ಕರ್ನೂಲು: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶ್ರೀಶೈಲಂ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ “ಸುಳ್ಳಿನ’ ಸೋರೆ ಕಾಯಿ ಮಾರಿ, 2 ಕೋಟಿ ರೂ. ವರೆಗೆ ಲಾಭ ಪಡೆದು ಕೊಂಡು ವಂಚಿಸಿದ ಆರೋಪದ ಮೇಲೆ 21 ಜನರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಶ್ರೀಶೈಲ ದೇಗುಲದ ಬಳಿಯ ಆಶ್ರಮ ವೊಂದಕ್ಕೆ ಸೇರಿದವರು ಎನ್ನಲಾಗಿದ್ದು, ಭಕ್ತಾದಿಗಳನ್ನು ವಂಚಿಸಲು ಅವರು ಆಕಾರದಲ್ಲಿ ತೀರಾ ಉದ್ದವಿರುವ ಸೋರೇಕಾಯಿಯನ್ನು ಬಳಸಿದ್ದರು. ಉದ್ದದ ಸೋರೇಕಾಯಿಯನ್ನು “ನಾಗ ಸೋರೇಕಾಯಿ’ ಎಂದು ಕರೆಯುವುದುಂಟು.
ತಮ್ಮಲ್ಲಿನ ನಾಗ ಸೋರೇಕಾಯಿಗಳಲ್ಲಿ ವಿಶೇಷ ಶಕ್ತಿಯಿದ್ದು ಅದನ್ನು ಕೊಂಡೊಯ್ದರೆ ಸಮಸ್ಯೆಗಳು ನಿವಾರಣೆಯಾಗಿ ಮನೆ ಸುಭಿಕ್ಷವಾಗುತ್ತದೆ ಎಂದು ಭಕ್ತಾದಿಗಳ ಮುಂದೆ ರೀಲು ಬಿಡುತ್ತಿದ್ದರು. ಅದನ್ನು ನಂಬಿದ ಕೆಲ ಭಕ್ತರು, ಒಂದೊಂದು ಸೋರೆಕಾಯಿಗೂ ಲಕ್ಷಾಂತರ ರೂ. ನೀಡಿ ಖರೀದಿಸಿದ್ದಾರೆ! ಅಲ್ಲಿಗೆ, ತಮ್ಮ ಲ್ಲಿನ ಸೋರೆಕಾಯಿ ದಾಸ್ತಾನಿನಿಂದ ಏನಿಲ್ಲವೆಂದರೂ 1ರಿಂದ 2 ಕೋಟಿ ರೂ.ಗಳನ್ನು ಆರೋಪಿಗಳು ಗಳಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ನೋಂದಣಿ ಬೇಡ
ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಿಂದ ಭಾರತಕ್ಕೆ ಆಗಮಿಸುವವರು ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ನೇರವಾಗಿ ಟಿಕೆಟ್ ಖರೀದಿ ಪ್ರಯಾಣಿಸಬಹುದು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೋಮವಾರ ತಿಳಿಸಿದೆ.
ಭಾರತ ಮತ್ತು ಯುಇಎ ನಡುವೆ ವಿಮಾನ ಪ್ರಯಾಣದ ಬಗ್ಗೆ ಒಪ್ಪಂದ ಇದೆ. ಹೀಗಾಗಿ ನೋಂದಣಿ ಅಗತ್ಯವಿಲ್ಲ ಎಂದು ವೈಮಾನಿಕ ಸಂಸ್ಥೆ ಪ್ರತಿಪಾದಿಸಿದೆ. ವಿದೇಶಾಂಗ ಸಚಿವಾಲಯ ಕಳೆದ ವಾರ ನೀಡಿದ್ದ ಮಾಹಿತಿ ಪ್ರಕಾರ ವಂದೇ ಭಾರತ್ ಮಿಷನ್ ವ್ಯಾಪ್ತಿಯಲ್ಲಿ17.2 ಲಕ್ಷ ಮಂದಿ ಭಾರತೀಯರು ಸ್ವದೇಶಕ್ಕೆ ಆಗಮಿಸಿದ್ದಾರೆ.