Advertisement

Kunigal ಶೂಟೌಟ್‌ ಪ್ರಕರಣ: ಜಾರ್ಖಂಡ್‌ ಮೂಲದ ಇಬ್ಬರು ಆರೋಪಿಗಳ ಬಂಧನ

07:58 PM Mar 31, 2024 | Team Udayavani |

ಕುಣಿಗಲ್‌: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ಮನೆ ಮಾಲಿಕನ ಮೇಲೆ ಗುಂಡು ಹಾರಿಸಿ ಹಾಡಹಗಲೇ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಜಾರ್ಖಂಡ್‌ ರಾಜ್ಯದ ಏಜಾಜ್‌(30), ಸಹೇಬುಲ್ಲಾ(34)ಬಂಧಿತರು.

ಘಟನೆ ವಿವರ: ಮಾ.26ರಂದು ಆರೋಪಿಗಳು ಕುಡಿವ ನೀರು ಕೇಳುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ ಕುಣಿಗಲ್‌ ತಾಲೂಕಿನ ಉರ್ಕೆಹಳ್ಳಿ ಗ್ರಾಮದ ತೋಟದ ಒಂಟಿ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲಿಕ ಗಂಗಯ್ಯ, ಆತನ ಪತ್ನಿ ಗಂಗಮ್ಮ, ಮಗಳು ಪುಷ್ಪಲತಾ ಅವರನ್ನು ಬಂದೂಕಿನಿಂದ ಹೆದರಿಸಿ ಗಂಗಯ್ಯನ ಮೇಲೆ ಗುಂಡು ಹಾರಿಸಿ ಲ್ಯಾಪ್‌ ಟಾಪ್‌ ಬ್ಯಾಗ್‌ನಲ್ಲಿದ್ದ ನಗದು ದೋಚಿ ಬೈಕ್‌ನಲ್ಲಿ ಪರಾರಿಯಾಗಿದ್ದರು.

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ: ಘಟನೆ ಸಂಬಂಧ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ಅಶೋಕ್‌ ಭೇಟಿ ನೀಡಿ ಪರಿಶೀಲಿಸಿದ್ದರು.

ತಂಡ ರಚನೆ:
ಆರೋಪಿಗಳ ಪತ್ತೆಗೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್ಪಿ ಅಶೋಕ್‌, ಎಎಸ್‌ಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಓಂಪ್ರಕಾಶ್‌, ಸಿಪಿಐ ನವೀನ್‌ಗೌಡ ನೇತೃತ್ವದಲ್ಲಿ ಪೋಲಿಸ್‌ ತಂಡವನ್ನು ರಚಿಸಲಾಗಿತ್ತು.

Advertisement

ಅಣ್ಣನ ನೋಡಲು ಬಂದ ಆರೋಪಿ:
ಆರೋಪಿ ಜಾರ್ಖಂಡ್‌ ಮೂಲದ ಏಜಾಜ್‌ ತನ್ನ ಅಣ್ಣ ಕೆಲಸ ಮಾಡುತ್ತಿರುವ ಕರ್ನಾಟಕದ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿಗೆ ಹಲವು ಬಾರಿ ಆಗಮಿಸಿ ಅಣ್ಣನನ್ನು ಭೇಟಿಯಾಗಿ ಹೋಗಿದ್ದ ಎನ್ನಲಾಗಿದೆ.

ಬೈಕ್ ಕಳ್ಳತನ ! : ಜಾರ್ಖಂಡ್‌ನಿಂದ ಗನ್‌ ತಂದಿದ್ದರು.ಅಣ್ಣನನ್ನು ನೋಡಲು ಬಂದ ಏಜಾಜ್‌, ಸಹೇಬುಲ್ಲಾ ಜಾರ್ಖಂಡ್‌ನಿಂದ ಬಂದೂಕು ತೆಗೆದುಕೊಂಡು ಬಂದು, ಬೆಂಗಳೂರಿನಲ್ಲಿ ಬೈಕ್‌ ಕದ್ದಿದ್ದರು ಎನ್ನಲಾಗಿದೆ. ಕುಣಿಗಲ್‌ ಮಾರ್ಗವಾಗಿ ತುರುವೇಕೆರೆಗೆ ಹೋಗುತ್ತಿದ್ದ ವೇಳೆ ಉರ್ಕೆಹಳ್ಳಿ ಒಂಟಿ ಮನೆಯನ್ನೇ ಟಾಗೇìಟ್‌ ಮಾಡಿ ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆ ಒಳಗೆ ನುಗ್ಗಿ ದರೋಡೆ ಮಾಡಿ ಪರಾರಿ ಆಗಿದ್ದರು.

ಆರೋಪಿಗಳ ಎಡೆಮುಡಿ ಕಟ್ಟಿದ ಪೊಲೀಸರು: ಪೊಲೀಸರ ತಂಡ ಆರೋಪಿಗಳ ಪತ್ತೆಗೆ ವಿವಿಧೆಡೆ ಕಾರ್ಯಾಚರಣೆ ನಡೆಸಿತು. ಬಳಿಕ ಆರೋಪಿಗಳಾದ ಏಜಾಜ್‌, ಸಹೇಬುಲ್ಲಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗರಿಕರ ಪ್ರಶಂಸೆ:
ಘಟನೆ ನಡೆದು ಕೇವಲ 5 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಾಚರಣೆಗೆ ತಾಲೂಕಿನ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next