ಸೇರುವುದರಿಂದ ನೂತನ ನಿಲ್ದಾಣ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಈಗಾಗಲೇ ಇರುವ ಬಸ್ ನಿಲ್ದಾಣ ಶಿಥಿಲಾವ್ಯಸ್ಥೆ ತಲುಪಿದೆ. ಅದರಲ್ಲಿ ಸೌಲಭ್ಯಗಳು ಇಲ್ಲ. ಅಲ್ಲಿಗೆ ಯಾರು ಹೋಗುವುದಿಲ್ಲ. ನಿಲ್ದಾಣದ ಎಲ್ಲವು ದುರಸ್ತಿ ಮಾಡದೆ ಅನುದಾನ ನೆಪ ಹೇಳಿ ತಮಗೆ ಬೇಕಿದ್ದ ಕಾಮಗಾರಿ ನಡೆಸುತ್ತಿದ್ದಾರೆ. ಅದು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಯಾಣಿಕರು ಬಿಸಿಲಲ್ಲಿ ನಿಂತು ಬಸ್‌ಗಾಗಿ ಕಾಯಬೇಕಾದ ಸ್ಥಿತಿ ಇದೆ.
ಎಚ್.ಎಂ. ವಿಶ್ವನಾಥ ಸ್ವಾಮಿ, ಬೀದಿ ಬದಿ
ವ್ಯಾಪಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಬಸ್ ನಿಲ್ದಾಣದಲ್ಲಿ ನಡೆಯುವ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಿಕೊಡುವಂತೆ ಇಂಜಿನಿಯರ್ ಗಳಿಗೆ ತಿಳಿಸಿದ್ದೇನೆ. ಇನ್ಮುಂದೆ ನಿಲ್ದಾಣದಲ್ಲಿ ಯಾರೇ ಬಂದು ಅಸ್ವಚ್ಛತೆ ವಾತಾವರಣ ನಿರ್ಮಾಣ ಮಾಡಲು ಅವಕಾಶ ಇಲ್ಲ. ನಮ್ಮ ಸಿಬ್ಬಂದಿ ಇರುತ್ತಾರೆ. ಅದರಲ್ಲಿ ಜಾತ್ರೆ ಹತ್ತಿರ ಬಂದಿರುವುದರಿಂದ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳು ನಿಲ್ದಾಣದಲ್ಲಿ ಸಿಗಲಿದೆ.
ಗಂಗಾಧರ್ ಕುರುಗೋಡು,
ಬಸ್ ಘಟಕದ ವ್ಯವಸ್ಥಾಪಕ ಸುಧಾಕರ್ ಮಣ್ಣೂರು