Advertisement

Kundapura: ಬೆಳೆ ವಿಮೆ: ಸಿಕ್ಕವರಿಗೆ ಬಂಪರ್‌, ಮಿಕ್ಕವರಿಗೆ ನಿರಾಧಾರ್‌

05:56 PM Dec 05, 2023 | Team Udayavani |

ಕುಂದಾಪುರ: ಹವಾಮಾನ ಆಧಾರಿತ ಬೆಳೆ ವಿಮೆ ಬಾಬ್ತು ಕೇಂದ್ರ ಸರಕಾರದ ಯೋಜನೆಯಲ್ಲಿ ವಿಮಾ ಕಂಪೆನಿಗಳ ಮೂಲಕ ತೋಟಗಾರಿಕೆ ಇಲಾಖೆ ರೈತರ ಬ್ಯಾಂಕ್‌ ಖಾತೆಗಳಿಗೆ ವಿಮಾ ಹಣ ಹಾಕಿದೆ. ಸಿಕ್ಕವರಿಗೆ ಬಂಪರ್‌, ಮಿಕ್ಕವರಿಗೆ ನಿರಾಧಾರ್‌ ಎಂಬಂತೆ ಮಂಜೂರಾದ ರೈತರಿಗೆ ವಿಮೆ ಹಣ ಬರೋಬ್ಬರಿ ದೊರೆತಿದೆ. ಇತರರು ಇನ್ನೂ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡದ ಕಾರಣ ಹಣ ಇಲಾಖೆಯಲ್ಲೇ ಬಾಕಿಯಾಗಿದೆ. ಕುಂದಾಪುರಕ್ಕೆ 10.2 ಕೋ.ರೂ., ಬೈಂದೂರಿಗೆ 4.3 ಕೋ. ರೂ., ಭಾಗಶಃ ಹೆಬ್ರಿಗೆ 35 ಲಕ್ಷ ರೂ. ಹಣ ಬಂದಿದೆ.

Advertisement

40 ಗ್ರಾಮಗಳಿಗೆ 14.91 ಕೋ.ರೂ. 2022-23 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೆಬ್ರಿ ತಾಲೂಕಿನ 2, ಬೈಂದೂರು ತಾಲೂಕಿನ 12, ಕುಂದಾಪುರ ತಾಲೂಕಿನ 26 ಗ್ರಾಮಗಳಿಗೆ ವಿಮಾ ಹಣ ಮಂಜೂರಾಗಿದೆ.

ಬೈಂದೂರು ತಾಲೂಕಿನ 12 ಗ್ರಾಮಗಳಲ್ಲಿ ಅಡಿಕೆ ಬೆಳೆಯ 1,064 ಪ್ರಕರಣಗಳಿಗೆ 3.80ಕೋ.ರೂ., ಕಾಳುಮೆಣಸು ಬೆಳೆಯ
423 ಪ್ರಕರಣಗಳಿಗೆ 49.37 ಲಕ್ಷ ರೂ., ಕುಂದಾಪುರದ 26 ಗ್ರಾಮಗಳಲ್ಲಿ ಅಡಿಕೆ ಬೆಳೆಯ 3,322 ಪ್ರಕರಣಗಳಿಗೆ 9.15 ಕೋ.ರೂ., ಕಾಳುಮೆಣಸು ಬೆಳೆಯ 833 ಪ್ರಕರಣಗಳಿಗೆ 1.10 ಕೋ.ರೂ., ಹೆಬ್ರಿಯ ಬೆಳ್ವೆ ಮತ್ತು ಮಡಾಮಕ್ಕಿ ಗ್ರಾಮಗಳಲ್ಲಿ ಅಡಿಕೆ ಬೆಳೆಯ 83 ಪ್ರಕರಣಗಳಿಗೆ 34.49 ಲಕ್ಷ ರೂ., ಕಾಳುಮೆಣಸು ಬೆಳೆಯ 7 ಪ್ರಕರಣಗಳಿಗೆ 1.44 ಲಕ್ಷ ರೂ. ವಿಮೆ ಹಣ ದೊರೆತಿದೆ.

ನಿರಾಧಾರ್‌ 
ಸಾಕಷ್ಟು ಬಾರಿ ಮಾಹಿತಿ ನೀಡಿಯೂ, ರೈತರ ನಿರಾಸಕ್ತಿ, ಮಾಹಿತಿ ಕೊರತೆಯ ಪರಿಣಾಮ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಆಗಿಲ್ಲ. ಇಂತಹ ತಾಂತ್ರಿಕ ಸಮಸ್ಯೆಯಿಂದಾಗಿ ಒಟ್ಟು 82 ಪ್ರಕರಣಗಳಲ್ಲಿ, 28.92 ಲಕ್ಷ ರೂ.ಗಳನ್ನು ರೈತರಿಗೆ ಪಾವತಿಸಲು ಸಾಧ್ಯವಾಗಿಲ್ಲ.

ಗ್ರಾಮವಾರು ಬೈಂದೂರು ತಾಲೂಕಿನ ಬಿಜೂರು 3.24 ಲಕ್ಷ ರೂ., ಬೈಂದೂರು ಪ.ಪಂ. 5.56 ಲಕ್ಷ ರೂ., ಗೋಳಿಹೊಳೆ 1.36 ಲಕ್ಷ ರೂ., ಹಳ್ಳಿಹೊಳೆ 2.6 ಕೋ.ರೂ., ಹೇರೂರು 9.67 ಲಕ್ಷ ರೂ., ಜಡ್ಕಲ್‌ 1.05 ಕೋ.ರೂ., ಕಾಲೊ¤àಡು 10.5 ಲಕ್ಷ ರೂ., ಕಂಬದಕೋಣೆ 2.19ಲಕ್ಷ ರೂ., ಕಿರಿಮಂಜೇಶ್ವರ 39 ಸಾವಿರ ರೂ., ಕೊಲ್ಲೂರು 21.91 ಲಕ್ಷ ರೂ., ನಾಡ 10.86ಲಕ್ಷ ರೂ., ಉಪ್ಪುಂದ 21 ಸಾವಿರ ರೂ. ಮಂಜೂರಾಗಿದೆ.

