Advertisement

ಆಡಳಿತ ಸೌಧ ಅಸ್ವಚ್ಛತೆ… ತಹಶೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

05:17 PM Feb 27, 2024 | Team Udayavani |

ಕುಣಿಗಲ್ : ತಾಲೂಕು ಆಡಳಿತ ಸೌಧವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ತಹಶೀಲ್ದಾರ್ ಅವರನ್ನು ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬರುವ ಮುಖ್ಯಮಂತ್ರಿಗಳಿಗೆ ಏನು ಉತ್ತರ ಹೇಳಲಿ ಎಂದು ಮಂಗಳವಾರ ಅಧಿಕಾರಿ ವಿರುದ್ದ ಕಿಡಿಕಾರಿದರು.

Advertisement

ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಮಾ ೧ ಶುಕ್ರವಾರವಾರದಂದು ಹೇಮಾವತಿ ಲಿಂಕ್ ಕೆನಾಲ್ ಭೂಮಿ ಪೂಜೆ, ಆಡಳಿತ ಸೌಧ ಉದ್ಘಾಟನೆ, ಗೃಹಲಕ್ಷ್ಮಿ ಸಮಾವೇಶ ಸೇರಿದಂತೆ ಮೊದಲಾದ ಕಾರ್ಯಕ್ರಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವ ಭಾವಿ ಸಭೆ ಕರೆಯಲಾಯಿತ್ತು, ಸಭೆಗೆ ಭಾಗವಹಿಸಿದ ಜಿಲ್ಲಾಧಿಕಾರಿಗಳು ಆಡಳಿತ ಸೌಧ ವಿವಿಧ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಸೌಧವು ಅಸ್ವಚ್ಛತೆಯಿಂದ ಕೂಡಿತ್ತು, ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿಗಳು ಆಡಳಿತ ಸೌಧವನ್ನು ಇದೇ ರೀತಿ ಏನ್ರಿ ಇಟ್ಟುಕೊಳ್ಳುವುದು ಎಂದು ತಹಶೀಲ್ದಾರ್ ಎಸ್.ವಿಶ್ವನಾಥ್ ಅವರನ್ನು ತರಾಟೆ ತೆಗೆದುಕೊಂಡರು. ಡಿ.ಗ್ರೂಪ್ ನೌಕರರನ್ನು ಇಟ್ಟುಕೊಂಡು ಆಡಳಿತ ಸೌಧದ ಕಚೇರಿಯನ್ನು ಏಕೆ ಸ್ವಚ್ಛತೆ ಮಾಡಿಸಿಲ್ಲ, ಆಡಳಿತ ಸೌಧವನ್ನು ಉದ್ಘಾಟನೆಗೆ ಬರುವ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ನಾನು ಏನೆಂದು ಉತ್ತರ ನೀಡಲಿ ಎಂದು ಪ್ರಶ್ನಿಸಿದರು, ಆಡಳಿತ ಸೌಧವನ್ನು ಸ್ವಚ್ಛತೆಗೊಳಿಸಿ, ಉದ್ಘಾಟನೆಗೆ ಎಲ್ಲಾ ರೀತಿಯ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಕೊಠಡಿ ಬೀಗ ಒಡೆದ ಸಿಬ್ಬಂದಿ : ದಾಖಲೆ ಕೊಠಡಿಯ ಬಾಗಿಲು ತೆರೆಯುವಂತೆ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು, ಆದರೆ ದಾಖಲೆ ನೋಡಿಕೊಳ್ಳುವ ಕೇಸ್ ವರ್ಕರ್ ಸರ್ಕಾರಿ ನೌಕರರ ಸಮ್ಮೇಳನಕ್ಕೆ ಹೊಗಿದ್ದಾರೆ ಅವರ ಹತ್ತಿರ ಕೊಠಡಿಯ ಬೀಗದ ಕೀಲಿ ಇದೆ ಎಂದು ತಹಶೀಲ್ದಾರ್ ತಿಳಿಸಿದರು, ಕೇಸ್ ವರ್ಕರ್ ಹೊಗುವಾಗ ರೆಕಾರ್ಡ್ ರೂಂನ ಕೀಲಿಯನ್ನು ಬೇರೆಯವರಿಗೆ ಕೊಟ್ಟು ಹೊಗಬೇಕು ತಾನೇ, ಅದನ್ನು ಏಕೆ ಆ ವ್ಯಕ್ತಿ ತೆಗೆದುಕೊಂಡು ಹೋಗಿದ್ದಾರೆ, ಜನರು ಕೇಳುವ ದಾಖಲೆಗಳನ್ನು ಹೇಗೆ ಕೊಡುತ್ತೀರ ಎಂದು ಕಿಡಿಕಾರಿದರು, ಡೀಸಿ ಅವರಿಗೆ ಮೋಬೈಲ್ ಕರೆ ಬಂದ ಕಾರಣ ಹೊರಗಡೆ ಹೋಗಿ ಮಾತನಾಡುತ್ತಿದ್ದರು ಎಚ್ಚತ್ತ ಕಚೇರಿ ಸಿಬ್ಬಂದಿಗಳು ಕೊಠಡಿ ಬೀಗವನ್ನು ಒಡೆದು ಬಾಗಿಲು ತೆರೆದರು. ಬಳಿಕ ಕೊಠಡಿಗೆ ಬಂದ ಡೀಸಿ ಅವರು ಅಲ್ಲಿನ ಅವ್ಯವಸ್ಥೆ ಕಂಡು ಹೌಹಾರಿದರು, ಶಾಸರಕು ರೆಕಾರ್ಡ್ ರೂಂ ಅನ್ನು ಡಿಜಿಟಲೀಕರಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ ಹೀಗೆನಾ ಕೊಠಡಿ ಇಟ್ಟುಕೊಳ್ಳುವುದು ಎಂದರು.

