Advertisement

Kundapura: ಕಸ್ತೂರಿ ಆತಂಕ; ಕೇಂದ್ರದ ಗಮನಕ್ಕೆ ತರುವೆ

11:12 PM Oct 15, 2024 | Team Udayavani |

ಕುಂದಾಪುರ/ಸಿದ್ದಾಪುರ: ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಿಗೆ ಕಸ್ತೂರಿ ರಂಗನ್‌ ಆತಂಕ ಶುರುವಾಗಿದ್ದು, ಈ ಬಗ್ಗೆ ಜನರ ಆತಂಕ, ಅಹವಾಲುಗಳನ್ನು ಸಂಸದನಾಗಿ ಕೇಂದ್ರದ ಗಮನಕ್ಕೆ ತರುವಂತಹ ಕಾರ್ಯ ಮಾಡಲಾಗುವುದು. ಇದರ ಜತೆಗೆ ನೈಸರ್ಗಿಕ ವಿಕೋಪಗಳನ್ನು ತಡೆಯಬೇಕಾದರೆ ಕಾಡು, ಪ್ರಕೃತಿ ಉಳಿಯಬೇಕು. ಜನರ ಜೀವನವೂ ಉಳಿಯಬೇಕು. ಕಾಡು ಉಳಿದಿದ್ದರೆ ಅದು ಅಲ್ಲಿ ನೆಲೆಸಿರುವ ಜನರಿಂದ ಮಾತ್ರ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಅವರು ಸೋಮವಾರ ತ್ರಾಸಿ, ಕಂಬದಕೋಣೆಯಲ್ಲಿ ವಿಧಾನ ಪರಿಷತ್‌ ಚುನಾವಣೆ ಸಲುವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು ಅವರ ಪರ ಬೈಂದೂರು ಬಿಜೆಪಿ ಮಂಡಲದ ನೇತೃತ್ವವದಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗ್ರಾ.ಪಂ.ನ ನೈಜ ಅಭಿವೃದ್ಧಿಗೆ ಆರ್ಥಿಕ ಶಕ್ತಿ ಕೊಟ್ಟಿರುವುದು ನರೇಂದ್ರ ಮೋದಿಯವರು. ಅವರ ನೇತೃತ್ವದಲ್ಲಿ ಗ್ರಾಮೀಣ ವಿಕಾಸ ಆಗುತ್ತಿದೆ. ಅದಕ್ಕೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯ ನಾವು ಮಾಡಬೇಕಿದೆ. ಪಕ್ಷವು ಈ ಪರಿಷತ್‌ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ, ಪಕ್ಷಕ್ಕೆ ದುಡಿದವರನ್ನು ಗುರುತಿಸಿ ಅಭ್ಯರ್ಥಿಯಾಗಿಸಿದೆ. ಅವರನ್ನು ನಾವೆಲ್ಲರೂ ಗೆಲ್ಲಿಸುವ ಕಾರ್ಯ ಮಾಡುವ ಎಂದವರು ಮನವಿ ಮಾಡಿದರು.

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು ಮಾತನಾಡಿದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಪಕ್ಷದ ಪ್ರಮುಖರಾದ ಉದಯ ಕುಮಾರ್‌ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜೇಶ್‌ ಕಾವೇರಿ, ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

ನೇರಳಕಟ್ಟೆಯಲ್ಲಿ ಸಭೆ
ನೇರಳಕಟ್ಟೆಯ ರಾಜೇಂದ್ರ ಕುಮಾರ್‌ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌, ಅಭ್ಯರ್ಥಿ ಕಿಶೋರ್‌ ಕುಮಾರ್‌, ಪ್ರಮುಖರಾದ ರಾಜೇಶ್‌ ಕಾವೇರಿ, ಸತೀಶ್‌ ಹಡಾಳಿ, ದೀಪಕ್‌ ಶೆಟ್ಟಿ ಮತ್ತಿತರರಿದ್ದರು.

ಸಿದ್ದಾಪುರದಲ್ಲಿ ಸಭೆ
ಸಿದ್ದಾಪುರ ಶ್ರೀರಂಗನಾಥ ಸಭಾ ಭವನದಲ್ಲಿ ಸಿದ್ದಾಪುರ ಬಿಜೆಪಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸ್ಥಳೀಯಾಡಳಿತ ಸದಸ್ಯರ ಪ್ರಚಾರ ಸಭೆಯಲ್ಲಿ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಅಭ್ಯರ್ಥಿ ಕಿಶೋರ್‌ಕುಮಾರ್‌ ಪುತ್ತೂರು, ಶಾಸಕರಾದ ಗುರುರಾಜ ಗಂಟಿಹೊಳೆ, ಕಿರಣ್‌ಕುಮಾರ ಕೊಡ್ಗಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಚುನಾವಣಾ ಉಸ್ತುವಾರಿ ಅರುಣ್‌, ಹಿಂದುಳಿದ ವರ್ಗದ ವಿಟ್ಠಲ ಪೂಜಾರಿ, ಯುವಮೊರ್ಚದ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

ಬೈಂದೂರು ಮಂಡಲದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ ಶೆಟ್ಟಿ ಕಲ್ಗದ್ದೆ ನಿರೂಪಿಸಿದರು. ಸಿದ್ದಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್‌ಕುಮಾರ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next