Advertisement
37 ಸದಸ್ಯರಿದ್ದರುಕುಂದಾಪುರ ತಾಲೂಕು ಪಂಚಾಯತ್‌ನಲ್ಲಿ 2015ರಲ್ಲಿ ಚುನಾವಣೆ ನಡೆದಾಗ 37 ಸದಸ್ಯರು ಆಯ್ಕೆಯಾಗಿದ್ದರು. ಬೈಂದೂರು ಹಾಗೂ ಹೆಬ್ರಿ ಪ್ರತ್ಯೇಕ ತಾಲೂಕಾಗಿ, ಹೊಸದಾಗಿ ತಾ.ಪಂ. ರಚನೆಯಾದ ಬಳಿಕ ಸದಸ್ಯರ ವಿಂಗಡಣೆಯಾಯಿತು. ಅದರಂತೆ ಕುಂದಾಪುರ 22, ಬೈಂದೂರು 14, ಹೆಬ್ರಿಗೆ 1 ಸದಸ್ಯರು ಹಂಚಿಹೋದರು.
ಉಡುಪಿ ಜಿಲ್ಲೆಯಲ್ಲಿ ತಾ.ಪಂ.ಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಒಟ್ಟು ಜನಸಂಖ್ಯೆ ಲೆಕ್ಕಾವಾರು ಸದಸ್ಯ ಸ್ಥಾನಗಳ ಹಂಚಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಸದಸ್ಯರ ಸಂಖ್ಯೆಯಲ್ಲಿ ಕಡಿತವಾಗಲಿದ್ದು ಹೊಸ ತಾ.ಪಂ.ಗಳ ಸದಸ್ಯ ಬಲದಲ್ಲಿ ವ್ಯತ್ಯಯವಾಗಲಿದೆ. ಕುಂದಾಪುರ ತಾ.ಪಂ.ನಲ್ಲಿ ಪ್ರಸ್ತುತ 22 ಸದಸ್ಯ ಸ್ಥಾನಗಳಿದ್ದು ಹೊಸದಾಗಿ ವಿಂಗಡಣೆಯಾದ ಬಳಿಕ 19 ಸ್ಥಾನಗಳಷ್ಟೇ ದೊರೆಯಲಿವೆ. ಬೈಂದೂರಿನಲ್ಲಿ 14 ಸ್ಥಾನಗಳಿದ್ದು 9 ಸ್ಥಾನಗಳಷ್ಟೇ ದೊರೆಯಲಿದೆ. ಹೆಬ್ರಿಗೆ 11 ಸದಸ್ಯರು ಇರಲಿದ್ದಾರೆ. ಕುಂದಾಪುರ ತಾ.ಪಂ. ಆಗಲೂ ಈಗಲೂ ಮುಂದೆಯೂ ಜಿಲ್ಲೆಯ ಅತಿದೊಡ್ಡ ತಾ.ಪಂ. ಆಗಿರಲಿದೆ. ಫೆ.20ರ ಒಳಗೆ ಕ್ಷೇತ್ರ ಪುನರ್ವಿಂಗಡಣೆ ಮಾಡಿ ಆಯೋಗಕ್ಕೆ ವರದಿ ನೀಡಬೇಕಿದೆ. ಜಿ.ಪಂ. ಸದಸ್ಯರ ಸಂಖ್ಯೆ 10 ಇದ್ದು ಅದರಲ್ಲಿ ಬದಲಾವಣೆ ಇಲ್ಲ. ಆದರೆ ಹೊಸ ನಿಯಮದಂತೆ ಬೈಂದೂರು ತಾ|ನಲ್ಲಿ 5 ಸದಸ್ಯರ ಬದಲು ಮೂವರು ಇರಲಿದ್ದು ಕುಂದಾಪುರ ತಾ|ನಲ್ಲಿ 7 ಸದಸ್ಯರು ಇರುತ್ತಾರೆ. ರದ್ದು
ಬೈಂದೂರು ಪ.ಪಂ. ಆದ ಕಾರಣ ಆ ಭಾಗದ ತಾ.ಪಂ., ಜಿ.ಪಂ. ಕ್ಷೇತ್ರ ರದ್ದಾಗಲಿದೆ. ಬೈಂದೂರು ಜಿ.ಪಂ. ಕ್ಷೇತ್ರ ರದ್ದಾಗಲಿದೆ. ಬದಲಿಗೆ ಪ್ರತ್ಯೇಕ ಹೆಸರಿನ ಕ್ಷೇತ್ರ ರಚನೆಯಾಗಲಿದ್ದು ಶಿರೂರು, ಕಂಬದಕೋಣೆ ಕ್ಷೇತ್ರಗಳು ಇರಲಿವೆ. ಪಡುವರಿ, ಯಡ್ತರೆ, ಬೈಂದೂರು ತಾ.ಪಂ. ಕ್ಷೇತ್ರಗಳು ರದ್ದಾಗುವ ಸಾಧ್ಯತೆಯಿದೆ. ಉಳಿದಂತೆ ಇನ್ನೆರಡು ಕ್ಷೇತ್ರಗಳು ರದ್ದಾಗಲಿದ್ದು ಯಾವುವು ಎಂದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಕುಂದಾಪುರ ಪುರಸಭೆ ನಗರಸಭೆ ಆಗುವುದಾದರೆ ಅದರ ಸನಿಹದ ಕ್ಷೇತ್ರಗಳು ರದ್ದಾಗುವ ಸಾಧ್ಯತೆಯಿತ್ತು. ಆದರೆ ಪುರಸಭೆ ಮೇಲ್ದರ್ಜೆಗೇರುವ ಕಡತ ಇನ್ನೂ ಪೂರ್ಣಪ್ರಮಾಣದಲ್ಲಿ ತಯಾರಾಗಿಲ್ಲ. ಆದ್ದರಿಂದ ಅದರ ಸುತ್ತಲಿನ ಕ್ಷೇತ್ರಗಳಾದ ಕೋಟೇಶ್ವರ, ಕೋಣಿ ಆತಂಕದಿಂದ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಮೂರು ಕ್ಷೇತ್ರಗಳು ರದ್ದಾಗಲಿದ್ದು ಯಾವೆಲ್ಲ ಕ್ಷೇತ್ರಗಳು ರದ್ದಾಗಲಿವೆ ಎಂಬ ಕುತೂಹಲ ಗರಿಗೆದರಿದೆ. ಜನಸಂಖ್ಯೆ ಆಧಾರಿತವಾಗಿ ವಿಂಗಡಣೆ ನಡೆಯಲಿದೆ.
