Advertisement

Kunigal; ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನ ಕೊಲೆ: ಐವರ ಬಂಧನ

07:40 PM Jun 13, 2024 | Team Udayavani |

ಕುಣಿಗಲ್ : ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ (27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತಗೆರೆ ಪಾಳ್ಯದ ಸೀನಾ ಅಲಿಯಾಸ್ ಶ್ರೀನಿವಾಸ್ (34), ಉಮೇಶ (32), ಚನ್ನಪ್ಪಗೌಡನಪಾಳ್ಯ ಗುರುರಾಜ್ (40), ಬಿದನಗೆರೆ ಗ್ರಾಮದ ಶಿವರಾಮ್ (38), ಸೊಬಗಾನಹಳ್ಳಿ ಗ್ರಾಮದ ಲಕ್ಷ್ಮಣ (36) ಅವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಜೂ 10 ಸೋಮವಾರ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ ಕೆಲಸದ ನಿಮಿತ ಕುಣಿಗಲ್ ಪಟ್ಟಣಕ್ಕೆ ಬಂದು ತನ್ನ ಗ್ರಾಮ ಬಾಗೇನಹಳ್ಳಿಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದ ವೇಳೆ ರಾಜ್ಯ ಹೆದ್ದಾರಿ 33 ಕುಣಿಗಲ್, ತುಮಕೂರು ರಸ್ತೆ ಬಾಗೇನಹಳ್ಳಿ ಗೇಟ್ ಬಳಿ ಶ್ರೀನಿವಾಸ್ ಹಾಗೂ ಆತನ ಸಹಚರರು ಕಾರಿನಲ್ಲಿ ಬಂದು ಬೈಕ್‌ನ ಹಿಂಬದಿಗೆ ಢಿಕ್ಕಿ ಹೊಡೆದು, ಕೊಲೆ ಮಾಡಿ ಪರಾರಿಯಾಗಿದ್ದರು.

ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಾರು ಬೈಕ್‌ಗೆ ಢಿಕ್ಕಿ ಹೊಡೆದು, ರಾಮಚಂದ್ರ ಅವರು ಸಾವನಪ್ಪಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಸಂಶಯ ವ್ಯಕ್ತಪಡಿಸಿದ ಪೊಲೀಸರು, ಹೆಚ್ಚಿನ ತನಿಖೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿ ಮರಿಯಪ್ಪ, ಡಿವೈಎಸ್‌ಪಿ ಓಂಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ನವೀನ್‌ಗೌಡ ಅವರ ನೇತೃತ್ವದ ಪೊಲೀಸ್ ತಂಡ ಪ್ರಕರಣವನ್ನು ಭೇದಿಸಿದಾಗ ಹಳೇ ದ್ವೇಷದಿಂದ ರಾಮಚಂದ್ರನ್ನು ಕಾರಿನಿಂದ ಗುದ್ದಿ ಕೊಲೆ ಮಾಡಲಾಗಿದೆ ಎಂದು ಬಹಿರಂಗವಾಗಿದ್ದು ಪ್ರಕರಣಕ್ಕೆ ಹೊಸ ರೂಪ ಪಡೆದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಗೀಡಾಗಿದ್ದ ರಾಮಚಂದ್ರ ಕಳೆದ ಎರಡು ವರ್ಷಗಳ ಹಿಂದೆ ಶ್ರೀನಿವಾಸನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ರಾಮಚಂದ್ರ ಹಾಗೂ ಶ್ರೀನಿವಾಸನು ಇಬ್ಬರು ಯಾವುದೇ ಗಲಾಟೆಗೆ ಹೋಗದೆ ಸುಮ್ಮನಿದ್ದರು. ರಾಮಚಂದ್ರ ಮದುವೆಯಾಗಿ ಸಂಸಾರಿಕ ಜೀವನ ನಡೆಸುಕೊಂಡು ಹೋಗುತ್ತಿದ್ದ. ರಾಮಚಂದ್ರನಿಗೆ ಒಂದು ಮಗು ಸಹ ಇದೆ. ಈ ಮಧ್ಯೆ ರಾಮಚಂದ್ರ ಮತ್ತೆ ಶ್ರೀನಿವಾಸನನ್ನು ಕೊಲೆ ಮಾಡುತ್ತೇನೆ ಎಂದು ಅಲ್ಲಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದನ್ನು ಎನ್ನಲಾಗಿದೆ.

Advertisement

ವಿಚಾರ ತಿಳಿದ ಶ್ರೀನಿವಾಸನು ರಾಮಚಂದ್ರನನ್ನು ಮುಗಿಸಲೇ ಬೇಕೆಂದು ಸ್ಕಚ್ ಹಾಕಿ ನಾಲ್ಕು ಮಂದಿ ಸ್ನೇಹಿತರನ್ನು ಸೇರಿಕೊಂಡು ಯಾರಿಗೂ ಅನುಮಾನ ಭಾರದ ರೀತಿಯಲ್ಲಿ ರಸ್ತೆ ಅಪಘಾತ ಎಂದು ಬಿಂಬಿತವಾಗುವ ರೀತಿಯಲ್ಲಿ ಕೊಲೆ ಮಾಡಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next