Advertisement

Kundapura: ದೋಣಿ ಮಗುಚಿ ಮೀನುಗಾರ ಸಾವು; ಪ್ರಕರಣ ದಾಖಲು

07:27 PM Oct 30, 2024 | Team Udayavani |

ಕುಂದಾಪುರ: ಅರಬ್ಬಿ ಸಮುದ್ರದಲ್ಲಿ ಸಣ್ಣ ಕೈರಂಪಣಿ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದು, ಮೀನುಗಾರರೊಬ್ಬರು ಸಾವನ್ನಪ್ಪಿದ ಘಟನೆ ಬುಧವಾರ ಬೀಜಾಡಿ ಸಮೀಪ ಸಂಭವಿಸಿದೆ.

Advertisement

ಬೀಜಾಡಿ ಗ್ರಾಮದ ಚಾತ್ರಬೆಟ್ಟು ನಿವಾಸಿ ಸಂಜೀವ (55) ಸಾವನ್ನಪ್ಪಿದ ಮೀನುಗಾರ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇವರು ಅ.30ರ ಬೆಳಗ್ಗೆ 7.15 ರ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ಬೀಜಾಡಿ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದು, ಸಂಜೀವ ಅವರು ನೀರಲ್ಲಿ ಮುಳುಗಿದ್ದು, ಜತೆಯಲ್ಲಿದ್ದವರು ಮೇಲಕ್ಕೆತ್ತಿ, ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಸಹೋದರ ರಾಜೀವ ಅವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next