Advertisement
ಗ್ರಾಮದ ರೈತ ಗಂಗಾಧರಯ್ಯ ಆತನ ಆತನ ಹೆಂಡತಿ ಮತ್ತು ಮಕ್ಕಳು ಚಿರತೆಯ ಉಪಟಳಕ್ಕೆ ಹೆದರಿ ರಾತ್ರಿ ವೇಳೆ ಮನೆಯಿಂದ ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತೋಟದಲ್ಲಿ ಗಂಗಾಧರಯ್ಯ ಮನೆ ಕಟ್ಟಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಆದರೆ ಚಿರತೆ ಎಮ್ಮೆ ಕರುವನ್ನು ತಿಂದು ಹಾಕಿದ ಬಳಿ ಪ್ರತಿ ದಿನ ರಾತ್ರಿ ವೇಳೆ ಗಂಗಾಧರಯ್ಯನ ಮನೆ ಬಳಿ ಬರುತ್ತಿದೆ, ಗಂಗಾಧರಯ್ಯ ಕುಟುಂಬ ಚಿರತೆ ಎಲ್ಲಿ ದಾಳಿ ಮಾಡುತ್ತದೆ ಎಂದು ಭಯದಿಂದ ರಾತ್ರಿ ವೇಳೆ ಬೆಂಕಿ ಹಾಕಿಕೊಂಡು ಕಾಯುತ್ತಿದ್ದಾರೆ.
Related Articles
ಗಂಗಾಧರಯ್ಯ ಕುಟುಂಬ ಭೀತಿ ಎದುರಿಸುತ್ತಿದ್ದರೂ ಈವರೆಗೂ ಅರಣ್ಯ ಇಲಾಖಾಧಿಕಾರಿಗಳಾಗಲಿ ಹಾಗೂ ಯಾವುದೇ ಇಲಾಖೆಯ ಅಧಿಕಾರಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಸೆರೆ ಹಿಡಿಯುವಂತ ಗೋಜಿಗೆ ಹೋಗಿಲ್ಲ. ಕಳೆದ ಹಲವು ವರ್ಷಗಳ ಹಿಂದೆ ಇದೇ ಹೋಬಳಿಯ ದೊಡ್ಡಮಳಲವಾಡಿ ಗ್ರಾಮದ ಆನಂದಯ್ಯ ಅವರ ಮೇಲೆ ಅವರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು.
Advertisement
ಈಗ ಕೆಂಪಸಾಗರದಲ್ಲಿ 64 ವರ್ಷದ ಗಂಗಾಧರಯ್ಯ ಚಿರತೆ ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ದಿನ ನಿತ್ಯ ಭಯದ ನೆರಳಲ್ಲೇ ಬದುಕುತ್ತಿರುವುದು ವಿಪರ್ಯಾಸವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.