Advertisement
ಫೈನಲ್ ಪಂದ್ಯದ ದಿನವಾದ ರವಿವಾರ ನಾಪೋಕ್ಲುವಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಉಪಸ್ಥಿತರಿದ್ದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ವಿಶ್ವದಾಖಲೆ ಪ್ರಮಾಣಪತ್ರವನ್ನು ಸಂಘಟಕರಿಗೆ ಹಸ್ತಾಂತರಿಸಿದರು.
ಕೂಟದಲ್ಲಿ ಒಟ್ಟು 360 ತಂಡಗಳು ನೋಂದಣಿ ಮಾಡಿ ಕೊಂಡಿದ್ದವು. ಅಂತಿಮವಾಗಿ 336 ತಂಡಗಳು ಆಡಿವೆ. ಇಷ್ಟು ತಂಡಗಳು ಫೀಲ್ಡ್ ಹಾಕಿ ಕೂಟದಲ್ಲಿ ಹಿಂದೆಂದೂ ಆಡಿರಲಿಲ್ಲ ಎಂದು ಸಂಘಟಕರು ಹೇಳಿದ್ದಾರೆ.
Related Articles
Advertisement
ಹಿನ್ನೆಲೆಯೇನು?1997ರಲ್ಲಿ ಆರಂಭವಾದ ಕೊಡವ ಕಪ್ ಕೊಡಗಿನ ವಿವಿಧ ಕುಟುಂಬಗಳ ನಡುವೆ ನಡೆಯುತ್ತದೆ. ಈ ಭಾಗದಲ್ಲಿ ಹಾಕಿ ಅತ್ಯಂತ ಜನಪ್ರಿಯ ಕ್ರೀಡೆ. ಖ್ಯಾತನಾಮ ಹಾಕಿ ತಾರೆಯರು ಇಲ್ಲಿಂದ ಹುಟ್ಟಿಕೊಂಡಿದ್ದಾರೆ. ಪಂದಂಡ ಕುಟ್ಟಪ್ಪ ಮತ್ತು ಕಾಶಿ ಪೊನ್ನಪ್ಪ ಅವರೇ ಈ ಕೂಟ ಆರಂಭಿಸಲು ಕಾರಣರು.