Advertisement

Kunigal ;ಅಬಕಾರಿ, ಪೊಲೀಸರಿಂದ ಲಕ್ಷಾಂತರ ರೂ.ಮೌಲ್ಯದ ನಕಲಿ ಮದ್ಯ ನಾಶ

06:10 PM Sep 30, 2023 | Team Udayavani |

ಕುಣಿಗಲ್ : ವಿಧಾನಸಭಾ ಚುನಾವಣೆ ವೇಳೆ ಸೇರಿದಂತೆ ವಿವಿಧ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಲಕ್ಷಾಂತರೂ ಮೌಲ್ಯದ 1297 ಲೀಟರ್ ಮದ್ಯ, ಮದ್ಯಸಾರ, ನಕಲಿ ಮದ್ಯವನ್ನು ಶನಿವಾರ ಅಬಕಾರಿ ಅಧಿಕಾರಿಗಳು ನಾಶಪಡಿಸಿದ್ದಾರೆ.

Advertisement

ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಒಟ್ಟು 46 ಅಕ್ರಮ ಮಧ್ಯ ಸಾಗಾಣಿಕೆ, ನಕಲಿ ಮಧ್ಯ ತಯಾರಿಕೆ, ಪ್ರಕರಣಗಳು ದಾಖಲಾಗಿದ್ದವು, 4.15.880 ಲಕ್ಷ ರೂ ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ ಮದ್ಯಸಾರ, ನಕಲಿ ಮದ್ಯ ಸೇರಿ ಸುಮಾರು1297 ಲೀಟರ್ 635 ಮಿಲಿ ಲೀಟರ್ ಅಕ್ರಮ ಮದ್ಯವನ್ನು ವಶ ಪಡಿಸಿಕೊಳ್ಳಲಾಗಿತ್ತು, ಈ ಮಧ್ಯವನ್ನು ತುಮಕೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ, ಅಬಕಾರಿ ನಿರೀಕ್ಷಕಿ ಸುನಂದ, ಉಪ ನಿರೀಕ್ಷಕರಾದ ಬಿ.ಎನ್.ನಾಗಯ್ಯ, ಕೆ.ಸಿ.ರಮೇಶ್ ಹಾಗೂ ಸಿಬಂದಿ ಸೆ 30 ರಂದು ತಾಲೂಕಿನ ಅವರಗೆರೆ ಮೇ ಕಲ್ಸ್ ಡಿಸ್ಟಿಲರಿ ಕರ್ನಾಟಕ ಪ್ರೈ.ಲಿ ಅವರಣದಲ್ಲಿ ನಾಶ ಪಡಿಸಿದರು.

ಶನಿವಾರ ಅಬಕಾರಿ ಉಪ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ ಸ್ಥಳದಲ್ಲೇ ಖುದ್ದು ಹಾಜರಿದ್ದು ಜಪ್ತಿ ಮಾಡಲಾಗಿದ್ದ 1297 ಲೀಟರ್ 635 ಮಿಲೀ ಮದ್ಯ ಹಾಗೂ ನಕಲಿ ಮದ್ಯ, ಮದ್ಯ ಸಾರ, ನಕಲಿ ಲೇಬರ್‌ಗಳು, ನಕಲಿ ಖಾಲಿ ಟೆಟ್ರಾಪ್ಯಾಕ್, ಖಾಲಿ ರಟ್ಟಿನ ಪೆಟ್ಟಿಗೆ, ಕಬ್ಬಿಣದ ಹೀಟ್, ಸೀಲಿಂಗ್ ಮಶಿನ್ ಪರಿಶೀಲಿಸಿದರು, ಬಳಿಕ ಮದ್ಯವನ್ನು ಚಲ್ಲಿ ನಾಶ ಪಡಿಸಿದರು, ಕಬ್ಬಿಣದ ಮಿಷನ್‌ಗಳನ್ನು ವೆಲ್ಡ್ರ್ ಕೆಲಸಗಾರರ ಮೂಲಕ ತುಂಡರಿಸಿ ನಾಶ ಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಉಪ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಗೂ ಅಕ್ರಮ ಮದ್ಯ ತಯಾರಿಕೆ ಮೇಲೆ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ದಾಳಿ ನಡೆಸಿ ಜಪ್ತಿ ಮಾಡಿದ್ದ ಭಾರಿ ಪ್ರಮಾಣದ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು ದಾಖಲಾದ46 ಮೊಕದ್ದಮೆಗಳಲ್ಲಿ ಸುಮಾರು 5 ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ ನಮ್ಮ ವಶಕ್ಕೆ ನೀಡಿದರು ಉಳಿದ 41 ಪ್ರಕರಣಗಳನ್ನು ಅಬಕಾರಿ ಇಲಾಖಾಧಿಕಾರಿಗಳು ದಾಖಲಿಸಿಕೊಂಡಿದ್ದರು, ಮಧ್ಯ 478 ಲೀಟರ್ 535 ಮಿ.ಲೀ , ನಕಲಿ ಮದ್ಯ 213 ಲೀಟರ್ 100 ಮಿಲೀ , ಮದ್ಯಸಾರ 606 ಲೀಟರ್‌ನನ್ನು ನಾಶ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ತುಮಕೂರು ಕೆ.ಎಸ್.ಬಿ.ಸಿ.ಎಲ್ ಆಡಳಿತಾಧಿಕಾರಿ ಕೆ.ಪ್ರಸನ್ನಕುಮಾರ್, ಅಬಕಾರಿ ಸಿಬಂದಿಗಳಾದ ವೈಜನಾಥ, ಮಲಘಾಣ, ಎಂ.ಆರ್ ಪ್ರಹ್ಲಾದಕುಮಾರ್, ಸಂತೋಷ್‌ಕುಮಾರ್, ಕೆ.ಎ.ವೆಂಕಟೇಶನ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next