Advertisement

ಹೆಬ್ರಿ ತಾಲೂಕಿನ ಬೆಳ್ವೆ 17.91 ಲಕ್ಷ ರೂ., ಮಡಾಮಕ್ಕಿ 18.02 ಲಕ್ಷ ರೂ. ಮಂಜೂರಾಗಿದೆ. ಕುಂದಾಪುರ ತಾಲೂಕಿನ ಆಜ್ರಿ 3.41 ಕೋ.ರೂ., ಆಲೂರು 13.48 ಲಕ್ಷ ರೂ., ಅಮಾಸೆಬೈಲು 1.65 ಕೋ.ರೂ., ಅಂಪಾರು 52.25 ಲಕ್ಷ ರೂ.,ಬಸ್ರೂರು 66 ಸಾವಿರ ರೂ., ಬೇಳೂರು 58 ಸಾವಿರ ರೂ., ಚಿತ್ತೂರು 5.25 ಲಕ್ಷ ರೂ., ಗುಲ್ವಾಡಿ 7.5 ಲಕ್ಷ ರೂ., ಹಕ್ಲಾಡಿ 1.4 ಲಕ್ಷ ರೂ.,ಹಾಲಾಡಿ 11.82 ಲಕ್ಷ ರೂ., ಹಟ್ಟಿಯಂಗಡಿ 41 ಸಾವಿರ ರೂ., ಹೆಂಗವಳ್ಳಿ 23.07 ಲಕ್ಷ ರೂ., ಹೊಂಬಾಡಿ-ಮಂಡಾಡಿ 6.62 ಲಕ್ಷ ರೂ., ಹೊಸಂಗಡಿ 19.21 ಲಕ್ಷ ರೂ., ಇಡೂರು ಕುಂಜ್ಞಾಡಿ 7.91 ಲಕ್ಷ ರೂ., ಕರ್ಕುಂಜೆ 2.52 ಲಕ್ಷ ರೂ., ಕಾವ್ರಾಡಿ 4.16 ಲಕ್ಷ ರೂ., ಕೆದೂರು 3.5 ಲಕ್ಷ ರೂ.,
ಕೆರಾಡಿ 20.19 ಲಕ್ಷ ರೂ., ಕೊರ್ಗಿ 87 ಸಾವಿರ ರೂ., ಮೊಳಹಳ್ಳಿ 2.35 ಲಕ್ಷ ರೂ., ಶಂಕರನಾರಾಯಣ 69.73 ಲಕ್ಷ ರೂ., ಸಿದ್ದಾಪುರ 46.17 ಲಕ್ಷ ರೂ., ಉಳ್ಳೂರು 74- 1 ಕೋ.ರೂ., ವಂಡ್ಸೆ 1.27 ಲಕ್ಷ ರೂ., ಯಡಮೊಗೆ 1.43 ಕೋ.ರೂ. ಪಾವತಿಯಾಗಿದೆ.

ಬೆಳೆವಾರು
ಒಟ್ಟು ಅಡಿಕೆ ಬೆಳೆಯ 4,469 ಪ್ರಕರಣಗಳಿಗೆ 11.30ಕೋ. ರೂ., ಕಾಳುಮೆಣಸು ಬೆಳೆಯ 1,262 ಪ್ರಕರಣಗಳಿಗೆ 1.61ಕೋ.ರೂ. ಸೇರಿ ಒಟ್ಟು 5,731 ಪ್ರಕರಣಗಳಿಗೆ 14.91 ಕೋ.ರೂ. ರೈತರ ಖಾತೆಗೆ ನೇರ ಪಾವತಿಯಾಗಿದೆ. ಬೈಂದೂರಿನ 4, ಕುಂದಾಪುರದ 77 ಮಂದಿಗೆ ಹಣ ಪಾವತಿಯಾಗದೇ ಬಾಕಿಯಾಗಿದೆ.

ಆಧಾರ್‌ ಲಿಂಕ್‌  ಮಾಡಿದರೆ ದೊರೆಯುತ್ತದೆ
ಕುಂದಾಪುರ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 5,731 ಪ್ರಕರಣಗಳಿಗೆ 14.91 ಕೋ. ರೂ.ಗಳನ್ನು ರೈತರ ಖಾತೆಗೆ ನೇರ
ಪಾವತಿಸಲಾಗಿದೆ. 82 ಮಂದಿಗೆ ಪಾವತಿ ಬಾಕಿ ಇದೆ. ಆಧಾರ್‌ ಜೋಡಣೆಯ ತಾಂತ್ರಿಕ ಸಮಸ್ಯೆಗಳನ್ನು ವಿಮಾ ಕಂತನ್ನು
ಪಾವತಿಸಿದ ಬ್ಯಾಂಕ್‌ಗೆ ಭೇಟಿ ನೀಡಿ ಸರಿ ಪಡಿಸಿಕೊಳ್ಳಬೇಕು. ಬಾಕಿಯಾದ ಪಾವತಿ ರೈತರಿಗೆ ದೊರೆಯುತ್ತದೆ.
ಕೆ.ಜೆ.ನಿಧೀಶ್‌ ಹೊಳ್ಳ, ಸಹಾಯಕ
ನಿರ್ದೇಶಕ, ತೋಟಗಾರಿಕೆ ಇಲಾಖೆ, ಕುಂದಾಪುರ

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next