ಆಧಾರ್ ಕಾರ್ಡ್ ಪಡೆಯಲು ಸಾಕಷ್ಟು ಜನ ನಿಂತಿದ್ದರು, ಇದನ್ನು ಗಮನಿಸಿದ ಡೀಸಿ ಅವರು ಏಕೆ ಇಷ್ಟೋಂದು ಜನ ಆಧಾರ್ ಕಾರ್ಡಿಗಾಗಿ ನಿಂತಿದ್ದಾರೆ ನಿತ್ಯ ಆಧಾರ್ ಕಾರ್ಡ್ ತೆಗೆದುಕೊಡುತ್ತಿಲ್ಲವೇ, ಡಾಟಾ ಎಂಟ್ರಿ ಅಪರೇಟರ್ ಏನು ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್ ಅವರನ್ನು ಕೇಳಿದರು, ನಂತರ ಅಪರೇಟರ್ ಅವರ ಹಾಜರಾತಿ ಪುಸ್ತಕ ತರುವಂತೆ ಸೂಚಿಸಿದರು,

Advertisement

ನಂತರ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಣಾಧಿಕಾರಿ ಜಿ.ಪ್ರಭು ಅವರೊಂದಿಗೆ ಅಧಿಕಾರಿಗಳ ಸಭೆ ನಡೆಸಿದರು, ಸಭೆ ಆದ ಬಳಿಕ ಜಿಕೆಬಿಎಂಎಸ್ ಶಾಲಾ ಮೈದಾನವನ್ನು ಪರಿಶೀಲನೆ ನಡೆಸಿದರು,

ಈ ವೇಳೆ ಉಪ ವಿಭಾಗಾಧಿಕಾರಿ ಗೌರವ್‌ಕುಮಾರ್ ಶೆಟ್ಟಿ, ತಾಲೂಕು ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ವಿಶೇಷ ಉಸ್ತುವಾರಿ ಅಧಿಕಾರಿ ವಿ.ಆರ್.ವಿಶ್ವನಾಥ್, ಸಿಪಿಐ ನವೀನ್‌ಗೌಡ ಮತ್ತಿತರರು ಇದ್ದರು.

ಇದನ್ನೂ ಓದಿ: Cricket: ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿ T20Iಯಲ್ಲಿ ವಿಶ್ವ ದಾಖಲೆ ಬರೆದ ನಮೀಬಿಯಾ ಆಟಗಾರ

Advertisement

Udayavani is now on Telegram. Click here to join our channel and stay updated with the latest news.

Next