ಕುಣಿಗಲ್ : ತಾಯಿ ಮಗು ಕೆರೆ ಕೋಡಿಗೆ ಬಿದ್ದು ಮಗು ಮೃತಪಟ್ಟು, ತಾಯಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ಕೊತ್ತಗೆರೆ ಕೆರೆಯಲ್ಲಿ ನಡೆದಿದೆ.
ತುರುವೇಕೆರೆ ತಾಲೂಕು ಪುರ ಗ್ರಾಮದ ಶಿವಕುಮಾರ್ (4) ವರ್ಷ ಮೃತ ಮಗು ತಾಯಿ ವಿಜಯ ಲಕ್ಷ್ಮಿ ಸ್ಥಿತಿ ಚಿಂತಾಜನಕವಾಗಿದೆ.
ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಜಾಣಗೆರೆ ಹೊಸಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಅವರನ್ನು ತುರುವೇಕೆರೆ ತಾಲೂಕು ಪುರ ಗ್ರಾಮದ ಲೋಕೇಶ್ ನೊಂದಿಗೆ ವಿವಾಹ ಮಾಡಲಾಗಿತ್ತು, ಬುಧವಾರ ಸಂಜೆ ೪-೫೦ ರ ಸಮಯದಲ್ಲಿ ತಾಯಿ ಮಗು ಕೊತ್ತಗೆರೆ ಕೋಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದರು, ಇದನ್ನು ನೋಡಿದ ಸ್ಥಳೀಯರು ಕೆರೆಯಿಂದ ಮಹಿಳೆ ಹಾಗೂ ಮಗುವನ್ನು ಹೊರ ತೆಗೆದು, ಇಬ್ಬರನ್ನು ಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ, ಅಷ್ಟರಲ್ಲಿ ಮಗು ಮೃತಪಟ್ಟಿತ್ತು, ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಮಹಿಳೆಗೆ ಇಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳಿಸಿಕೊಟ್ಟಿದ್ದಾರೆ.
ಯಾವ ಕಾರಣಕ್ಕೆ ಕೆರೆಗೆ ಬಿದ್ದರು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಕುಣಿಗಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 370ನೇ ವಿಧಿ ರದ್ದು: ವಿಚಾರಣೆಗೆ ಒಪ್ಪಿಗೆ; ಸುಪ್ರೀಂ ಕೋರ್ಟ್