Advertisement

ಕುಂದಾಪುರ: “ಬೇಟಿ ಬಚಾವೋ-ಬೇಟಿ ಪಡಾವೋ’ಯಕ್ಷಗಾನ ಜಾಗೃತಿ

12:50 AM Jan 23, 2019 | Harsha Rao |

ಕುಂದಾಪುರ: ಬೆಂಗಳೂರಿನ ಯಕ್ಷದೇಗುಲ ತಂಡದಿಂದ ಖಾರ್ವಿಕೇರಿಯ ಸ. ಹಿ. ಪ್ರಾ. ಶಾಲೆಯಲ್ಲಿ “ಬೆೇಟಿ ಬಚಾವೋ, ಬೆೇಟಿ ಪಡಾವೋ’ ಯಕ್ಷಗಾನ ನಡೆಯಿತು.

Advertisement

ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಬೆಂಗಳೂರು, ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯದ ಸಂಗೀತ ಮತ್ತು ನಾಟಕ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನವದೆಹಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರಕಾರ, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ಸರಣಿ‌‌ಯ ಮೊದಲ ಕಾರ್ಯಕ್ರಮ ನಡೆಯಿತು. 

ಅತಿಥಿಯಾಗಿ ಆಗಮಿಸಿದ್ದ ಕಲಾವಿದೆ ಸುಮನಾ ಎನ್‌. ಮಾತನಾಡಿ, ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣ, ವೈದ್ಯಕೀಯ ಸೌಕರ್ಯ ಸಿಗುವಂತೆ ಕಾಳಜಿ ವಹಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆಯನ್ನು ಪ್ರಶ್ನಿಸಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರಂಜನ್‌ ಭಟ್‌ ಮಾತನಾಡಿದರು. 
ವಲಯ ಮೇಲ್ವಿಚಾರಕಿ ರಾಜೇಶ್ವರಿ, ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾನಂದ ನಾಯಕ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನಕರ ಪಟೇಲ್‌, ಮುಖ್ಯ ಶಿಕ್ಷಕ ರಾಘವೇಂದ್ರ ಉಪಾಧ್ಯ, ಯಕ್ಷದೇಗುಲ ಸಂಚಾಲಕ ಕೋಟ ಸುದರ್ಶನ ಉರಾಳ ಮತ್ತು ಭಾಗವತ ಲಂಬೋದರ ಹೆಗಡೆ ಉಪಸ್ಥಿತರಿದ್ದರು. 

ಕಲಾವಿದರಾಗಿ ಕೋಟ ಸುದರ್ಶನ ಉರಾಳ, ಲಂಬೋದರ ಹೆಗಡೆ, ದೇವರಾಜ ದಾಸ್‌, ಗಣಪತಿ ಭಟ್‌, ಮಾಧವ, ತಮ್ಮಣ್ಣ ಗಾಂವ್ಕರ್‌, ಗಣೇಶ್‌ ಉಪ್ಪುಂದ, ನರಸಿಂಹ ತುಂಗ, ವಿಶ್ವನಾಥ ಶೆಟ್ಟಿ, ಉದಯ ಭೋವಿ, ಪ್ರಶಾಂತ ಹೆಗಡೆ, ಮಂಜುನಾಥ ಭಟ್‌ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next