ಕುಣಿಗಲ್ : ಕೊಳವೆ ಬಾವಿ ಇರುವ ಜಾಗವನ್ನು ಭೂ ಸ್ವಾಧೀನ ಪಡಿಸಕೊಂಡು ಕುಡಿಯುವ ನೀರಿನ ಕೊಳವೆ ಬಾವಿಯನ್ನು ಗ್ರಾಮದಲ್ಲೇ ಉಳಿಸಿಕೊಡುವಂತೆ ಆಗ್ರಹಿಸಿ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬಂಡಿಹಳ್ಳಿಹೊಸಹಳ್ಳಿ ಗ್ರಾಮಸ್ಥರು ಇಲ್ಲಿನ ತಾ.ಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಕುಡಿಯುವ ನೀರಿಗಾಗಿ ಟಾಟಾ ಸಂಸ್ಥೆಯವರು ಗ್ರಾಮದಲ್ಲಿ ಕೊರೆಸಿರುವ ಕೊಳವೆ ಬಾವಿಯವನ್ನು ಪ್ರಭಾವಿ ವ್ಯಕ್ತಿಗಳು ನಮ್ಮದೆಂದು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯ ಬಾ.ನ.ರವಿ ಅವರ ನೇತೃತ್ವದಲ್ಲಿ ಗ್ರಾಮದ ನೂರಾರು ಜನರು ಇಲ್ಲಿನ ತಾಲೂಕು ಪಂಚಾಯ್ತ ಬಳಿ ಪ್ರತಿಭಟನೆ ನೆಡೆಸಿ ಕೊಳವೆ ಬಾವಿ ಜಾಗವನ್ನು ಗ್ರಾಮಕ್ಕೆ ಉಳಿಸಬೇಕೆಂದು ಒತ್ತಾಯಪಡಿಸಿದರು.
ಗ್ರಾ.ಪಂ ಸದಸ್ಯ ಬಾ.ನ ರವಿ ಮಾತನಾಡಿ ಗ್ರಾಮದಲ್ಲಿ ಕುಡಿಯವ ನೀರು ಪೂರೈಕೆಗಾಗಿ ೧೯೮೯ ರಲ್ಲಿ ಟಾಟಾ ಸಂಸ್ಥೆಯವರು ನಮ್ಮ ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮದ ಸರ್ಕಾರಿ ಕೋಡಿಹಳ್ಳಿ ಖರಾಬ್ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ನೀರು ಸರಬರಾಜು ಮಾಡುತ್ತಿದ್ದರು ಆದರೆ 1995-96ರಲ್ಲಿ ಮರಿಯಪ್ಪ ಹಾಗೂ ಇತರರು ಕಿತಾಪತಿ ತೆಗೆದು ನಮ್ಮ ಜಮೀನಿನಲ್ಲಿ ಬಾವಿ ಇದೆ ಎಂದು ಕೊಳವೆ ಬಾವಿಗೆ ಕಲ್ಲು ಮಣ್ಣು ತುಂಬಿದರು. ಈ ಸಂಬಂಧ ಪ್ರಕರಣ ದಾಖಲಾಗಿ ಟಾಟಾ ಸಂಸ್ಥೆ ಹಾಗೂ ಮರಿಯಪ್ಪ ಅವರ ನಡುವೆ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ನಡೆದು ಕೇಸು ವಜಾ ಆಗಿದ್ದು ನಂತರ ಟಾಟಾ ಸಂಸ್ಥೆಯವರು ಸದರಿ ಸ್ಥಳದಲ್ಲೇ ಕೊಳವೆ ಬಾವಿಯನ್ನು ಮತ್ತೆ ಪ್ರಾರಂಭಿಸಿ ಗ್ರಾಮದ ಜನರಿಗೆ ನೀರು ಪೂರೈಸುತ್ತಿದ್ದರು, ಆದರೆ ಈಗ ಮತ್ತೆ ಗೀತಾ ಎಂಬುವವರು ಕಿತಾಪತಿ ಮಾಡುತ್ತಿದ್ದಾರೆ, ಈ ಜಾಗವನ್ನು ನಮ್ಮ ಸ್ವಾಧೀನಕ್ಕೆ ಬಿಡಿಸಿಕೊಡುವಂತೆ ತಾ.ಪಂ ಇಓ ಅವರಲ್ಲಿ ಮನವಿ ಮಾಡಿರುವುದು ತಿಳಿದು ಬಂದಿದೆ, ಈಗಾಗಲೇ ಕೊಳವೆ ಬಾವಿಯನ್ನು ಟಾಟಾ ಸಂಸ್ಥೆಯವರು ಪಂಚಾಯ್ತಿ ಸುಪ್ರದ್ದಿಗೆ ಬಿಟ್ಟುಕೊಟ್ಟಿದ್ದಾರೆ, ಸದರಿ ಕೊಳವೆ ಬಾವಿಯನ್ನು ಪಂಚಾಯ್ತಿ ವ್ಯಾಪ್ತಿಯಲ್ಲಿ ಇದ್ದು ಇದರ ವಿದ್ಯುತ್ ಬಿಲ್ ಸಹಾ ಪಂಚಾಯ್ತಿ ಇದಲ್ಲೇ ಪಾವತಿ ಮಾಡುತ್ತಿದ್ದಾರೆ, ಇದರ ನಿರ್ವಹಣೆಗಾಗಿ ಒಬ್ಬ ವಾಟರ್ ಮ್ಯಾನ್ ನಿಯೋಜನೆ ಮಾಡಿಕೊಂಡಿದ್ದಾರೆ, ಆದರೂ ಜಮೀನು ಒಂದು ವೇಳೆ ಅವರ ಹಿಡುವಳಿ ಜಮೀನಾಗಿದ್ದರೇ ಗ್ರಾಮದ ಜನರ ಕುಡಿಯುವ ನೀರಿನ ಹಿತ ದೃಷ್ಠಿಯಿಂದ ಕೊಳವೆ ಬಾವಿ ಇರುವ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಂಡು ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಪಡಿಸಿದರು. ತಪ್ಪಿದಲ್ಲಿ ಗ್ರಾಮಸ್ಥರೊಂದುಗೊಡಿ ತಾ.ಪಂ ಕಚೇರಿ ಬಳಿ ಧರಣಿ ನಡೆಸುವುದ್ದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಾ.ಪಂ ಜೋಸೆಫ್ ಈ ಸಂಬಂಧ ಪರಿಶೀಲಿಸಿ ನಾಗರಿಕರ ಕುಡಿಯುವ ನೀರಿಗೆ ಯಾವುದೇ ತೊಂದರೆಯಾದಂತೆ ಕ್ರಮ ವಹಿಸುವುದ್ದಾಗಿ ನೀಡಿದ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಮುಖಂಡ ಕರಿಗೌಡ, ಪುಟ್ಟಸ್ವಾಮಿ, ಕುಮಾರ್, ಲಿಂಗರಾಜು, ಲಕ್ಷ್ಮಮ್ಮ, ಗುರುಪ್ರಸಾದ್, ಶಶಿಕಲಾ, ರಾಜಮ್ಮ, ನವೀನ್, ರೂಪ ಇದ್ದರು.