Advertisement
ವಿಸ್ತರಣೆಗೊಂಡ ಕಾಚಿಗುಡ ರೇಣಿಗುಂಟ ತಿರುಪತಿ ಮಂಗಳೂರು ರೈಲಿನ ಮೊದಲ ಓಡಾಟವು ಶನಿವಾರ ಆರಂಭಗೊಳ್ಳಲಿದೆ.ಈ ರೈಲು ಕೊಯಮತ್ತೂರು ಮೂಲಕವೂ ಓಡಲಿರುವುದರಿಂದ ಸದ್ಗುರು ಜಗ್ಗಿ ವಾಸುದೇವರ ಈಶ ಯೋಗ ಕೇಂದ್ರ ಮತ್ತು ಆದಿ ಯೋಗಿ ದರ್ಶನಕ್ಕೂ ಸಹಾಯವಾಗಲಿದೆ.
ಮುರುಡೇಶ್ವರದಿಂದ ಬುಧವಾರ, ಶನಿವಾರ, ತಿರುಪತಿಯಿಂದ ಮಂಗಳವಾರ, ಶುಕ್ರವಾರ ಎಂದು ವಾರಕ್ಕೆರಡು ದಿನ ಓಡಲಿದೆ. ಅ.12ರ ಶನಿವಾರ ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲು 3.54ಕ್ಕೆ ಬೈಂದೂರು, ಕುಂದಾಪುರಕ್ಕೆ 4. 40, ಬಾರಕೂರು 5, ಉಡುಪಿ 5.20ಕ್ಕೆ, ಮಂಗಳೂರು 7.55ಕ್ಕೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.05 ಗಂಟೆಗೆ ಹೊರಟ ರೈಲು ತಿರುಪತಿಗೆ ರವಿವಾರ ಬೆಳಗ್ಗೆ 11.30ಕ್ಕೆ ರೇಣಿಗುಂಟ (ತಿರುಪತಿಗೆ )ಹಾಗೂ ಹೈದರಾಬಾದ್‌ನ ಕಾಚಿಗುಡಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ.
Related Articles
Advertisement
ಸಂಸದರ ಮೂಲಕ ಈ ಭಾಗದ ಪ್ರಯಾಣಿಕರ ಬೇಡಿಕೆಯಂತೆ ರೈಲು ವಿಸ್ತರಣೆಯಾಗಿದ್ದು, ನೀತಿ ಸಂಹಿತೆ ಮುಗಿದ ಬಳಿಕ ರೈಲ್ವೇ ಖಾತೆ ಸಹಾಯಕ ಸಚಿವ ಸೋಮಣ್ಣ ಅವರ ಜತೆ ಕುಂದಾಪುರ ನಿಲ್ದಾಣದಲ್ಲಿ ದೊಡ್ಡ ಸಭೆ ನಡೆಯಲಿದ್ದು, ಅಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕುಂದಾಪುರ ರೈಲು ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಅವರು ತಿಳಿಸಿದ್ದಾರೆ.
ದರ್ಶನಕ್ಕೆ ಅನುಕೂಲಕುಂದಾಪುರದಿಂದ ಸಂಜೆ 4.45ರ ಸುಮಾರಿಗೆ ರೈಲು ಹತ್ತಿದರೆ ಮರುದಿನ ಬೆಳಗ್ಗೆ 11.45ಕ್ಕೆ ರೇಣಿಗುಂಟ ನಿಲ್ದಾಣ ತಲುಪಲಿದೆ. ಅಲ್ಲಿ ರೈಲಿಳಿದು ಸಂಜೆಯ ದರ್ಶನ ಅಥವಾ ಮರುದಿನ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದರೆ, ಮರು ದಿನ ಸಂಜೆ 4.45ಕ್ಕೆ ಇದೇ ರೈಲು ರೇಣಿಗುಂಟಕ್ಕೆ ಬಂದು ಉಡುಪಿ ಕಡೆ ಹೊರಡಲಿದೆ. ರೇಣಿಗುಂಟದಿಂದ ತಿರುಪತಿ ಕೇವಲ 9 ಕಿ.ಮೀ. ದೂರದಲ್ಲಿದೆ. ವಿವಿಧೆಡೆ ಸ್ವಾಗತ
ಈ ರೈಲಿನ ಮೊದಲ ಓಡಾಟವನ್ನು ಸ್ವಾಗತಿಸಲು ಕರಾವಳಿಯ ವಿವಿಧ ನಿಲ್ದಾಣಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ರೈಲಿಗಾಗಿ ಸಂಸದರ ಮೂಲಕ ನಿರಂತರ ಹೋರಾಟ ಸಂಘಟಿಸಿದ ಕುಂದಾಪುರ ರೈಲು ಹಿತರಕ್ಷಣ ಸಮಿತಿಯೂ ಶನಿವಾರ 4 ಗಂಟೆಗೆ ರೈಲನ್ನು ಸ್ವಾಗತಿಸಲು ಕುಂದಾಪುರ ನಿಲ್ದಾಣದಲ್ಲಿ ಸಿದ್ಧತೆ ಮಾಡಿಕೊಂಡಿದೆ.