Advertisement

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

06:17 PM May 19, 2024 | Team Udayavani |

ಕುಂದಾಪುರ : ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೇ 16 ರ ರಾತ್ರಿ ಪತ್ತೆಯಾಗಿದ್ದು, ಆ ಮೃತದೇಹದೊಂದಿಗೆ 72 ಗಂಟೆಗಳ ಕಾಲ ಕಳೆದು ಅನ್ನ, ನೀರಿಲ್ಲದೆ ಅಸ್ವಸ್ಥಗೊಂಡಿದ್ದ ಪುತ್ರಿ ಪ್ರಗತಿ (32) ಸಹ ಸಾವನ್ನಪ್ಪಿದ್ದಾರೆ.

Advertisement

ಮನೆಯಲ್ಲಿ 3 ದಿನಗಳ ಕಾಲ ತಾಯಿಯ ಮೃತದೇಹದೊಂದಿಗೆ ಅಸ್ವಸ್ಥಗೊಂಡಿದ್ದ ಸ್ಥಿತಿಯಲ್ಲಿ ಮನೆಯಲ್ಲಿ ಬಿದ್ದಿದ್ದ ಪ್ರಗತಿಯನ್ನು ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಮನೆಯ ಬಾಗಿಲು ಒಡೆದು, ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಾಗಿಸಿತ್ತು. ಅಲ್ಲಿ ಚಿಕಿತ್ಸೆಗೂ ಸ್ಪಂದಿಸುತ್ತಿದ್ದು, ಆದರೆ ಶನಿವಾರ ವಿಪರೀತ ಮಧುಮೇಹ ಉಂಟಾಗಿ, ಹೃದಯಾಘಾತದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಇವರ ಮೂಲ ಮನೆಯಾದ ಹೆಂಗವಳ್ಳಿಯಲ್ಲಿ ತಾಯಿ ಅಂತ್ಯಸಂಸ್ಕಾರ ಮಾಡಿದ ಪಕ್ಕದಲ್ಲಿಯೇ ಮಗಳ ಅಂತ್ಯಸಂಸ್ಕಾರವನ್ನು ಸಂಬಂಧಿಕರು ನೆರವೇರಿಸಿದರು.
ಈಕೆ ಚಿಕ್ಕಂದಿನಿಂದಲೇ ಬುದ್ಧಿಮಾಂಧ್ಯರಾಗಿದ್ದು, ಇತ್ತೀಚೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸಲಾಗಿತ್ತು.

ಅನಾರೋಗ್ಯದಿಂದ ಇದ್ದರೂ, ತಾಯಿಯೇ ಈಕೆಗೆ ಆಧಾರವಾಗಿದ್ದರು. ತಾಯಿ ಕುಸಿದು ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದರೆ, ಪುತ್ರಿಯೂ ತಾಯಿಯನ್ನೇ ಹಿಂಬಾಲಿಸಿ, ಸಾವನ್ನಪ್ಪಿರುವುದು ಮಾತ್ರ ದುರಂತ.

Advertisement

Udayavani is now on Telegram. Click here to join our channel and stay updated with the latest news.

Next