ಕುಣಿಗಲ್: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಬಿಜೆಪಿ ಮುಖಂಡನಿಗೆ ಸಾರ್ವಜನಿಕರು ಥಳಿಸಿದ ಘಟನೆ ಪಟ್ಟಣದ ಎನ್.ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಸೋಮವಾರ ಸಂಜೆ ನಡೆದಿದೆ!.
ಬಿಜೆಪಿ ರಾಜ್ಯ ಯುವ ಮೋರ್ಚಾ ಮಾಜಿ ಕಾರ್ಯದರ್ಶಿ ಹಾಲಿ ಪಕ್ಷದ ಮುಖಂಡ ಹರ್ಷವರ್ಧನ್‌ಗೌಡ ಸಾರ್ವಜನಿಕರಿಂದ ಗೂಸತಿಂದ ವ್ಯಕ್ತಿ
ಘಟನೆ ವಿವರ : ಸೋಮವಾರ ಸಂಜೆ ಕುಣಿಗಲ್ ಸರ್ಕಲ್ ಇನ್ಸ್ಸ್ಪಕ್ಟರ್ ಗುರುಪ್ರಸಾದ್ ಹಾಗೂ ಅವರ ಸಿಬ್ಬಂದಿ ಪಟ್ಟಣದ ಎಸ್.ಹುಚ್ಚಮಾಸ್ತಿಗೌಡ ವೃತ್ತದಲ್ಲಿ ದ್ವಿಚಕ್ರ ವಾಹನಗಳನ್ನು ತಪಾಸಣೆ ನಡೆಸಿ ದಾಖಲೆ ಇಲ್ಲದ ಬೈಕ್‌ಗಳಿಗೆ ಐಎಂಎ ದಂಡ ಹಾಕುತ್ತಿದ್ದರು, ಇದೇ ವೇಳೆ ಈ ಮಾರ್ಗವಾಗಿ ಹೆಲ್ಮೆಟ್ ಹಾಕಿಕೊಳ್ಳದೇ ದ್ವಿಚಕ್ರವಾನದಲ್ಲಿ ಬಂದ ತಾಲೂಕಿನ ಮಾದಗೋನಹಳ್ಳಿ ಗ್ರಾಮದ ನಟರಾಜು ಅವರ ಬೈಕ್ ಅನ್ನು ಹೆಡ್‌ಕಾನಸ್ಟೇಬಲ್ ನರೇಂದ್ರ ಅವರು ತಡೆದು ಇನ್ಸ್ ಪೆಕ್ಟರ್ ಬಳಿ ಬನ್ನಿ ಎಂದು ಹೇಳಿದ್ದಾರೆ, ಎಲ್ಲಾ ಬೈಕ್‌ಗಳಿಗೂ ದಂಡ ಹಾಕುತ್ತಿದ್ದೀರ ಎಂದು ಹೆಡ್‌ಕಾನ್ಸೇಬಲ್ ಅವರನ್ನು ಬೈಕ್ ಸವಾರ ನಟರಾಜು ಪ್ರಶ್ನಿಸಿದ್ದಾರೆ, ಇದೇ ವೇಳೆ ಈ ಮಾರ್ಗದಲ್ಲಿ ಬಂದ ಮತ್ತೋಂದು ಬೈಕ್‌ನ ಸವಾರನನ್ನು ಪೊಲೀಸರು ತಡೆದು ಹೆಲ್ಮೆಟ್ ಏಕೆ ಹಾಕಿಲ್ಲ ಎಂದು ಕೇಳಿದ್ದಾರೆ, ಸಾರ್ ಮಗುವಿಗೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ದಯವಿಟ್ಟು ಬಿಡಿ ಎಂದು ಬೈಕ್ ಸವಾರನ್ನು ಕೇಳಿದ್ದಾನೆ, ಮಾನವೀಯತೆ ದೃಷ್ಠಿಯಿಂದ ಪೊಲೀಸರು ಆ ಬೈಕ್ ಅನ್ನು ಬಿಟ್ಟು ಕಳಿಸಿದ್ದಾರೆ ಇದರಿಂದ ಕುಪಿತಗೊಂಡ ನಟರಾಜು ಆ ಬೈಕ್ ಅನ್ನು ಏಕೆ ಬಿಟ್ಟಿದ್ದೀರ ನನ್ನ ಬೈಕ್‌ಗೆ ಏಕೆ ದಂಡ ಹಾಕುತ್ತಿದ್ದೀರ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ, ಇನ್ಸ್ ಪೆಕ್ಟರ್ ಬಳಿ ಬರುವಂತೆ ಹೆಡ್‌ಕಾನಸ್ಟೇಬಲ್ ನಟರಾಜು ಅವರಿಗೆ ತಿಳಿಸಿದ್ದಾರೆ, ತಕ್ಷಣ ನಟರಾಜು ಬಿಜೆಪಿ ಮುಖಂಡ ಹರ್ಷವರ್ಧನ್‌ಗೌಡ ಅವರಿಗೆ ಮೋಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಸರ್ಕಲ್‌ಗೆ ಬಂದ ಹರ್ಷವರ್ಧನ್‌ಗೌಡ ಅದು ನಮ್ಮ ಗಾಡಿ ಬಿಡಿ ಎಂದು ಹೆಡ್‌ಕಾನ್ ಸ್ಟೇಬಲ್‌ಗೆ ಹೇಳಿದ್ದಾರೆ ಎನ್ನಲಾಗಿದ್ದು, ಗಾಡಿ ಬಿಡಲು ಆಗುವುದಿಲ್ಲ ಎಂದು ಹೆಡ್‌ಕಾನಸ್ಟೇಬಲ್ ಹರ್ಷವರ್ಧನ್‌ಗೌಡ ಅವರಿಗೆ ತಿಳಿಸಿದರು ಎನ್ನಲಾಗಿದ್ದು ಈ ನಡುವೆ ಪೊಲೀಸರೊಂದಿಗೆ ಹರ್ಷವರ್ಧನ್‌ಗೌಡ ವಾಗ್ವಾದಕ್ಕೆ ಇಳಿದಿದ್ದಾರೆ, ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ಇನ್ಸ್ ಪೆಕ್ಟರ್ ಗುರುಪ್ರಸಾದ್ ಗಲಾಟೆ ಮಾಡುವವರನ್ನು ಕರೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ, ಅಲ್ಲಿಗೆ ಬಂದ ಹರ್ಷವರ್ಧನ್‌ಗೌಡ ಸರ್ಕಲ್ ಇನ್ಸ್ ಪೆಕ್ಟರ್ ಗುರುಪ್ರಸಾದ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ, ಈ ವೇಳೆ ನಟರಾಜು ಬೈಕ್ ತೆಗೆದುಕೊಂಡು ಹೋಗಲು ಯತ್ನಿಸಿದರು, ಇದನ್ನು ತಡೆಯಲು ಯತ್ನಿಸಿದ ಹೆಡ್‌ಕಾನಸ್ಟೇಬಲ್ ನರೇಂದ್ರ ಅವರ ಕೈ ಬೆರಳಿಗೆ ತರಚಿದ ಗಾಯವಾಗಿದೆ ಎನ್ನಲಾಗಿದೆ, ಈ ನಡುವೆ ನೂಕಾಟತಳ್ಳಾಟ, ಕೂಗಾಟವಾಗಿ ಪೊಲೀಸರ ಮೇಲೆ ಹರ್ಷವರ್ಧನ್‌ಗೌಡ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದ್ದು ಇದರಿಂದ ಆಕ್ರೋಶಗೊಂಡ ನಾಗರೀಕರು ಹರ್ಷವರ್ಧನ್‌ಗೌಡ ಅವರಿಗೆ ಥಳಿಸಿದರು ಎನ್ನಲಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಹರ್ಷವರ್ಧನ್‌ಗೌಡ ಅವರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಪ್ಪಿಸಿ ಠಾಣೆಗೆ ಕರೆದುಕೊಂಡು ಬಂದಿದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲ ಹುದ್ದೆಗೆ ಭಗತ್ ಸಿಂಗ್ ಕೋಶಿಯಾರಿ ವಿದಾಯ?