Related Articles
ಪ್ರಸ್ತುತ ಕುಂದಾಪುರ ತಾ.ಪಂ.ಗೆ ಆಲೂರು, ತ್ರಾಸಿ, ಗಂಗೊಳ್ಳಿ, ವಂಡ್ಸೆ, ಕರ್ಕುಂಜೆ, ಸಿದ್ದಾಪುರ, ಆಜ್ರಿ, ಕಾವ್ರಾಡಿ, ಹೆಮ್ಮಾಡಿ, ತಲ್ಲೂರು, ಶಂಕರನಾರಾಯಣ, ಬಸೂÅರು, ಕೋಣಿ, ಕೋಟೇಶ್ವರ, ಹಂಗಳೂರು, ಬೀಜಾಡಿ, ಕುಂಭಾಶಿ, ಬೇಳೂರು, ಕಾಳಾವರ, ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ, ಅಮಾಸೆಬೈಲು ಕ್ಷೇತ್ರಗಳಿವೆ. ಬೈಂದೂರು ತಾ.ಪಂ.ಗೆ ಶಿರೂರು 1, ಶಿರೂರು 2, ಪಡುವರಿ, ಯಡ್ತರೆ, ಬೈಂದೂರು, ಉಪ್ಪುಂದ, ಬಿಜೂರು, ಕೊಲ್ಲೂರು, ಕಾಲೊ¤àಡು, ಕಂಬದಕೋಣೆ, ಕಿರಿಮಂಜೇಶ್ವರ, ಮರವಂತೆ, ನಾಡಾ, ಹಳ್ಳಿಹೊಳೆ ಕ್ಷೇತ್ರಗಳಿವೆ. ಬೆಳ್ವೆ ಕ್ಷೇತ್ರ ಹೆಬ್ರಿ ತಾ.ಪಂ. ಪಾಲಾಗಿದೆ. ಬೈಂದೂರಿನಲ್ಲಿ ಶಿರೂರು, ಬೈಂದೂರು, ಕಂಬದಕೋಣೆ ಜಿ.ಪಂ. ಕ್ಷೇತ್ರಗಳಿದ್ದು ವಂಡ್ಸೆ, ಸಿದ್ದಾಪುರ, ತ್ರಾಸಿ ಜಿ.ಪಂ.ಕ್ಷೇತ್ರಗಳು ಕುಂದಾಪುರ ಹಾಗೂ ಬೈಂದೂರನ್ನು ಬೆಸೆದಿವೆ. ಕಾವ್ರಾಡಿ, ಹಾಲಾಡಿ, ಕೋಟೇಶ್ವರ, ಬೀಜಾಡಿ ಜಿ.ಪಂ. ಕ್ಷೇತ್ರಗಳು ಕುಂದಾಪುರ ತಾಲೂಕಿನಲ್ಲಿವೆ.
Advertisement
ತಯಾರಾಗಲಿದೆಅಧಿಸೂಚನೆ ಬಂದಿದ್ದು ಅದರಲ್ಲಿ ಸೂಚಿಸಿದ ಮಾರ್ಗಸೂಚಿಯಂತೆ ಕ್ಷೇತ್ರವಾರು ವಿಂಗಡಣೆ ಮಾಡಿ ಚುನಾವಣ ಆಯೋಗಕ್ಕೆ ಕಳುಹಿಸಲಾಗುತ್ತದೆ. ಜಿ.ಪಂ. ಸದಸ್ಯ ಸ್ಥಾನಗಳು ಮೊದಲಿನಷ್ಟೇ ಇರಲಿದ್ದು ತಾ.ಪಂ. ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದೆ.
-ಸದಾಶಿವ ಪ್ರಭು ಅಪರ ಜಿಲ್ಲಾಧಿಕಾರಿ, ಉಡುಪಿ