Advertisement
ಜು. 2ರಂದು ಪ್ರಕಟವಾಗಿದ್ದ ಅಂಗನವಾಡಿ ಎದುರಲ್ಲೇ ತ್ಯಾಜ್ಯ; ಸಾಂಕ್ರಾಮಿಕ ರೋಗ ಭೀತಿ ಶೀರ್ಷಿಕೆಯ ವರದಿಯಿಂದಾಗಿ ಕೂಡಲೇ ಎಚ್ಚೆತ್ತು ಕೊಂಡಿರುವ ಎಲ್ಲೂರು ಗ್ರಾ.ಪಂ. ಕಸ – ತ್ಯಾಜ್ಯವನ್ನು ತೆರವುಗೊಳಿಸಿ, ತ್ಯಾಜ್ಯದ ರಾಶಿಯಿದ್ದ ಪ್ರದೇಶವನ್ನು ಶುಚಿಗೊಳಿಸಿದೆ.
ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಎಲ್ಲೂರು ಗ್ರಾ.ಪಂ. ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಅಧಿಕಾರಿ ಕೂಡಲೇ ಸ್ಪಂದಿಸಿದ್ದು, ಮಂಗಳವಾರ ಸಂಜೆ ಜೆಸಿಬಿ ಮೂಲಕ ಹೊಂಡ ತೆಗೆದು ತ್ಯಾಜ್ಯ ವಿಲೇವಾರಿ ಮಾಡಿಸಿದೆ, ಮಾತ್ರವಲ್ಲದೆ ಜನರು ಮುಂದೆ ಇಲ್ಲಿ ಕಸ ಎಸೆಯದಂತೆ ಜಾಗೃತಿಗಾಗಿ ಬಾಳೆ ಗಿಡಗಳನ್ನು ನೆಡಲಾಗಿದೆ. ಬೋರ್ಡ್ ಅಳವಡಿಕೆಗೆ ಚಿಂತನೆ
ಇಲ್ಲಿ ಕಸ – ತ್ಯಾಜ್ಯ ಎಸೆಯಬಾರದೆಂದು ದುರ್ಗಾ ನಗರದ ಜನರಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೂ ಜನ ಇಲ್ಲೇ ಕಸ ಎಸೆದು ಹೋಗಿದ್ದರಿಂದ ಇದು ತ್ಯಾಜ್ಯದ ಕೊಂಪೆ ಬೆಳೆಯುವಂತಾಗಿತ್ತು. ಮುಂದೆ ಇಲ್ಲಿ ಕಸ ಎಸೆಯು ವುದನ್ನು ನಿಷೇಧಿಸಲಾಗಿದೆ ಎಂಬ ಬೋರ್ಡ್ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಎಲ್ಲೂರು ಗ್ರಾ.ಪಂ. ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉದಯವಾಣಿಗೆ ತಿಳಿಸಿದ್ದಾರೆ.