ಕುಣಿಗಲ್: ದೇವಾಲಯಗಳ ಹುಂಡಿ ಒಡೆದು ಹಣ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ತಾಲೂಕು ಕೊತ್ತಗೆರೆ ಹೋಬಳಿ ವಡ್ಡರಕುಪ್ಪೆ ಹಾಗೂ ಕುರುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊತ್ತಗೆರೆ ಹೋಬಳಿ ವಡ್ಡರಕುಪ್ಪೆ ಗ್ರಾಮದ ಮಾರಮ್ಮ ಹಾಗೂ ಕುರುಡಿಹಳ್ಳಿ ಗ್ರಾಮದ ಮಾರಮ್ಮ ದೇವಿ ದೇವಾಲಯದ ಮುಂಭಾಗದಲ್ಲಿದ್ದ ಹುಂಡಿಯನ್ನು ಕಳ್ಳರು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಘಟನೆ ವಿವರ: ದೇವಾಲಯದ ಅರ್ಚಕರು ಎಂದಿನಂತೆ ಸಂಜೆ ದೇವರಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ಬೀಗ ಹಾಕಿ ಹೋಗಿದ್ದರು. ಕಳ್ಳತನ ಮಾಡುವ ಉದ್ದೇಶದಿಂದಲೇ ಕಾದು ಕುಳಿತಿದ್ದ ಕಳ್ಳರು ದೇವಾಲಯದ ಮುಂಭಾಗದಲ್ಲಿ ಇಟ್ಟಿದ ಹುಂಡಿಯ ಬೀಗವನ್ನು ಒಡೆದು, ಹಣದೊಂಚಿ ಪರಾರಿಯಾಗಿದ್ದಾರೆ.
ತಿಂಗಳಲ್ಲಿ ಐದನೇ ಕಳ್ಳತನ ಪ್ರಕರಣ: ಕಳೆದ ಒಂದು ತಿಂಗಳಿನಿಂದ ಮದ್ಯದಂಗಡಿ, ಎಂಎಸ್‌ಎಲ್. ಹಾಗೂ ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಚಾಕು ತೋರಿಸಿ, ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಕಳ್ಳರು ಈಗ ದೇವಾಲಯಗಳ ಕಡೆ ಮುಖ ಮಾಡಿದಂತಿದೆ ಎಂದು ಸಾರ್ವಜನಿಕರು ಚರ್ಚೆಗೆ ಮಾಡುತ್ತಿದ್ದಾರೆ.
ಕಳ್ಳತನ ಪ್ರಕರಣವನ್ನು ತಡೆಯುವಲ್ಲಿ ಕುಣಿಗಲ್ ಅಪರಾಧ ವಿಭಾಗದ ಪೊಲೀಸರು ವಿಫಲಗೊಂಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.