Advertisement
ಪ್ರಸ್ತುತ ಇರುವ ನಿಲ್ದಾಣದಲ್ಲಿ ವಿವಿಧ ಮೂಲ ಸೌಕರ್ಯಗಳ ಕೊರತೆ ಎದುರಾಗಿದ್ದು ಶೀಘ್ರ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾ.ಪಂ. ಆದ್ಯತೆ ನೀಡಬೇಕಾಗಿದೆ. ಆ ಮೂಲಕ ಸಾರ್ವಜನಿಕರ ಬೇಡಿಕೆ ಈಡೇರಿಸುವಲ್ಲಿ ಪ್ರಯತ್ನಿಸಬೇಕಾಗಿದೆ.
ಮಳೆಗಾಲ ಮತ್ತು ಬೇಸಗೆಯಲ್ಲಿ ಬಸ್‌ಗೆ ಕಾಯಲು ಸೂಕ್ತ ತಂಗುದಾಣ ಇಲ್ಲದಿರುವುದರಿಂದ, ಜನರು ಸಮೀಪದ ಅಂಗಡಿ ಮುಂಗಟ್ಟುಗಳನ್ನು ಆಶ್ರಯಿಸಬೇಕಾಗಿದೆ. ದೂರದ ಗ್ರಾಮಗಳಿಂದ ವ್ಯವಹಾರ, ಇನ್ನಿತರ ಕಾರ್ಯಕ್ಕಾಗಿ ಆಗಮಿಸುವ ಜನರ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ತಾಸುಗಟ್ಟಲೆ ಬಸ್ಸಿಗಾಗಿ ಕಾದು ಹೈರಾಣಾಗುವ ಇಲ್ಲಿನ ಪರಿಸ್ಥಿತಿ ದುರವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕುಂದಾಪುರ ತಾಲೂಕಿನ ಪ್ರಮುಖ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರವಾಗಿ ಕೋಟೇಶ್ವರ ಗುರುತಿಸಿಕೊಂಡಿದೆಯಾದರೂ ಬಸ್ಸು ತಂಗುದಾಣದ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ. ವಾಹನ ಸಂಚಾರ ಮತ್ತು ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಕಂಡುಬರುತ್ತಿರುವುದು ಸರ್ವೆಸಾಮಾನ್ಯವಾಗಿದೆ.
Related Articles
Advertisement
ಸೂಕ್ತ ವ್ಯವಸ್ಥೆಗೆ ಕ್ರಮಸರಕಾರಿ ಸ್ವಾಮ್ಯದ ವಿಶಾಲ ಜಾಗಕ್ಕಾಗಿ ಪ್ರಯತ್ನಿಸುತ್ತಿದ್ದು ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರಲ್ಲಿ ಗ್ರಾ.ಪಂ. ಬದ್ಧವಾಗಿದೆ. ಇರುವ ವ್ಯವಸ್ಥೆಯನ್ನು ಒಂದಿಷ್ಟು ಸುಧಾರಣೆ ಮಾಡಿ ಬಸ್ಸುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
– ಜಾನಕಿ ಬಿಲ್ಲವ, ಅಧ್ಯಕ್ಷರು, ಗ್ರಾ.ಪಂ., ಕೋಟೇಶ್ವರ ಸೌಕರ್ಯ ಒದಗಿಸಿ
ನಗರಸಭೆಯಾಗಿ ರೂಪುಗೊಳ್ಳಲಿರುವ ಕೋಟೇಶ್ವರ ಪೇಟೆಯಲ್ಲಿ ಸಕಲ ಸೌಕರ್ಯ ಹೊಂದಿರುವ ಬಸ್ಸು ನಿಲ್ದಾಣ ಹಾಗೂ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ.
– ಸುಬ್ರಹ್ಮಣ್ಯ ಶೆಟ್ಟಿಗಾರ್, ಗ್ರಾಮಸ್ಥರು