Advertisement

ಜನಪ್ರತಿನಿಧಿಗಳಿಗೂ ಸೋಂಕು ಸಂಕಟ; ಕುಣಿಗಲ್ ಶಾಸಕರಿಗೆ ಸೋಂಕು ದೃಢ

01:15 PM Jul 06, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಆರ್ಭಟ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಪ್ರತಿನಿಧಿಗಳು ಕೂಡಾ ಕೋವಿಡ್ ಸೋಂಕಿತರಾಗುತ್ತಿದ್ದಾರೆ, ಇದೀಗ ಕುಣಿಗಲ್ ನ ಶಾಸಕರಿಗೂ ಸೋಂಕು ದೃಢವಾಗಿದೆ.

Advertisement

ಶಾಸಕರು ರವಿವಾರ ಕೋವಿಡ್ -19 ಪರೀಕ್ಷೆ ನಡೆಸಿದ್ದರು. ಇಂದು ಅದರ ವರದಿ ಬಂದಿದ್ದು, ಕೋವಿಡ್-19 ಸೋಂಕು ದೃಢವಾಗಿದೆ.

ಸಾಕಷ್ಟು ಎಚ್ಚರಿಕೆ ವಹಿಸಿದ ಬಳಿಕವೂ ಸೋಂಕು ತಾಗಿದೆ. ಜನರು ಆರೋಗ್ಯದ ಕಾಳಜಿ ಮಾಡಬೇಕು. ಯಾವುದೇ ಸಮಸ್ಯೆಯಿದ್ದರೂ ನಮ್ಮನ್ನು ಸಂಪರ್ಕಿಸಬಹು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ದೂರವಾಣಿ ಸಂಪರ್ಕಕ್ಕೆ ಲಭ್ಯವಿದ್ದೇನೆ ಎಂದು ಮಾಧ್ಯಮವೊಂದಕ್ಕೆ ಶಾಸಕರು ಹೇಳಿದ್ದಾರೆ.

ರಾಜ್ಯದಲ್ಲಿ ಜನಪ್ರತಿನಿಧಿಗಳು ಕೂಡಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ ಶಾಸಕರೊಬ್ಬರಿಗೆ ಸೋಂಕು ದೃಢವಾಗಿತ್ತು. ಮಂಗಳೂರಿನ ಮಾಜಿ ಕೇಂದ್ರ ಸಚಿವರೊಬ್ಬರಿಗೆ ರವಿವಾರ ಕೋವಿಡ್ -19 ಸೋಂಕು ದೃಢವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next